ಕೋರಮಂಡಲ್ ಸಕ್ಕರೆ ಕಾರ್ಖಾನೆ ಬಗೆಗಿನ ಅಪಪ್ರಚಾರಕ್ಕೆ ಕಿವಿಗೊಡದಿರಲು ಸಿ.ಪವನ್ ಕುಮಾರ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

1

ಕೆ.ಆರ್.ಪೇಟೆ, ನ.13-ತಾಲೂಕಿನ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ವಿರುದ್ದ ಕೆಲವರು ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದ್ದು ಕಾರ್ಖಾನೆಯ ಕಬ್ಬು ಅರೆಯುವಿಕೆಯ ಕಾರ್ಯದ ಬಗ್ಗೆ ರೈತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಯಾವುದೇ ವದಂತಿಗಳಿಗೆ ಕಿವಿಗೊಡದೆ ಕಾರ್ಖಾನೆಯ ಕಬ್ಬು ಅರೆಯುವಿಕೆಯ ಕಾರ್ಯಕ್ಕೆ ಸಹಕರಿಸಬೇಕೆಂದು ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಸಿ.ಪವನ್ ಕುಮಾರ್ ಮನವಿ ಮಾಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬಿನ ಅಭಾವವಿರುವ ಇಂದಿನ ಸಂಕಷ್ಟದ ಸನ್ನಿವೇಶದಲ್ಲಿ ಕೋರಮಂಡಲ್ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ತಮ್ಮ ಕಾರ್ಖಾನೆಗಳಿಗೆ ಸಾಗಿಸಿಕೊಳ್ಳಲು ಇತರೆ ಕಾರ್ಖಾನೆಗಳ ಸಿಬ್ಬಂದಿ ಮತ್ತು ಏಜೆಂಟರು ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿದ್ದಾರೆ ಎಂದು ಆರೋಪಿಸಿದರು.ನಿತ್ಯ 4000 ಟನ್ ಕಬ್ಬು ನುರಿಸುವ ಸಾಮರ್ಥ್ಯವಿರುವ ಕೋರಮಂಡಲ್ ಕಾರ್ಖಾನೆ 2015-16ನೇ ಸಾಲಿನಲ್ಲಿ 7.36 ಲಕ್ಷ ಟನ್ ಕಬ್ಬನ್ನು ಅರೆದು ಶೇ. 9.50 ಸಕ್ಕರೆ ಇಳುವರಿ ಪಡೆದಿದೆ.

 

ಕಬ್ಬು ಸರಬರಾಜು ಮಾಡಿದ ರೈತರಿಗೆ ಕೇಂದ್ರ ಸರ್ಕಾರ ಶಿಫಾರಸ್ಸು ಮಾಡಿದ್ದ ಸಕ್ಕರೆ ಇಳುವರಿ ಆಧಾರಿತ ನ್ಯಾಯಸಮ್ಮತ ಹಾಗೂ ಲಾಭದಾಯಕ ಬೆಲೆಯನ್ನು ನೀಡಲು ಸಾಧ್ಯವಿಲ್ಲದೇ ಇದ್ದರೂ ಸಹ ನಮ್ಮ ಕಾರ್ಖಾನೆಯು ಕಳೆದ ಸಾಲಿನ ಸಕ್ಕರೆ ಇಳುವರಿಯ ಆಧಾರದ ಮೇಲೆ ರೂ.2,219ಗಳನ್ನು ಪ್ರತಿ ಟನ್ನಿಗೆ ಪಾವತಿಸಿದೆ ಎಂದು ಮಾಹಿತಿ ನೀಡಿದರು.ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಟನ್ನುಗಳಷ್ಟು ಕಬ್ಬನ್ನು ಅರೆಯುವ ಗುರಿ ಹೊಂದಿದ್ದರೂ ಸತತ ಬರಗಾಲ, ವಿದ್ಯುತ್ ಅಭಾವ ಹಾಗೂ ಅಂತರ್ಜಲ ಕುಸಿತದ ಪರಿಣಾಮಗಳಿಂದ ಕಬ್ಬಿನ ಲಭ್ಯತೆಯು ಗಣನೀಯವಾಗಿ ಕಡಿಮೆಯಾಗುವ ಸೂಚನೆಗಳಿರುತ್ತವೆ. ಯಾವುದೇ ದೊಡ್ಡ ಪ್ರಮಾಣದ ಕಾರ್ಯಾಗಾರಗಳನ್ನು ಪ್ರಾರಂಭಿಸುವಾಗ ಈ ತರಹದ ಅಡಚಣೆಗಳು ಸಾಮಾನ್ಯ. ಆದರೂ ಸಹ ಕಬ್ಬು ಬೆಳೆಗಾರರ ಹಿತದೃಷ್ಠಿಯನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಖಾನೆಯು ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ಸಲುವಾಗಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದಿಂದ ವಾಣಿಜ್ಯ ದರದಲ್ಲಿ ವಿದ್ಯುತ್‍ನ್ನು ಖರೀದಿಸಿ ಕಬ್ಬು ಸರಬರಾಜುದಾರರಿಗೆ ತೊಂದರೆಯಾಗದಂತೆ ಕ್ರಮ ವಹಿಸಿದೆ ಎಂದರು.

 

 

► Follow us on –  Facebook / Twitter  / Google+

Facebook Comments

Sri Raghav

Admin