ತುಮಕೂರಿಗೆ ಬಂತು 60 ಕೋಟಿ ಹೊಸ ನೋಟು

ಈ ಸುದ್ದಿಯನ್ನು ಶೇರ್ ಮಾಡಿ

Newss-notes

ತುಮಕೂರು, ನ.11- ಕೇಂದ್ರ ಸರ್ಕಾರ 500, 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಂಟಾಗಿರುವ ಚಿಲ್ಲರೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ತುಮಕೂರು ಜಿಲ್ಲೆಗೆ 60 ಕೋಟಿ ರೂ. ಹೊಸ ನೋಟುಗಳು ಬಂದಿವೆ ಎಂದು ಎಸ್‍ಬಿಎಂ ಬ್ಯಾಂಕ್ ಸಹಾಯಕ ಮಹಾಪ್ರಬಂಧಕ ಚಂದ್ರಕಾಂತ ಕಿಣಿ ತಿಳಿಸಿದ್ದಾರೆ.ಎರಡು ಸಾವಿರ ಮುಖ ಬೆಲೆಯ ಸುಮಾರು 60 ಕೋಟಿ ಈಗಾಗಲೇ ಜಿಲ್ಲೆಗೆ ಬಂದಿದ್ದು, ಎಸ್‍ಬಿಐ, ಎಸ್‍ಬಿಎಂ ಹಾಗೂ ಕೆನರಾ ಬ್ಯಾಂಕ್ ಜಿಲ್ಲಾಕೇಂದ್ರ ಕಚೇರಿಗೆ ಬಂದಿದ್ದು, ಇಂದಿನಿಂದ ಹೊಸ ನೋಟುಗಳು ಸಾರ್ವಜನಿಕರಿಗೆ ಸಿಗಲಿವೆ ಎಂದು ಅವರು ತಿಳಿಸಿದ್ದಾರೆ.ಈಗ ಲಭ್ಯವಿರುವ 2 ಸಾವಿರದ ಹೊಸ ನೋಟುಗಳನ್ನು ಜಿಲ್ಲೆಯ ಎಲ್ಲಾ ಬ್ಯಾಂಕುಗಳಿಗೆ ನೋಟುಗಳನ್ನು ರವಾನೆ ಮಾಡಲಾಗಿದ್ದು, ಸಾರ್ವಜನಿಕರು ಹಳೆ ನೋಟುಗಳನ್ನು ನೀಡಿ ಹೊಸ ನೋಟುಗಳನ್ನು ಪಡೆದುಕೊಳ್ಳಬಹುದು ಎಂದು ಅವರು, ಸಾರ್ವಜನಿಕರು ಅತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin