ಭಾರತದಲ್ಲೇ ತಯಾರಾಗಲಿವೆ 83 ತೇಜಸ್ ಯುದ್ಧವಿಮಾನ, 15 ಹೆಲಿಕಾಪ್ಟರ್‍ಗಳು ಮತ್ತು 464 ಯುದ್ಧ ಟ್ಯಾಂಕರ್‍ಗಳು

ಈ ಸುದ್ದಿಯನ್ನು ಶೇರ್ ಮಾಡಿ

Helica

ನವದೆಹಲಿ, ನ.8- ಯುದ್ಧ ಪರಿಕರಗಳನ್ನು ಭಾರತದಲ್ಲೇ ನಿರ್ಮಾಣ ಮಾಡಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ 83 ತೇಜಸ್ ಯುದ್ಧ ವಿಮಾನ, 15 ಹೆಲಿಕಾಪ್ಟರ್‍ಗಳು ಮತ್ತು 464 ಯುದ್ಧ ಟ್ಯಾಂಕರ್‍ಗಳನ್ನು ಭಾರತದಲ್ಲೇ ನಿರ್ಮಿಸುವ ಮಹತ್ವದ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ ಸಂಸ್ಥೆ ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವಕ ಕ್ರಮಗಳನ್ನು ಕೈಗೊಂಡಿದ್ದು, ಇದೇ ಕಾರಣಕ್ಕೆ ಇಲ್ಲೇ 83 ತೇಜಸ್ ಯುದ್ಧ ವಿಮಾನ, 15 ಹೆಲಿಕಾಪ್ಟರ್ ಗಳು ಮತ್ತು 464 ಟಿ-90ಯುದ್ಧ ಟ್ಯಾಂಕರ್‍ಗಳನ್ನು ನಿರ್ಮಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಹೆಚ್  ಎಎಲ್ ಈಗಾಗಲೇ 40 ವಿಮಾನಗಳನ್ನು ನಿರ್ಮಾಣ ಮಾಡುತ್ತಿದ್ದು ಇದೇ ವರ್ಷಾಂತ್ಯದಲ್ಲಿ ಇವುಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಇದರ ಜೊತೆಗೇ ಮತ್ತಷ್ಟು ಯುದ್ಧ ವಿಮಾನಗಳನ್ನು ನಿರ್ಮಾಣ ಮಾಡುವ ಹೊಣೆಯನ್ನು ಹೆಚï ಎಎಲï ಗೆ ನೀಡಲಾಗುತ್ತಿದೆ.

ಇಂದಿನ ಹೊಸ ಒಪ್ಪಂದದಂತೆ ಹೆಚ್‍ಎಎಲ್ ಒಟ್ಟು 50 ಸಾವಿರ ಕೋಟಿ ಮೌಲ್ಯದ ಯುದ್ಧ ವಿಮಾನಗಳನ್ನು ನಿರ್ಮಾಣತ್ತಿದ್ದು, ಉಳಿದಂತೆ ಭಾರತೀಯ ಸೇನೆ ಹಾಗೂ ವಾಯುಸೇನೆಗಳ ವತಿಯಿಂದ 2, 911 ಕೋಟಿ ವೆಚ್ಚದಲ್ಲಿ ಹೆಲಿಕಾಪ್ಟರï ಗಳು ನಿರ್ಮಾಣವಾಗುತ್ತಿವೆ. ಇನ್ನು 13, 448 ಕೋಟಿ ಮೌಲ್ಯದ ಯುದ್ಧ ಟ್ಯಾಂಕರ್ ಗಳನ್ನು ಕೂಡ ಇಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.ಇದಲ್ಲದೆ 598 ಚಾಲಕ ರಹಿತ ಯುದ್ಧ ವಿಮಾನ ಡ್ರೋನ್ ಗಳನ್ನು ಕೂಡ ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ ಸಂಸ್ಥೆ ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವಕ ಕ್ರಮಗಳನ್ನು ಕೈಗೊಂಡಿದ್ದು, ಪ್ರಸ್ತುತ ಹೆಚ್‍ಎಎಲï ವಾರ್ಷಿಕ 8 ವಿಮಾನಗಳನ್ನು ತಯಾರಿಸುವ ಸಾಮಥ್ರ್ಯವನ್ನು ಹೊಂದಿದ್ದು, ಇದನ್ನು 16ಕ್ಕೇರಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಹೇಳಲಾಗುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin