ಬೆಳಗಾವಿ ಸೂಪರ್ ಸೀಡ್ ಬೇಡ, ಮೇಯರ್-ಉಪಮೇಯರ್ ವಜಾಗೊಳಿಸಿ

ಈ ಸುದ್ದಿಯನ್ನು ಶೇರ್ ಮಾಡಿ

Sanjay-Shinde-upamahapaura
ಬೆಳಗಾವಿ, ನ.11- ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ರಾಜ್ಯೋತ್ಸವ ದಿನಾಚರಣೆಯಂದು ಕರಾಳ ದಿನಾಚರಣೆ ನಡೆಸಿ ನಾಡ ವಿರೋಧಿ ಕೃತ್ಯವೆಸಗಿದ ಮಹಾಪೌರರಾದ ಸರಿತಾ ಪಾಟೀಲ್ ಹಾಗೂ ಉಪಮಹಾಪೌರ ಸಂಜಯ್ ಶಿಂಧೆ ಅವರ ಮೇಲೆ ಪ್ರಕರಣ ದಾಖಲಿಸಿ ಸದಸ್ಯತ್ವ ರದ್ದುಪಡಿಸಬೇಕು. ಯಾವುದೇ ಕಾರಣಕ್ಕೂ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬಾರದೆಂದು ಹಲವು ಪಾಲಿಕೆ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದ್ದಾರೆ.ವಿವಿಧ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಬರ ಅಧ್ಯಯನ ನಡೆಸಲು ಇಂದು ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಪಾಲಿಕೆಯ ಕನ್ನಡ ಹಾಗೂ

ಉರ್ದು ಭಾಷಿಕ ನಗರ ಸೇವಕರು ಮನವಿ ಸಲ್ಲಿಸಿ ಮೇಯರ್ ಹಾಗೂ ಉಪಮೇಯರ್ ಅವರನ್ನು ವಜಾ ಮಾಡಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವುದು ಬೇಡ ಎಂದು ಆಗ್ರಹಿಸಿದರು.ಪಾಲಿಕೆಯ ವಿಪಕ್ಷ ನಾಯಕ ರಮೇಶ್ ಸೊಂಟಕ್ಕಿ, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ, ದೀಪಕ ಜಮಖಂಡಿ, ಕೆರೆಕೆರ ಮತ್ತಿತರ ಎಲ್ಲ ಸದಸ್ಯರೂ ಸೇರಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.ಬೆಳಗಾವಿ ಕರಾಳ ದಿನಾಚರಣೆ ಆಚರಿಸಿದ ಪ್ರಕರಣ, ಪ್ರಾದೇಶಿಕ ಆಯುಕ್ತರ ವರದಿ ಸರ್ಕಾರದ ಪರಿಶೀಲನೆಯಲ್ಲಿದ್ದು, ನಂತರ ನಿರ್ಧಾರ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin