ಆಕಾಶದಿಂದ ಧರೆಗುರುಳಿದ ತಿಳಿನೀಲಿ ಮಂಜುಗಡ್ಡೆ

ಈ ಸುದ್ದಿಯನ್ನು ಶೇರ್ ಮಾಡಿ

99
ಬಾಗೇಪಲ್ಲಿ, ನ.13- ಇದ್ದಕ್ಕಿದ್ದಂತೆ ಆಕಾಶದಿಂದ ಬಿದ್ದ ಭಾರಿ ಗಾತ್ರದ ತಿಳಿ ನೀಲಿ ಬಣ್ಣದ ಮಂಜುಗಡ್ಡೆ ಇಲ್ಲಿನ ನಾಗರೀಕರಲ್ಲಿ ಅಚ್ಚರಿ ಸೃಷ್ಟಿಸಿದೆ.
ತಾಲೂಕಿನ ಸೂರಪ್ಪಲ್ಲಿಯಲ್ಲಿ ರೈತ ವೆಂಕಟಪ್ಪ ತನ್ನ ಹೊಲದಲ್ಲಿ ದನ ಮೇಯಿಸುತ್ತಿದ್ದಾಗ ಆಕಾಶ ದಿಂದ ಇದ್ದಕ್ಕಿದ್ದಂತೆ ಭಾರಿಗಾತ್ರದ ಮಂಜುಗಡ್ಡೆ ಬಿದ್ದಿದೆ.ಮಂಜುಗಡ್ಡೆ ಬಿದ್ದ ರಭಸಕ್ಕೆ ಗಡ್ಡೆ ನುಚ್ಚುನೂರಾಗಿದೆ.ಆಕಾಶದಿಂದ ಬಿದ್ದ ಮಂಜುಗಡ್ಡೆಯ ಚೂರುಗಳನ್ನು ವೆಂಕಟಪ್ಪ ಗ್ರಾಮಸ್ಥರಿಗೆ ತಂದು ತೋರಿಸಿದ್ದಾನೆ.ಆದರೆ, ಆಕಾಶದಿಂದ ಬಿದ್ದ ಮಂಜುಗಡ್ಡೆ ತಿಳಿ ನೀಲಿ ಬಣ್ಣದಿಂದ ಕೂಡಿದ್ದು, ಸೀಮೆಎಣ್ಣೆ ವಾಸನೆ ಬರುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡ್ತು ಆನ್ನೋ ಗಾದೆ ಮಾತಿನ ಹಾಗೆ ಆಕಾಶದಿಂದ ವಿಚಿತ್ರವಾದ ಮಂಜುಗಡ್ಡೆ ಬಿದ್ದಿರುವುದು ಯಾವುದೋ ಕೇಡು ಸಂಭವಿಸುವ ಮುನ್ಸೂಚನೆ ಎಂದೆ ಸ್ಥಳೀಯರು ಭಾವಿಸುತ್ತಿದ್ದಾರೆ.ವಿಜ್ಞಾನಿಗಳು ತಿಳಿ ನೀಲಿ ಬಣ್ಣದ ಮಂಜುಗಡ್ಡೆ ಬೀಳಲು ಕಾರಣ ಏನೆಂಬುದನ್ನು ಪತ್ತೆ ಹಚ್ಚಬೇಕಾಗಿದೆ.

ಬಹುಶ: ಕಲುಷಿತ ವಾತಾವರಣದಿಂದ ಮಂಜುಗಡ್ಡೆ ಬಿದ್ದಿರಬಹುದು ಎಂದು ಕೆಲವರು ಆಭಿಪ್ರಾಯಪಟ್ಟಿದ್ದಾರೆ.

 

 

► Follow us on –  Facebook / Twitter  / Google+

Facebook Comments

Sri Raghav

Admin