ಸರಕುಗಳ ಮೇಲೆ ಪ್ರವೇಶ ತೆರಿಗೆ ವಿಧಿಸುವ ಅಧಿಕಾರ ಆಯಾ ರಾಜ್ಯದ್ದು : ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

Supreme_Court_of_India_-_Retouched

ನವದೆಹಲಿ,ನ.11-ತನ್ನ ಗಡಿಯೊಳಗೆ ಬರುವ ಸರಕುಗಳ ಮೇಲೆ ಪ್ರವೇಶ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಆಯಾ ರಾಜ್ಯಗಳ ಕಾನೂನುಗಳ ಸಾಂವಿಧಾನಿಕ ಸಿಂಧುತ್ವವನ್ನು ಇಂದು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.  ಸಂವಿಧಾನದ 304 ಬಿ ವಿಧಿಯಡಿ ಈ ಅಧಿಕಾರ ಚಲಾಯಿಸಲು ರಾಜ್ಯಗಳಿಗೆ ರಾಷ್ಟ್ರಪತಿಯವರ ಸಮ್ಮತಿ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇದರೊಂದಿಗೆ ಈ ವಿಷಯದಲ್ಲಿ ಆಯಾ ರಾಜ್ಯಗಳಿಗೆ ಇರುವ ಪರಮಾಧಿಕಾರವನ್ನು ಸರ್ವೋಚ್ಛ ನ್ಯಾಯಾಲಯ ದೃಢಪಡಿಸಿದೆ.  ಮುಖ್ಯ ನ್ಯಾಯಮೂರ್ತಿ ಸಿ.ಎಸ್.ಠಾಕೂರ್ ನೇತೃತ್ವದ 9 ನ್ಯಾಯಾಧೀಶರ ಪೀಠವು, ಆಯಾ ರಾಜ್ಯಗಳಿಗೆ ಪ್ರವೇಶಿಸುವ ಸರಕುಗಳ ಮೇಲೆ ತೆರಿಗೆ ವಿಧಿಸುವ ಪರಮಾಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡುವ ಮೂಲಕ ಈ ಸಂಬಂಧ ತಲೆದೋರಿದ್ದ ತಾರತಮ್ಯ ಮತ್ತು ವಿವಾದ ಇತ್ಯರ್ಥವಾದಂತಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin