2043ಕ್ಕೆ ಇಡೀ ವಿಶ್ವವೇ ಉಗ್ರರ ಕೈವಶವಾಗಲಿದೆ..! : ನಿಜವಾಗುತ್ತಾ ಬಾಬಾ ವಂಗಾ ಭವಿಷ್ಯವಾಣಿ..?

ಈ ಸುದ್ದಿಯನ್ನು ಶೇರ್ ಮಾಡಿ

Baba-Vanga-02

ವಾಷಿಂಗ್ಟನ್,ನ.12- ಇಡೀ ವಿಶ್ವ 2043ರ ವೇಳೆಗೆ ಭಯೋತ್ಪಾದಕರ ವಶವಾಗಲಿದೆ, 2066ರಲ್ಲಿ ಉಗ್ರಗಾಮಿಗಳು ಸರ್ವನಾಶವಾಗಲಿದ್ದಾರೆ, ಒಬಾಮಾ  ಅಮೆರಿಕದ ಕಟ್ಟಕಡೆಯ ಅಧ್ಯಕ್ಷ ಹಾಗೂ ಅವರ ಅಧಿಕಾರ ಅವಧಿಯ ನಂತರ ಜಗತ್ತಿನ ಅತ್ಯಂತ ಬಲ ಮತ್ತು ಶ್ರೀಮಂತ ರಾಷ್ಟ್ರ ಅಮೆರಿಕ ಅತಂತ್ರವಾಗಲಿದೆ-ಇದು ಬಲ್ಗೇರಿಯಾದ ಪ್ರವಾದಿ ಅಂಧ ವೃದ್ಧೆ ಬಾಬಾ ವಂಗಾ ನುಡಿದಿರುವ ಆತಂಕಕಾರಿ ಭವಿಷ್ಯವಾಣಿ.  ಈ ವಯೋವೃದ್ಧೆ ನುಡಿದಿರುವ ಭವಿಷ್ಯ ಈವರೆಗೆ ಯಾವುದೂ ಸುಳ್ಳಾಗಿಲ್ಲ. ತಾವು ಸಾಯುವುದಕ್ಕೂ ಮುನ್ನ ಅವರು ಪ್ರಪಂಚದ ಆಗುಹೋಗುಗಳು ಮತ್ತು ಆತಂಕಕಾರಿ ಸಂಗತಿಗಳ ಬಗ್ಗೆ ನಿಖರ ಮಾಹಿತಿ ನೀಡಿರುವುದು ವಿಶ್ವದಲ್ಲಿ ಆತಂಕಕ್ಕೆ ಕಾರಣವಾಗಿದೆ. 1996ರಲ್ಲಿ 85ನೇ ವಯಸ್ಸಿನ ಬಾಬಾ ವಂಗಾ ನಿಧಾನರಾದರು. ಅವರು ಸಾಯುವುದಕ್ಕೂ ಮುನ್ನ ಅನೇಕ ವಿಷಯಗಳ ಬಗ್ಗೆ ಭವಿಷ್ಯ ನುಡಿದಿದ್ದು , ಜಗದ್ವಿಖ್ಯಾತ ಜ್ಯೋತಿಷಿ ನಾಸ್ಟ್ರೊಡೊಮಸ್ ಅವರ ಭವಿಷ್ಯವಾಣಿಯಂತೆ ಇವರ ಮುನ್ಸೂಚನೆಗಳು ನಿಖರವಾಗಿದೆ ಎಂದು ವಿಶ್ಲೇಷಿಸಲಾಗಿದೆ.

2004ರಲ್ಲಿ ಏಷ್ಯಾದ ವಿವಿಧ ದೇಶಗಳ ಮೇಲೆ ವಿನಾಶಕಾರಿ ಸುನಾಮಿ ಬಂದೆರಗಲಿದ್ದು, ಸಾವಿರಾರು ಮಂದಿ ದುರಂತ ಸಾವಿಗೀಡಾಗಲಿದ್ದಾರೆ ಎಂದು ಇವರು ಭವಿಷ್ಯ ನುಡಿದಿದ್ದರು. ಅದೇ ರೀತಿ 9/11ರಂದು ಅಮೆರಿಕದ ಮೇಲೆ ಭಾರೀ ವಿಧ್ವಂಸಕ ದಾಳಿ ನಡೆಯಲಿದೆ ಎಂದು ಮುನ್ಸೂಚನೆ ನೀಡಿದ್ದರು. ಈ ಭವಿಷ್ಯಗಳು ಅಕ್ಷರಶಃ ನಿಜವಾಗಿದೆ.  ಅದೇ ರೀತಿ ಅಮೆರಿಕದ 44ನೇ ಅಧ್ಯಕ್ಷರಾಗಿ ಆಫ್ರಿಕಾ ಮೂಲದ ಅಮೆರಿಕನ್ ವ್ಯಕ್ತಿ ಚುನಾಯಿತರಾಗಲಿದ್ದಾರೆ ಮತ್ತು ಅವರು ಎರಡು ಅವಧಿಗಳ ಕಾಲ ರಾಷ್ಟ್ರಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ವಂಗಾ ನುಡಿದಿದ್ದರು.

ಈಗ ಅವರು ಮುಂಗಾಣುವಿಕೆಯ ಕೆಲವು ಭವಿಷ್ಯವಾಣಿಗಳು ಆತಂಕಕ್ಕೆ ಕಾರಣವಾಗಿದೆ. 2043ರ ವೇಳೆಗೆ ಇಡೀ ವಿಶ್ವ ಭಯೋತ್ಪಾದಕರ ಕೈ ವಶವಾಗಲಿದೆ. ಸಿರಿಯಾದ ಅತ್ಯಂತ ಬಲಿಷ್ಠ ಉಗ್ರರು(ಇಸ್ಲಾಮಿಕ್ ಸ್ಟೇಟ್) ಜಗತ್ತನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಲಿದ್ದಾರೆ. ರೋಮ್ ಅವರ ಕೇಂದ್ರ ಸ್ಥಾನವಾಗಲಿದೆ ಎಂದು ಹೇಳಿದ್ದಾರೆ.  ಇದಾದ 23 ವರ್ಷಗಳ ಬಳಿಕ ಅಂದರೆ 2066ರಲ್ಲಿ ಜಗತ್ತಿನಲ್ಲಿರುವ ಎಲ್ಲಾ ಭಯೋತ್ಪಾದಕರು ಮತ್ತು ಉಗ್ರರು ಸರ್ವನಾಶವಾಗಲಿದ್ದಾರೆ ಎಂದು ಭವಿಷ್ಯ ನುಡಿದಿರುವ ಅವರು, ಉಗ್ರರ ಅಂತ್ಯ ಯಾವ ರೀತಿ ಆಗಲಿದೆ ಎಂಬುದರ ಬಗ್ಗೆ ನಿಖರವಾಗಿ ತಿಳಿಸಿಲ್ಲ.  ಡೊನಾಲ್ಡ್ ಟ್ರಂಪ್ ಅಮೆರಿಕದ ಕೊನೆಯ ಅಧ್ಯಕ್ಷ ಹಾಗೂ ಅವರ ಅಧಿಕಾರ ಅವಧಿಯ ನಂತರ ಆ ರಾಷ್ಟ್ರದ ಸ್ಥಿತಿ ಅತಂತ್ರವಾಗಲಿದೆ ಎಂಬುದು ವಂಗಾ ಭವಿಷ್ಯವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin