Live : ಮಾಸ್ತಿಗುಡಿ ದುರಂತ : ಇನ್ನು ಸಿಕ್ಕಿಲ್ಲ ಉದಯ್ , ಅನಿಲ್ ಮೃತದೇಹ

ಈ ಸುದ್ದಿಯನ್ನು ಶೇರ್ ಮಾಡಿ

mastigudi-live-1

> ಅನಿಲ್ ನಿವಾಸಕ್ಕೆ ಆರ್. ಅಶೋಕ್ ಭೇಟಿ

ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಮೃತಪಟ್ಟ ನಟ ಅನಿಲ್ ನಿವಾಸಕ್ಕೆ ಆರ್. ಅಶೋಕ್ ಭೇಟಿ ನೀಡಿ ಸಾಂತ್ವನ ಹೇಳಿದರು. ಬಿಡಬ್ಲೂಎಸ್’ಎಸ್’ಬಿನವರು ಪಮಿ೯ಷನ್ ಕೊಡುವ ಮುಂಚೆ ಯೋಚನೆ ಮಾಡಬೇಕಿತ್ತು. ಪಮಿ೯ಷನ್ ಕೊಟ್ಟಮೇಲೆ ಯಾರಾದರು ಅವರ ಕಡೆಯಿಂದ ಹೋಗಬಹುದಿತ್ತು. ಕಳೆದ 15 ವಷ೯ಗಳಿಂದ ಅಲ್ಲಿನ ನೀರನ್ನ ಬಳಸುತ್ತಿಲ್ಲ. ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂದರು. ಮೃತದೇಹಗಳ ಶೋಧ ಕಾರ್ಯಕ್ಕೆ ಕಾರವಾರದಿಂದ ನುರಿತ ತಜ್ಞ ರ ತಂಡ ಬರುತ್ತಿದೆ. ಅವರು ಸಮುದ್ರದಲ್ಲಿ ಈಜುವಂತಹ ಸಾಮರ್ಥ್ಯವಿರುವವರು. ಶೀಘ್ರದಲ್ಲಿಯೇ ದೇಹಗಳನ್ನು ಪತ್ತೆ ಹಚ್ಚಲಿದ್ದಾರೆ ಎಂದರು.

> ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಹೆಜ್ಜೇನು ದಾಳಿ : ದಿಕ್ಕಾಪಾಲಾಗಿ ಓಡಿದ ಜನ

ಬೆಂಗಳೂರು. ನ. ೦8 : ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ದುನಿಯಾ ವಿಜಯ್ ಅಭಿನಯದ ‘ಮಾಸ್ತಿಗುಡಿ’ ಚಿತ್ರದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್ ನಿಂದ ಹಾರಿದ್ದ ಸಾಹಸ ಕಲಾವಿದರಾದ ಉದಯ್ ಮತ್ತು ಅನಿಲ್ ನೀರಿನಲ್ಲಿ ಮುಳುಗಿದ್ದು,ಅವರ ದೇಹಗಳಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ, ಪೊಲೀಸರು ನಿನ್ನೆ ತಡರಾತ್ರಿವರೆಗೂ ಶೋಧ ಕಾರ್ಯ ನಡೆಸಿದ್ದು, ಇಂದು ಕೂಡಾ ಕಾರ್ಯಾಚರಣೆ ಮುಂದುವರೆದಿದೆ.  ಈ ಮಧ್ಯೆ ಘಟನಾ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದು, ಈ ವೇಳೆ ಹೆಜ್ಜೇನು ದಾಳಿ ನಡೆಸಿದೆ. ಕಿಡಿಗೇಡಿಗಳ್ಯಾರು ಜೇನುಗೂಡಿಗೆ ಕಲ್ಲು ಎಸೆದಿರಬಹುದೆಂದು ಹೇಳಲಾಗಿದ್ದು, ಹೆಜ್ಜೇನು ದಾಳಿ ನಡೆಯುತ್ತಿದ್ದಂತೆಯೇ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಈ ಘಟನೆ ಸ್ಥಳದಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ್ದು ಯಾರಿಗೂ ಗಾಯಗಳಾದ ವರದಿಗಳಾಗಿಲ್ಲ. ಇದೆ ಸ್ಥಳದಲ್ಲಿ ಚಿತ್ರರಂಗದ ಅನೇಕ ನಾಯಕರೂ ಸಹ ಹಾಜರಿದ್ದಾರೆ.

boar

> ಇನ್ನು ಸಿಕ್ಕಿಲ್ಲ ಉದಯ್ , ಅನಿಲ್ ಮೃತದೇಹ

ಬೆಂಗಳೂರು, ನ.8- ದುನಿಯಾ ವಿಜಿ ನಟನೆಯ ಮಾಸ್ತಿಗುಡಿ ಚಿತ್ರದ ರೋಚಕ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ನಿನ್ನೆ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ದುರಂತ ಅಂತ್ಯ ಕಂಡಿದ್ದ ಇಬ್ಬರು ನಟರ ಮೃತ ದೇಹಗಳ ಪತ್ತೆಗೆ ಕಾರ್ಯಾಚರಣೆ ತೀವ್ರಗೊಂಡಿದೆ. ನಿನ್ನೆ ರಾತ್ರಿ 12 ಗಂಟೆವರೆಗೆ ಕಾರ್ಯಾಚರಣೆ ನಡೆಸಿ ಸ್ಥಗಿತಗೊಳಿಸಲಾಯಿತು. ಇಂದು ಮುಂಜಾನೆಯಿಂದಲೇ ಮತ್ತೆ ಶೋಧಕಾರ್ಯ ಮುಂದುವರಿದಿದೆ.

M 3

ಎನ್‍ಡಿಆರ್‍ಎಫ್ ತಂಡದ ಸಿಬ್ಬಂದಿ, ನುರಿತ ಈಜುಗಾರರು, ಅಗ್ನಿಶಾಮಕ ದಳದವರು, ಸ್ಥಳೀಯ ಮೀನುಗಾರರು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮೃತದೇಹಗಳ ಪತ್ತೆಗೆ ಶೋಧಕಾರ್ಯ ಮುಂದುವರಿಸಿದ್ದಾರೆ. ಎನ್‍ಡಿಆರ್‍ಎಫ್‍ನ ನಾಲ್ಕು ಬೋಟುಗಳು, ಸ್ಥಳೀಯ ಮೀನುಗಾರರ ನಾಲ್ಕು ತೆಪ್ಪಗಳು ಹಾಗೂ ಅಗ್ನಿಶಾಮಕ ದಳದ ಒಂದು ಬೋಟ್‍ನಲ್ಲಿ ನಿನ್ನೆ ಮೃತ ನಟರಾದ ಅನಿಲ್ ಹಾಗೂ ಉದಯ್ ಅವರ ಶವಗಳ ಪತ್ತೆಗೆ ಹುಡುಕಾಟ ನಡೆದಿದೆ. ನಿನ್ನೆ ನಟರು ನೀರಿಗೆ ಜಿಗಿದ ಸ್ಥಳದ ಸುತ್ತಮುತ್ತ ಶವಗಳಿಗಾಗಿ ತೀವ್ರ ತಲಾಶ್ ನಡೆಸುತ್ತಿದ್ದಾರೆ.

M 5

ಎನ್‍ಡಿಆರ್‍ಎಫ್ ಇನ್ಸ್‍ಪೆಕ್ಟರ್ ಕೇಶವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಅವಘಡದಲ್ಲಿ ಪಾರಾಗಿದ್ದ ಮಾಸ್ತಿಗುಡಿ ಚಿತ್ರದ ನಾಯಕ ನಟ ದುನಿಯಾ ವಿಜಿ ಅವರು ಎನ್‍ಡಿಆರ್‍ಎಫ್ ತಂಡದೊಂದಿಗಿದ್ದಾರೆ. ನೀರು ಕಲುಷಿತಗೊಂಡು ಕೆಸರು ತುಂಬಿರುವುದರಿಂದ ಕಾರ್ಯಾಚರಣೆಗೆ ಸಾಕಷ್ಟು ಅಡ್ಡಿಯಾಗಿದೆ ಎಂದು ತಿಳಿದುಬಂದಿದ್ದು, ಮಧ್ಯಾಹ್ನವಾದರೂ ಶವಗಳಿರುವ ಬಗ್ಗೆ ಕುರುಹುಗಳು ಪತ್ತೆಯಾಗಿಲ್ಲ. ಸ್ಥಳೀಯ ಮೀನುಗಾರರು ಮುಳ್ಳುತಂತಿ ಬಳಸಿ ತಮ್ಮದೇ ಶೈಲಿಯಲ್ಲಿ ಶವಗಳ ಹುಡುಕಾಟ ನಡೆಸಿದರೆ, ಎನ್‍ಡಿಆರ್‍ಎಫ್ ತಂಡದವರು ಮುಳುಗುತಜ್ಞರೊಂದಿಗೆ ಶವಗಳ ಹುಡುಕಾಟ ಮುಂದುವರಿಸಿದ್ದಾರೆ.  ಕೆರೆಯಲ್ಲಿ 40 ಅಡಿ ನೀರಿದ್ದು, ಅದರಲ್ಲಿ 8 ಅಡಿ ಆಳದ ಕೆಸರು ತುಂಬಿಕೊಂಡಿದೆ. ಹೀಗಾಗಿ ಮುಳುಗು ತಜ್ಞರು ಮೃತ ದೇಹವಿರುವ ಜಾಗಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ನೀರು ಕೂಡ ಕೆಸರಿನಿಂದ ಕೂಡಿರುವುದರಿಂದ ನೀರಿನೊಳಗೆ ಏನೂ ಕಾಣದಂತಾಗಿದೆ. ಹೀಗಾಗಿ ಕಾರ್ಯಾಚರಣೆಗೆ ಸಾಕಷ್ಟು ಅಡ್ಡಿಯಾಗಿದೆ. ಪ್ರತಿ ಬೋಟ್‍ನಲ್ಲೂ 5 ರಿಂದ 6 ಜನರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.

Yash-02

ಮುಗಿಲು ಮುಟ್ಟಿದ ಆಕ್ರಂದನ:

ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ನಟ ಅನಿಲ್ ಹಾಗೂ ಉದಯ್ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಕಾರ್ಯಾಚರಣೆ ನಡೆಸುತ್ತಿದ್ದ ಸ್ಥಳಕ್ಕೆ ಸುತ್ತಮುತ್ತಲ ಗ್ರಾಮಗಳ ಜನ ಜಮಾಯಿಸಿದ್ದರು. ಬೆಳಗ್ಗೆಯಿಂದ ಚಿತ್ರನಟರು, ನಿರ್ದೇಶಕರು, ನಿರ್ಮಾಪಕರು, ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಆಗಮಿಸಿದ್ದರು. ಹಿರಿಯ ನಟ ಶಿವರಾಜ್‍ಕುಮಾರ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಪ್ರೇಮ್, ರಂಗಾಯಣ ರಘು, ಜಗ್ಗೇಶ್, ಥ್ರಿಲ್ಲರ್ ಮಂಜು, ಯೋಗರಾಜ್ ಭಟ್, ಬುಲೆಟ್ ಪ್ರಕಾಶ್, ಯಶ್, ಧೃವ ಸರ್ಜ ಸೇರಿದಂತೆ ಅನೇಕರು ಆಗಮಿಸಿ ತಮ್ಮ ಆತಂಕ ವ್ಯಕ್ತಪಡಿಸಿದರು.  ಅನಿಲ್ ಹಾಗೂ ಉದಯ್ ಕುಟುಂಬದವರು ಜಲಾಶಯದ ದಡದಲ್ಲಿ ಗೋಳಿಡುತ್ತಿದ್ದ ದೃಶ್ಯ ಎಂಥವರ ಕರುಳನ್ನೂ ಹಿಂಡುತ್ತಿತ್ತು.

M 02
ಚಿತ್ರತಂಡ ವಿರುದ್ಧ ದೂರು ದಾಖಲು:

ಇನ್ನು ನಿಯಮಗಳನ್ನು ಉಲ್ಲಂಘಿಸಿ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಬೇಜವಾಬ್ದಾರಿತನದಿಂದ ಚಿತ್ರೀಕರಣ ನಡೆಸಿದ ಚಿತ್ರತಂಡದ ವಿರುದ್ಧ ದೂರು ದಾಖಲಾಗಿದೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಮಾಸ್ತಿಗುಡಿ ಚಿತ್ರತಂಡದ ವಿರುದ್ಧ ದೂರು ದಾಖಲಾಗಿದ್ದು, ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿವರ್ಮ, ನಿರ್ಮಾಪಕ ಸುಂದರ್, ಚಿತ್ರತಂಡದ ಯುನಿಟ್ ಮ್ಯಾನೇಜರ್ ಭರತ್ ವಿರುದ್ಧ ಸೆಕ್ಷನ್-304, 188 ಕಲಂ 34ರಡಿ ಪ್ರಕರಣ ದಾಖಲಿಸಲಾಗಿದೆ. ಮಾಸ್ತಿಗುಡಿ ಚಿತ್ರತಂಡ ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ನಿಷೇಧಿತ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದ್ದೂ ಅಲ್ಲದೆ ಹೆಲಿಕಾಪ್ಟರ್ ಬಳಸಿ ಚಿತ್ರೀಕರಣ ಮಾಡುವಂತಿಲ್ಲ ಎಂಬ ನಿಯಮಗಳಿದ್ದರೂ ಅವುಗಳನ್ನು ಉಲ್ಲಂಘಿಸಿ ಚಿತ್ರೀಕರಣ ನಡೆಸಿದ್ದಾರೆ. ಖಳನಟರು ಹೆಲಿಕಾಪ್ಟರ್‍ನಿಂದ ನೀರಿಗೆ ಜಿಗಿಯುವ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಅನಿಲ್ ಹಾಗೂ ಉದಯ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸೆಕ್ಷನ್-304ರ ಆರೋಪ ಸಾಬೀತಾದರೆ 10 ವರ್ಷಗಳ ಶಿಕ್ಷೆ ವಿಧಿಸಲಾಗುತ್ತದೆ. ಈ ಸಂಬಂಧ ತಿಪ್ಪಗೊಂಡನಹಳ್ಳಿ ಜಲಾಶಯದ ಅಧೀಕ್ಷಕರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 > ಪಣಂಬೂರು-ಕಾರವಾರ ಸೀಬರ್ಡ್ ಮುಳುಗು ತಜ್ಞರ ಬಳಕೆ : ಶವಗಳನ್ನು ಹೊರಕ್ಕೆ ತೆಗೆಯಲು ಗೃಹ ಸಚಿವರ ಸೂಚನೆ

ಮಾಸ್ತಿ ಗುಡಿ ಚಿತ್ರದ ರೋಚಕ ಸಾಹಸ ದೃಶ್ಯದ ಚಿತ್ರೀಕರಣ ದುರಂತದಲ್ಲಿ ಸಾವನ್ನಪ್ಪಿರುವ ನಟರಾದ ಅನಿಲ್ ಮತ್ತು ಉದಯ್ ಅವರ ಮೃತದೇಹಗಳ ಪತ್ತೆಗೆ ತ್ವರಿತ ಹಾಗೂ ಅಗತ್ಯವಿರುವ ಎಲ್ಲಾ ಕ್ರಮಕೈಗೊಳ್ಳುವಂತೆ ಗೃಹರಕ್ಷಕ ದಳ ಹಾಗೂ ಅಗ್ನಿಶಾಮಕ ದಳದ ಡಿಜಿ ಎಂ.ಎನ್.ರೆಡ್ಡಿ ಅವರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚಿಸಿದ್ದಾರೆ. ನಿನ್ನೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಸಾಹಸ ದೃಶ್ಯ ಚಿತ್ರೀಕರಣ ಸಂದರ್ಭದಲ್ಲಿ ಹೆಲಿಕಾಪ್ಟರ್‍ನಿಂದ ಕೆರೆಗೆ ಜಿಗಿದಾಗ ಮೃತರಾದ ಅನಿಲ್ ಮತ್ತು ಉದಯ್ ಅವರ ದೇಹಗಳ ಶೋಧಕ್ಕೆ ಅಗತ್ಯವಿರುವ ಎಲ್ಲಾ ತಾಂತ್ರಿಕತೆಗಳನ್ನು ಬಳಸಿಕೊಂಡು ಶೀಘ್ರ ಶವಗಳನ್ನು ಹೊರತೆಗೆಯುವಂತೆ ನಿರ್ದೇಶಿಸಿದ್ದಾರೆ.

ಪಣಂಬೂರು ನುರಿತ ಈಜುಗಾರರೊಂದಿಗೆ ಕೂಡ ಸಂಪರ್ಕ ಸಾಧಿಸಿ ಅವರನ್ನು ಶೀಘ್ರವೇ ಇಲ್ಲಿಗೆ ಕರೆಸಿಕೊಂಡು ಶವಗಳನ್ನು ಹೊರತೆಗೆಯುವ ಕಾರ್ಯಾಚರಣೆಗೆ ಕೈಗೊಳ್ಳಬೇಕೆಂದು ಅವರು ಎಂ.ಎನ್.ರೆಡ್ಡಿ ಅವರಿಗೆ ಸಲಹೆ ಮಾಡಿದ್ದಾರೆ. ಅಲ್ಲದೆ ಅಗತ್ಯ ಬಿದ್ದರೆ ಕಾರವಾರದ ಸೀ ಬರ್ಡ್‍ನಲ್ಲಿರುವ ಮುಳುಗು ತಜ್ಞರು ಹಾಗೂ ನುರಿತ ಈಜುಗಾರರನ್ನು ಬಳಸಿಕೊಂಡು ಚಿತ್ರನಟರಾದ ಅನಿಲ್, ಉದಯ್ ಅವರ ಮೃತದೇಹಗಳನ್ನು ಶೀಘ್ರವೇ ಹೊರತೆಗೆಯುವಂತೆ ಡಾ.ಜಿ.ಪರಮೇಶ್ವರ್ ಸೂಚಿಸಿದ್ದಾರೆ.

Mastigudi

ಮಂಗಳೂರಿನ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಅವರಿಗೆ ಸೂಚನೆ ನೀಡಿ ಕಾರವಾರ ಹಾಗೂ ಪಣಂಬೂರು ನುರಿತ ಈಜುಗಾರರನ್ನು ಕಳುಹಿಸಿಕೊಡುವಂತೆ ತಿಳಿಸಿದ್ದಾರೆ.
ಯಾವುದೇ ಕ್ಷಣದಲ್ಲಿ ಅವರು ಇಲ್ಲಿಗೆ ಆಗಮಿಸಿ ಕಾರ್ಯೋನ್ಮುಖರಾಗುವ ಸಾಧ್ಯತೆ ಇದೆ.  ನಿನ್ನೆ ಇಬ್ಬರು ಪ್ರತಿಭಾನ್ವಿತ ನಟರ ದುರಂತ ಅಂತ್ಯ ದುರದೃಷ್ಟಕರ ಎಂದು ಪರಮೇಶ್ವರ್ ಹೇಳಿದ್ದಾರೆ. ಸರ್ಕಾರದ ಎಲ್ಲಾ ಪಡೆ ಹಾಗೂ ತಂತ್ರಜ್ಞಾನವನ್ನು ಬಳಸಿಕೊಂಡು ಶೀಘ್ರ ಅವರ ಮೃತದೇಹಗಳನ್ನು ಹೊರತೆಗೆಯಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Mastigudi-climax

ಬೆಂಗಳೂರು ನ.08 : ಕೆರೆಯಲ್ಲಿ ಹೂಳು ಮತ್ತು ಕಸ ತುಂಬಿಸುವುದರಿಂದ ಉದಯ್ ಮತ್ತು ಅನಿಲ್ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ.  ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನಲ್ಲಿ ಮುಳುಗಿ ಮೃತಪಟ್ಟಿದ ಖಳನಟ ಅನಿಲ್ ಮತ್ತು ಉದಯ್ ಅವರ ಮೃತದೇಹಗಳಿಗಾಗಿ ಬೆಳಿಗ್ಗೆಯಿಂದ ಶೋಧಕಾರ್ಯಾಚರಣೆ ಮುಂದುವರೆದಿದೆ. ಎನ್ ಡಿಆರ್ ಎಫ್ ತಂಡದ ಸಿಬ್ಬಂದಿಗಳು ಕಾರ್ಯಾಚರಣೆ ಮುಂದುವರೆಸಿದ್ದು ಎನ್ ಡಿಆರ್ ಎಫ್ ಇನ್ಸ್ ಪೆಕ್ಟರ್ ಕೇಶವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಅವಗಢದಲ್ಲಿ ಪಾರಾಗಿದ್ದ ಮಾಸ್ತಿಗುಡಿ ಚಿತ್ರದ ನಾಯಕ ನಟ ದುನಿಯಾ ವಿಜಯ್ ಎನ್ ಡಿ ಆರ್ ಎಫ್ ತಂಡದೊಂದಿಗೆ ಸ್ಥಳದಲ್ಲೇ ಇದ್ದಾರೆ. ಇಂದು ಬೆಳಗ್ಗೆಯಿಂದ ಮತ್ತೆ ಶೋಧ ಕಾರ್ಯ ಆರಂಭವಾಗಿದೆ.

M 02

ಇದನ್ನೂ ಓದಿ : ಮಾಸ್ತಿಗುಡಿ ದುರಂತ ಚಿತ್ರರಂಗಕ್ಕೆ ಎಚ್ಚರಿಕೆ ಗಂಟೆ ಎಂದ ಶಿವರಾಜ್‍ಕುಮಾರ್)

Mastigudi-01
ಸೋಮವಾರ ರಾತ್ರಿ 12 ಗಂಟೆ ವೇಳೆಗೆ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. 8 ಗಂಟೆ ನಂತರ ಮತ್ತೆ ಶೋಧ ಕಾರ್ಯ ಆರಂಭವಾಗಿದೆ.ಘಟನಾ ಸ್ಥಳಕ್ಕೆ ಎನ್ ಡಿಆರ್ ಎಫ್ ತಂಡದ ಸಿಬ್ಬಂದಿಗಳು ಆಗಮಿಸಿದ್ದು, ನಟರ ಮೃತದೇಹಗಳಿಗಾಗಿ ಎರಡನೆ ದಿನ ತಿಪ್ಪಗೊಂಡನ ಹಳ್ಳಿ ಡ್ಯಾಂ ಬಳಿ ಶೋಧಕಾರ್ಯಾಚರಣೆ ಮುಂದುವರೆದಿದೆ.  ಎನ್‍ಡಿಆರ್‍ಎಫ್ ಇನ್ಸ್‍ಪೆಕ್ಟರ್ ಕೇಶವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಅವಘಢದಲ್ಲಿ ಪಾರಾಗಿದ್ದ ಮಾಸ್ತಿಗುಡಿ ಚಿತ್ರದ ನಾಯಕ ನಟ ದುನಿಯಾ ವಿಜಯ್ ಎನ್‍ಡಿಆರ್‍ಎಫ್ ತಂಡದೊಂದಿಗೆ ಸ್ಥಳದಲ್ಲೇ ಇದ್ದಾರೆ.

Mastigudi-11

ಇಷ್ಟು ದೊಡ್ಡ ರಿಸ್ಕ್ ಬೇಕಿತ್ತಾ..? :

ಇಷ್ಟು ದೊಡ್ಡ ರಿಸ್ಕ್ ಬೇಕಿತ್ತಾ..? ಇಷ್ಟು ದೊಡ್ಡ ರಿಸ್ಕ್ ತೆಗೆದುಕೊಂಡು ಅಪಾಯಕಾರಿ ಸಾಹಸ ಚಿತ್ರೀಕರಣ ನಡೆಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿರುವ ಹಿರಿಯ ನಟ ಜಗ್ಗೇಶ್, ಈಗಿರುವ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸ್ಟುಡಿಯೋದಲ್ಲೇ ಈ ಸಾಹಸ ಸನ್ನಿವೇಶವನ್ನು ಸಂಯೋಜಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಪಾಯಕಾರಿ ಸನ್ನಿವೇಶದ ಚಿತ್ರೀಕರಣದ ಮೂಲಕ ಎರಡು ಬಡ ಜೀವಗಳು ಸಾವನ್ನಪ್ಪಿವೆ ಎಂದು ಅವರು ನೊಂದು ನುಡಿದಿದ್ದಾರೆ.

Risk-02

> ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ

ಬೆಂಗಳೂರು, ನ.8- ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಚಿತ್ರ ನಟರಿಬ್ಬರು ಮುಳುಗಿ ಸಾವನ್ನಪ್ಪಿದ ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಮಂದಿ ಇಲ್ಲಿ ಜಮಾಯಿಸಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು, ಮಾಗಡಿ ಸೇರಿದಂತೆ ಆಸುಪಾಸಿನಿಂದ ತಂಡೋಪತಂಡವಾಗಿ ಜನರು ಇತ್ತ ಜಮಾಯಿಸುತ್ತಿರುವುದರಿಂದ ಜಲಾಶಯದ ಪ್ರದೇಶದೊಳಗೆ ಬರದಿರಲು ನಿರ್ಬಂಧ ಹೇರಲಾಗಿದೆ. ಕೆಲವರು ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಅವರನ್ನು ನಿಯಂತ್ರಿಸಿದ್ದಾರೆ. ಘಟನೆಯಲ್ಲಿ ಸುಮಾರು ನಾಲ್ಕೈದು ಬೈಕ್‍ಗಳು ಜಖಂಗೊಂಡಿದ್ದು, ಕೆಲವರಿಗೆ ಗಾಯವಾಗಿದೆ.

Mastigudi-04

ಇದನ್ನೂ ಓದಿ : ಮಾಸ್ತಿಗುಡಿ ಘೋರ ದುರಂತಕ್ಕೆ ಯಾರು ಹೊಣೆ..? : ನಿರ್ಲಕ್ಷಕ್ಕೆ ಸಾಕ್ಷಿಯಾಯಿತೇ ಕ್ಲೈಮ್ಯಾಕ್ಸ್..! )

Mastigudi-03

ಚಿತ್ರತಂಡದ ವಿರುದ್ಧ ದೂರು ದಾಖಲು:

ಇನ್ನು ನಿಯಮಗಳನ್ನು ಉಲ್ಲಂಘಿಸಿ, ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ಬೇಜವಾಬ್ದಾರಿತನದಿಂದ ಚಿತ್ರೀಕರಣ ನಡೆಸಿದ್ದ ಚಿತ್ರತಂಡದ ವಿರುದ್ಧ ದೂರು ದಾಖಲಾಗಿದೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಮಾಸ್ತಿಗುಡಿ ಚಿತ್ರತಂಡದ ವಿರುದ್ಧ ದೂರು ದಾಖಲಾಗಿದ್ದು, ನಿರ್ದೇಶಕ ನಾಗಶೇರ್ಖ, ಸಾಹಸ ನಿರ್ದೇಶಕ ರವಿವರ್ಮಾ, ನಿರ್ಮಾಪಕ ಸುಂದರ್, ಚಿತ್ರತಂಡದ ಯುನಿಟ್ ಮ್ಯಾನೇಜರ್ ಭರತ್ ವಿರುದ್ಧ ಸೆಕ್ಷನ್ 304, 188 ಸಹ ಕಲಂ 34 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಾಸ್ತಿಗುಡಿ ಚಿತ್ರತಂಡ ತಿಪ್ಪಗೊಂಡನ ಹಳ್ಳಿ ಜಲಾಶಯದ ಬಳಿ ನಿಷೇಧಿತ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದ್ದೂ ಅಲ್ಲದೇ, ಹೆಲಿಕಾಪ್ಟರನ್ನು ಬಳಸಿ ಚಿತ್ರೀಕರಣ ಮಾಡುವಂತಿಲ್ಲ ಎಂಬ ನಿಯಮಗಳನ್ನು ಉಲ್ಲಂಘಿಸಿ ಚಿತ್ರೀಕರಣ ನಡೆಸಿದ್ದರು. ಖಳನಟರು ಹೆಲಿಕಾಪ್ಟರ್‍ನಿಂದ ನೀರಿಗೆ ಜಿಗಿಯುವ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಅನಿಲ್ ಹಾಗೂ ಉದಯ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

► Follow us on –  Facebook / Twitter  / Google+

Mastigudi-09

ಸಾ.ರಾ.ಗೋವಿಂದು ದಿಗ್ಭ್ರಮೆ

ಬೆಂಗಳೂರು, ನ.8– ಇಬ್ಬರು ನಟರ ಸಾವಿನಲ್ಲಿ ಅಂತ್ಯಗೊಂಡ ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ದುರಂತದ ಬಗ್ಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅನಿಲ್ ಮತ್ತು ಉದಯ್ ಚಿತ್ರೀಕರಣ ವೇಳೆ ಮೃತಪಟ್ಟಿರುವುದಕ್ಕೆ ಸಂತಾಪ ಸೂಚಿಸಿರುವ ಅವರು, ಸಾಹಸ ದೃಶ್ಯಗಳ ಚಿತ್ರೀಕರಣ ವೇಳೆ ಸಿನಿಮಾ ತಂಡಗಳು ಜಾಗ್ರತೆ ವಹಿಸಬೇಕು. ಈ ತಂಡವು ಕೂಡ ಸಾಕಷ್ಟು ಜಾಗ್ರತೆ ವಹಿಸಿದೆ. ಆದರೂ ದುರಂತ ಸಂಭವಿಸಿದೆ. ಇನ್ನಷ್ಟು ಜಾಗ್ರತೆ ವಹಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.  ಮೃತರ ಕುಟುಂಬಕ್ಕೆ ವಾಣಿಜ್ಯ ಮಂಡಳಿಯಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.

Facebook Comments

Sri Raghav

Admin