500 ಮತ್ತು 1000 ರೂ. ನೋಟುಗಳು ಬ್ಯಾನ್ : ಸಾರ್ವಜನಿಕರು ಆತಂಕಪಡುವ ಅವಶ್ಯಕತೆಯಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Notes

ನವದೆಹಲಿ . ನ. 08 : ದೇಶವನ್ನುದ್ದೇಶಿಸಿ ಇಂದು ಭಾಷಣ ಮಾಡಿದ ಪ್ರಧಾನಿ ಮೋದಿ ಕಪ್ಪು ಹಣ, ಭ್ರಷ್ಟಾಚಾರ ತಡೆಯಲು ಪ್ರಧಾನಿ ದಿಟ್ಟ ಹೆಜ್ಜೆಯಿಟ್ಟಿದ್ದು ದಿಢೀರ್ ಬೆಳವಣಿಗೆಯಲ್ಲಿ ರೂ.500,1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಇಂದು ಮಧ್ಯೆ ರಾತ್ರಿಯಿಂದಲೇ ನಿಷೇಧಿಸಿದ್ದಾರೆ. ಡಿಸೆಂಬರ್ 30 ರ ಒಳಗೆ (50 ದಿನಗಳ ಒಳಗೆ)ನಿಮ್ಮ ಬಳಿ ಇರುವ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಮತ್ತು ಪೋಸ್ಟ್ ಆಫೀಸ್ ಗಳಲ್ಲಿ ಗುರುತಿನ ಚೀಟಿಯನ್ನು ನೀಡಿ ಬದಲಾಯಿಸಿಕೊಳ್ಳಬಹುದೆಂದು ತಮ್ಮ ಭಾಷಣದಲ್ಲಿ ಪ್ರಧಾನಿ ತಿಳಿಸಿದ್ದಾರೆ. ಸದ್ಯದಲ್ಲೇ ಹೊಸದಾಗಿ 500 ಮತ್ತು 2000 ರೂ. ಮುಖಬೆಲೆಯ ನೋಟುಗಳನ್ನು ಆರ್ ಬಿಐ ಬಿಡುಗಡೆ ಮಾಡಲಿದೆ.

CwwXC_rVIAA6T_X

ನಾಳೆ ದೇಶಾದ್ಯಂತ ಯಾವುದೇ ಬ್ಯಾಂಕ್ ಗಳು ವ್ಯವಹಾರ ನಡೆಸುವುದಿಲ್ಲ, ಆದರೆ ನಿಮ್ಮ ಬಳಿ ಇರುವ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಬ್ಯಾಂಕ್, ಪೋಸ್ಟ್ ಆಫೀಸ್ ಗಳಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾನ ಕಾರ್ಡ್ ಕೊಟ್ಟು ನೋಟುಗಳನ್ನು ಬದಲಿಸಿಕೊಳ್ಳಬಹುದಾಗಿದೆ.

ಆಸ್ಪತ್ರೆ ಮತ್ತು ರೈಲು ಬುಕ್ಕಿಂಗ್ಗಾಗಿ ನವೆಂಬರ್ 11ರವೆಗೂ ಈ ನೋಟುಗಳ ಬಳಸಬಹುದಾಗಿದೆ. ₹2000 ಮತ್ತು ₹500 ಹೊಸ ನೋಟುಗಳು ನವೆಂಬರ್ 10ರಿಂದ ಚಾಲ್ತಿಗೆ ಬರಲಿವೆ. ಆಧಾರ್ ಕಾರ್ಡ್ ಸೇರಿದಂತೆ ಸೂಕ್ತ ಗುರುತಿನ ಚೀಟಿ ತೋರಿಸಿ ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ನೋಟು ಬದಲಿಸಿಕೊಳ್ಳಬಹುದು. ನಗದು ರಹಿತ ವ್ಯವಹಾರಗಳಿಗೆ ಯಾವುದೇ ತೊಂದರೆ ಇಲ್ಲ.

ಸಾರ್ವಜನಿಕರಿಗೆ ಡಿಸೆಂಬರ್ 31ರವರೆಗೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಅಫಿಡವಿಟ್ ಸಲ್ಲಿಸಿ 2017ರ ಮಾರ್ಚ್ ವರೆಗೂ ರಿಸರ್ವ್ ಬ್ಯಾಂಕ್ ಗಳಲ್ಲಿ ನೋಟುಗಳನ್ನು ಬದಲಿಸಿಕೊಳ್ಳಬಹುದಾಗಿದೆ .ಇನ್ನು ದಿನಕ್ಕೆ ಬರೀ 2 ಸಾವಿರ ಮೊತ್ತದ ನೋಟುಗಳನ್ನು ಬದಲಿಸಿಕೊಳ್ಳಬಹುದು. ಇನ್ನು ನೂತನವಾಗಿ 2000 ಹಾಗೂ 500 ಮುಖಬೆಲೆಯ ನೋಟುಗಳ ಮುದ್ರಣಕ್ಕೆ ಅವಕಾಶ ನೀಡಲಾಗಿದ್ದು ಮುಂದಿನ ದಿನಗಳಲ್ಲಿ 500 ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ ಬರಲಿವೆ. 500-1000 ರುಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ಬಂದ್ ಹಿನ್ನೆಲೆ 1 ರುಪಾಯಿಯಿಂದ 100 ರುಪಾಯಿ ಮುಖಬೆಲೆಯ ನೋಟುಗಳು ಚಲಾವಣೆಯಾಗಲಿವೆ. ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಹಲವು ಕಠಿಣ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಸಾರ್ವಜನಿಕರು ಆತಂಕಪಡುವ ಅವಶ್ಯಕತೆಯಿಲ್ಲ : ಈ ದಿಢೀರ್ ಬೆಳವಣಿಗೆಯಿಂದ ಸಾರ್ವನಿಕರಲ್ಲಿ ಆತಂಕ ಉಂಟಾಗಿದ್ದು ರೂ.500,1000 ಮುಖಬೆಲೆಯ ನೋಟುಗಳು ನಡೆಯದಿದ್ದರೆ ಹೇಗೆ ಎಂಬ ಚಿಂತೆಗೆ ಬಿದ್ದಿದ್ದಾರೆ. ಆದರೆ ಆತಂಕ ಪಡುವ ಅವಶ್ಯಕತೆಯಿಲ್ಲ ನಿಮ್ಮ ಬಳಿ ಇರುವ ನೋಟುಗಳನ್ನು ಬ್ಯಾಂಕ್’ಗಳಲ್ಲಿ ಬದಲಾಯಿಸಿಕೊಳ್ಳಲು ಅವಕಾಶವಿದ್ದು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾನ ಕಾರ್ಡ್ ಕೊಟ್ಟು ನೋಟುಗಳನ್ನು ಬದಲಿಸಿಕೊಳ್ಳಬಹುದಾಗಿದೆ.

ಪೆಟ್ರೋಲ್ ಬಂಕ್ ಗಳಲ್ಲಿ ನೂಕು ನುಗ್ಗಲು : ಪೆಟ್ರೋಲ್ ಬಂಕ್ ಮತ್ತು ಮೆಡಿಕಲ್ ಶಾಪ್ ಗಳಲ್ಲಿ 500, 1000 ನೋಟುಗಳನ್ನು ಪಡೆದುಕೊಳ್ಳಲಾಗುತ್ತಿದ್ದು ತಮ್ಮ ಬಳಿ ಇರುವ 500 ಮತ್ತು ಸಾವಿರ ರೂ. ನೋಟುಗಳನ್ನು ಕೊಟ್ಟು ಚಿಲ್ಲರೆ ಪಡೆಯಲು ಮುಗಿಬೀಳುತ್ತಿದ್ದಾರೆ.

 ಮುಂದೇನು ..? 

ನವದೆಹಲಿ. ನ. 08 : ಮಧ್ಯರಾತ್ರಿಯಿಂದ ರೂ.500, 1000 ನೋಟುಗಳ ಮುದ್ರಣ ಮತ್ತು ಚಲಾವಣೆ ರದ್ದಾಗಲಿದೆ. ರೂ.500 ಹಾಗೂ ರೂ.2000 ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ ಬರಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದರು. ಮಧ್ಯರಾತ್ರಿಯಿಂದಲೇ ರೂ.500, ರೂ.1000 ನೋಟುಗಳು ರದ್ದಾಗಲಿವೆ. ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಕಪ್ಪು ಹಣ ಮತ್ತು ನಕಲಿ ಹಣಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ನಾಳೆ ದೇಶದ ಯಾವುದೇ ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ ಹಾಗೂ ನವೆಂಬರ್ 9 ಮತ್ತು ನವೆಂಬರ್ 10ರಂದು ಎಟಿಎಂ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ.
ಒಟ್ಟು 50 ದಿನಗಳೊಳಗಾಗಿ ನೋಟು ವಾಪಾಸು ಕೊಡಬಹುದಾಗಿದೆ. ಪ್ರತಿದಿನ ರೂ.4 ಸಾವಿರ ವರೆಗೂ ಬದಲಿಸಿಕೊಳ್ಳಲು ಅವಕಾಶವಿದೆ. ಆಸ್ಪತ್ರೆ ಮತ್ತು ರೈಲು ಬುಕ್ಕಿಂಗ್ಗಾಗಿ ನವೆಂಬರ್ 11ರವೆಗೂ ಈ ನೋಟುಗಳ ಬಳಸಬಹುದಾಗಿದೆ. ರೂ.2000 ಮತ್ತು ರೂ.500 ಹೊಸ ನೋಟುಗಳು ನವೆಂಬರ್ 10ರಿಂದ ಚಾಲ್ತಿಗೆ ಬರಲಿವೆ. ಆಧಾರ್ ಕಾರ್ಡ್ ಸೇರಿದಂತೆ ಸೂಕ್ತ ಗುರುತಿನ ಚೀಟಿ ತೋರಿಸಿ ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ನೋಟು ಬದಲಿಸಿಕೊಳ್ಳಬಹುದು. ನಗದು ರಹಿತ ವ್ಯವಹಾರಗಳಿಗೆ ಯಾವುದೇ ತೊಂದರೆ ಇಲ್ಲ.

500 ಮತ್ತು 1000 ನೋಟು ಬ್ಯಾನ್ , ಮುಂದೇನು ಮಾಡುವುದು..?

ರೂ. 500 ಮತ್ತು 1000 ನೋಟುಗಳ ಮುದ್ರಣ ಇಂದು ಮಧ್ಯರಾತ್ರಿಯಿಂದ ಬಂದ್ ಆಗಲಿದೆ. ನಾಳೆ, ನಾಳಿದ್ದು ಎಟಿಎಂ ಮೆಷಿನ್ ಕಾರ್ಯ ನಿರ್ವಹಿಸುವುದಿಲ್ಲ. ನಾಳೆ, ನಾಳಿದ್ದು ಎಟಿಎಂಗೆ ಹೋದರೂ ನಿಮಗೆ ಹಣ ಸಿಗುವುದಿಲ್ಲ.

# ನವೆಂಬರ್ 10ರಿಂದ ಡಿ.30ರವರೆಗೆ ಅಂದರೆ 50 ದಿನಗಳ ಒಳಗಾಗಿ ಸಾರ್ವಜನಿಕರು ನೋಟುಗಳನ್ನು ಬದಲಿಸಬಹುದು

# ಸೂಕ್ತ ಗುರುತಿನ ಚೀಟಿ ನೀಡಿ ಬ್ಯಾಂಕುಗಳು ಅಥವಾ ಅಂಚೆ ಕಚೇರಿಯಲ್ಲಿ ನೋಟು ಬದಲಾವಣೆ ಮಾಡಬೇಕು

# ನಾಳೆ ನಾಡಿದ್ದು ಎಲ್ಲ ಬ್ಯಾಂಕುಗಳಿಗೆ ರಜೆ. ಆದರೆ, ಸಾರ್ವಜನಿಕರಿಗೆ ಅವಕಾಶ ನೀಡದೇ ಒಳಗೇ ಕೆಲಸ ಮಾಡುತ್ತಿರುತ್ತಾರೆ. ಕೆಲವು ಎಟಿಎಂಗಳು ಕೂಡ ಕೆಲಸ ಮಾಡುವುದಿಲ್ಲ.

#100, 50, 20, 10 ಮುಖಬೆಲೆಯ ಇತರೆ ಮುಖಬೆಲೆಯ ನೋಟುಗಳು, ನಾಣ್ಯಗಳು, ಚೆಕ್, ಡಿಡಿ, ಕ್ರೆಡಿಟ್/ಡೆಬಿಟ್ ಕಾರ್ಡ್ , ಆನ್ಲೈನ್ ಬ್ಯಾಂಕಿಂಗ್ ಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ

ಸದ್ಯ ಎಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು : ರೈಲು, ಬಸ್ ನಿಲ್ದಾಣಗಳು, ಏರ್ಪೋರ್ಟ್, ಮೆಡಿಕಲ್ ಶಾಪ್ , ಸರ್ಕಾರಿ ಆಸ್ಪತ್ರೆಗಳು, ಪೆಟ್ರೋಲ್ ಬ್ಯಾಂಕ್ ಗಳಲ್ಲಿ 500,1000 ನೋಟುಗಳು ಚಲಾವಣೆಯಾಗಲಿವೆ.

# ಏಟಿಎಂ ಗಳಲ್ಲಿ ದಿನಕ್ಕೆ 2,000, ಬ್ಯಾಂಕುಗಳಲ್ಲಿ ದಿನಕ್ಕೆ 10,000, ವಾರಕ್ಕೆ 20,000 ಹಣ ತೆಗೆಯಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಾಗಲಿದೆ.

# ವಿನಿಮಯಕ್ಕೆ ಎಲ್ಲೆಲ್ಲಿ : ಯಾವುದೇ ಬ್ಯಾಂಕುಗಳು, ಪ್ರಧಾನ ಅಂಚೆ ಕಚೇರಿ, ಉಪ ಅಂಚೆ ಕಚೇರಿ, ಪ್ರವಾಸಿಗರಿಗೆ ಏರ್ಪೋರ್ಟ್ಗಳಲ್ಲಿ ಬದಲಾವಣೆ ಅವಕಾಶ ಇದೆ.

► Follow us on –  Facebook / Twitter  / Google+

Facebook Comments

Sri Raghav

Admin