ಡಾಬದಲ್ಲಿ ಘರ್ಷಣೆ : ರಕ್ಷಣೆಗಾಗಿ ರಸ್ತೆಗೆ ಓಡಿದ ಯುವಕ ಬೈಕ್‍ಗೆ ಡಿಕ್ಕಿ ಹೊಡೆದು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

accident

ತುಮಕೂರು,ನ.13- ಡಾಬಾದಲ್ಲಿ ಊಟ ಮಾಡುತ್ತಿದ್ದ ಹುಡುಗರ ಗುಂಪು ಪರಸ್ಪರ ಹೊಡೆದಾಡಿಕೊಂಡು ಗಲಾಟೆ ಮಾಡುತ್ತಿದ್ದಾಗ ರಸ್ತೆಗೆ ಓಡಿಬಂದ ಯುವಕ ಪೊಲೀಸ್ ಬೈಕ್‍ಗೆ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ನಗರ ಹೊರವಲಯದಲ್ಲಿ ನಡೆದಿದೆ.  ಮೃತನನ್ನು ಮೂಲತಃ ಪಾವಗಡ ತಾಲ್ಲೂಕಿನ ಜಂಗಮನಹಳ್ಳಿ ನಿವಾಸಿ ನಾಗಾರ್ಜುನ್‍ಗೌಡ(24) ಎಂದು ತಿಳಿದುಬಂದಿದೆ.  ತುಮಕೂರಿನ ಹನುಮಂತಪುರದ ಬಳಿ ಇರುವ ಸಿಟ್ರೀಯ ಬಾರ್ ಅಂಡ್ ರೆಸ್ಟೋರೆಂಟ್‍ನಲ್ಲಿ ನಿನ್ನೆ ರಾತ್ರಿ 15 ಜನರ ಗುಂಪೋದು ಊಟ ಮಾಡುತ್ತಾ ಕುಳಿತಿತ್ತು. ಈ ವೇಳೆ ಅದೇ ಬಾರ್‍ಗೆ ಬೆಂಗಳೂರಿನ ಹೊರಭಾಗದಲ್ಲಿರುವ ಅಕ್ಷಯ್, ಇಂಜಿನಿಯರಿಂಗ್ ವಿದ್ಯಾರ್ಥಿಯಾದ ನಾಗಾರ್ಜುನ್‍ಗೌಡ ಸೇರಿದಂತೆ 5-6 ವಿದ್ಯಾರ್ಥಿಗಳು ಊಟಕ್ಕೆಂದು ಬಂದಿದ್ದಾರೆ. ಇದನ್ನು ಕಂಡ 15ಜನರ ಗುಂಪು ತಪ್ಪಾಗಿ ಅರ್ಥೈಸಿಕೊಂಡು ನಮ್ಮ ಮೇಲೆ ಹಲ್ಲೆ ಮಾಡಲು ಬಂದಿದ್ದಾರೆ ತಿಳಿದು, ಕ್ಷುಲ್ಲಕ ವಿಚಾರವೆತ್ತಿ ಅವರ ಮೇಲೆ ಜಗಳ ತೆಗೆದಿದ್ದಾರೆ.
ಜಗಳದ ವೇಳೆ ರಾಡ್ ಮತ್ತು ಬಾಟಲ್‍ಗಳಿಂದ 15 ಜನರ ಗುಂಪು ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಥಳಿಸಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲೆಂದು ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿದ್ದಾರೆ.ನಾಗಾರ್ಜುನ್‍ಗೌಡ ಕೂಡ ತಪ್ಪಿಸಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ 4ರ ರಸ್ತೆಗೆ ಓಡಿ ಬಂದಿದ್ದಾನೆ. ಇದೇ ವೇಳೆ ಬೆಂಗಳೂರಿನಿಂದ ಹಾವೇರಿಗೆ ತೆರಳುತ್ತಿದ್ದ ಸಿಪಿಆರ್‍ಎಫ್‍ನ ಪೊಲೀಸ್ ಪೇದೆಯ ಬೈಕ್, ನಾಗಾರ್ಜುನ್‍ಗೆ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ರಭಸಕ್ಕೆ ಆತ ಸ್ಥಳದಲ್ಲೇ ಮೃತಪಟ್ಟಿದ್ದು ಪೇದೆ ಸ್ಥಿತಿಯೂ ಚಿಂತಾಜನಕವಾಗಿದೆ. ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್‍ಪಿ ಚಿದಾನಂದ ಸ್ವಾಮಿ, ವೃತ್ತ ನಿರೀಕ್ಷಕ ಕರಿಗಿರಿಯಪ್ಪ ಪರಿಶೀಲನೆ ನಡೆಸಲಾಗಿದ್ದು, ಗ್ರಾಮಾಂತರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಕಾಂತರಾಜು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

 

Facebook Comments

Sri Raghav

Admin