‘ಕನ್ನೇಶ್ವರ’ನಾಗಿ ರಿಯಲ್ ಸ್ಟಾರ್ ಉಪೇಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

Upendra-02

ಸ್ಯಾಂಡಲ್‍ವುಡ್‍ನಲ್ಲಿ ಉಪ್ಪಿಯಾ ಕಮಾಲ್ ಮತ್ತೆ ಆರಂಭಗೊಂಡಿದೆ. ಕನ್ನೇಶ್ವರ ಚಿತ್ರದಲ್ಲಿ ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಹಿರಿಯ ನಿರ್ದೇಶಕ ನಾಗಣ್ಣ ಅವರು ನಿರ್ದೇಶನ ಮಾಡುತ್ತಿ ದ್ದಾರೆ. ಇವರಿಬ್ಬರ ಕಾಂಬಿನೇಷನ್‍ನಲ್ಲಿ ಬಂದಂತಹ ಕುಟುಂಬ ಚಿತ್ರ ಭರ್ಜರಿ ಯಶಸ್ಸನ್ನು ಕಂಡಿತು. ಮತ್ತೆ ಇದೇ ಜೋಡಿ ಒಂದಾಗಿದ್ದಾರೆ.  ಈ ಚಿತ್ರವನ್ನು ಅಜಯ್, ಗುರು ಪ್ರಸಾದ್ ಹಾಗೂ ರಜ್ಜಿ ಜಗನ್ನಾಥ್ ನಿರ್ಮಿಸುತ್ತಿದ್ದು, ಬಹಳ ವಿಭಿನ್ನ ಕಥಾ ಹಂದರವನ್ನು ಒಳಗೊಂಡಿರುವಂತಹ ಈ ಚಿತ್ರವನ್ನು ಅದ್ಧೂರಿಯಾಗಿ ತೆರೆ ಮೇಲೆ ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಉಪ್ಪಿಗೆ ಜೋಡಿಯಾಗಿ ನಾಯಕಿ ವೇದಿಕಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಶ್ರೀಧರ್.ವಿ ಸಂಭ್ರಮ್ ಅವರ ಸಂಗೀತವಿದ್ದು, ರಮೇಶ್ ಕುಮಾರ್ ಅವರ ಛಾಯಾಗ್ರಹಣವಿದೆ. ಈಗಾಗಲೇ ಯಾವುದೇ ಸದ್ದನ್ನೇ ಮಾಡದೆ ಚಿತ್ರೀಕರಣವನ್ನು ಆರಂಭಿಸಿದೆ.

ಚಿತ್ರದ ಶೀರ್ಷಿಕೆ ಕೇಳಿದರೆ ಇದೊಂದು ಭಕ್ತಿ ಪ್ರಧಾನ ಚಿತ್ರ ಎಂಬಂತೆ ಕಂಡರೂ ಸಹ ಉಪ್ಪಿಗೆ ಹೊಂದುವ ಹಾಗೆ ಕಮರ್ಷಿಯಲ್ ಅಂಶಗಳನ್ನು ಇಟ್ಟುಕೊಂಡು ಈ ಚಿತ್ರದ ಕಥೆಯನ್ನು ಸಿದ್ಧಪಡಿಸಿದ್ದಾರಂತೆ. ಒಟ್ಟಾರೆ ಗಾಂಧಿನಗರದ ಮಂದಿಯ ಪ್ರಕಾರ ಇದೊಂದು ಪಕ್ಕಾ ಮಾಸ್ ಎಂಟರ್‍ಟೈನರ್ ಚಿತ್ರವಾಗಿ ಹೊರ ಬರಲಿದೆ ಎಂಬ ಅಭಿಪ್ರಾಯ ಹೊರ ಬರುತ್ತಿದ್ದು, ಸ್ಟಾರ್ ನಿರ್ದೇಶಕ ಹಾಗೂ ಸ್ಟಾರ್ ನಟನ ಕಾಂಬಿನೇಷನ್‍ನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರವು ಸ್ಯಾಂಡಲ್‍ವುಡ್‍ನಲ್ಲಿ ಸಂಚಲನವನ್ನು ಮೂಡಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಒಟ್ಟಾರೆ ಬಹಳಷ್ಟು ಅನುಭವಿ ಕಲಾವಿದರು ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

Facebook Comments

Sri Raghav

Admin