ಕರ್ನಾಟಕವೂ ಸೇರಿದಂತೆ ದೇಶದಲ್ಲಿ 125 ಕೋಟಿ ರೂ. ಖೋಟಾ ನೋಟು ವಶ

ಈ ಸುದ್ದಿಯನ್ನು ಶೇರ್ ಮಾಡಿ

Fake-Notes

ಮುಂಬೈ, ನ.10- ಪೊಲೀಸರು, ತನಿಖಾ ಸಂಸ್ಥೆಗಳು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‍ನ ಸಿಬ್ಬಂದಿ ದೇಶಾದ್ಯಂತ 2012 ಮತ್ತು 2014ರ ಅವಧಿಯಲ್ಲಿ 125.18 ಕೋಟಿ ರೂ. ಕರ್ನಾಟಕವೂ ಸೇರಿದಂತೆ ಖೋಟಾ ನೋಟುಗಳನ್ನು ವಶಪಡಿಸಿಕೊಂಡು, ಈ ಸಂಬಂಧ 3,656 ಆರೋಪಿಗಳನ್ನು ಬಂಧಿಸಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿ (ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ-ಎನ್‍ಸಿಆರ್‍ಬಿ) ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಮಾಹಿತಿಯನ್ನು ತಿಳಿಸಲಾಗಿದ್ದು, ಭಾರತದಲ್ಲಿನ ನಕಲಿನೋಟುಗಳ ದಂಧೆಯ ವಿರಾಟರೂಪಕ್ಕೆ ಸಾಕ್ಷಿಯಾಗಿದೆ.  ಖೋಟಾನೋಟು ದಂಧೆ ಮತ್ತು ಚಲಾವಣೆಯಲ್ಲಿ ರಾಷ್ಟದ ರಾಜಧಾನಿ ಅಗ್ರಸ್ತಾನದಲ್ಲಿದ್ದು, 40,39 ಕೋಟಿ ರೂ.ಗಳ ನಕಲಿ ಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಎರಡನೇ ಸ್ಥಾನಗಳಲ್ಲಿ ಮಹಾರಾಷ್ಟ್ರ (14.54 ಕೋಟಿ ರೂ.ಗಳು) ಇದೆ. 2012-13ರಲ್ಲಿ ಆ ರಾಜ್ಯದಲ್ಲಿ 702 ಎಫ್‍ಐಆರ್‍ಗಳನ್ನು ದಾಖಲಿಸಿಕೊಂಡು 561 ಜನರನ್ನು ಬಂಧಿಸಲಾಗಿದೆ.

ನಂತರದ ಸ್ಥಾನಗಳಲ್ಲಿ ಉತ್ತರಪ್ರದೇಶ(11.55 ಕೋಟಿ ರೂ.ಗಳು), ತಮಿಳುನಾಡು(10.83 ಕೋಟಿ ರೂ.ಗಳು), ಕರ್ನಾಟಕ(7.22 ಕೋಟಿ ರೂ.ಗಳು, ಗುಜರಾತ್ (14.54 ಕೋಟಿ ರೂ.ಗಳು) ಮತ್ತು ಆಂಧ್ರಪ್ರದೇಶ (6.22 ಕೋಟಿ ರೂ.ಗಳು)-ಈ ರಾಜ್ಯಗಳಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.  ಈ ಅವಧಿಯಲ್ಲಿ ಖೊಟ್ಟಿನೋಟುಗಳ ವಿರುದ್ಧ ನಡೆದ ಕಾರ್ಯಾಚರಣೆಗಳಲ್ಲಿ ಸಿಬಿಐ ಮತ್ತು ಎನ್‍ಐಎ ತನಿಖಾ ಸಂಸ್ಥೆಗಳು ಭಾಗವಹಿಸಿದ್ದವು. ಭಯೋತ್ಪಾದನೆ ಸಂಘಟನೆಗಳಿಗೆ ಹಣಕಾಸು ನೆರವು ನೀಡುತ್ತಿರುವ ಪ್ರಕರಣಗಳನ್ನು ತನಿಖೆ ಮಾಡಲು ಕೇಂದ್ರ ಸರ್ಕಾರವು ಟೆರರ್ ಫಂಡಿಂಗ್ ಅಂಡ್ ಫೇಕ್ ಕರೆನ್ಸಿ ಸೆಲ್ (ಟಿಎಫ್‍ಎಫ್‍ಸಿ) ಘಟಕವನ್ನು ಸ್ಥಾಪಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin