ಭಾರತದ ಪ್ರತಿಯೊಬ್ಬರಿಗೂ ಮಂಗಳಯಾನ ಅವಕಾಶ : ಇದು ಮೋದಿಯ ಹೊಸ ಗಿಫ್ಟ್ !

ಈ ಸುದ್ದಿಯನ್ನು ಶೇರ್ ಮಾಡಿ

modi-mars-gift

ನವದೆಹಲಿ, ನ.13-ಕಾಳಧನಿಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಭಾರತದ ಪ್ರತಿಯೊಬ್ಬರಿಗೂ ಮಂಗಳಯಾನ ಅವಕಾಶವನ್ನು ನೀಡಿದ್ದಾರೆ. ಮೋದಿ ಕೈಗೊಂಡಿರುವ ಮಾಸ್ಟರ್ ಸ್ಟ್ರೋಕ್‍ಗೂ ಮಂಗಳಯಾನಕ್ಕೂ ಎತ್ತಣಿಂದೆತ್ತ ಸಂಬಂಧ? ಇದೇನಿದು ಮೋದಿಯ ಹೊಸ ಸ್ಕೀಮ್? ಎಂದು ನಿಮಗೆ ಅಚ್ಚರಿಯಾಗಬಹುದು.  ಭಾರತದ ಪ್ರಥಮ ಮಂಗಳಯಾನ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ ಬಿಡುಗಡೆ ಮಾಡಿರುವ ಹೊಸ ಕರೆನ್ಸಿಯಲ್ಲಿ ಸಾಂಕೇತಿಕವಾಗಿ ಬಿಂಬಿಸಲಾಗಿದೆ. ಗರಗರಿ ಹೊಚ್ಚ ಹೊಸ ನೋಟುಗಳಲ್ಲಿರುವ ಮಂಗಳಯಾನದ ಚಿತ್ರವು ಭಾರತೀಯರು ಹೆಮ್ಮೆಪಡುವಂತೆ ಮಾಡಿದೆ. ಅಲ್ಲದೇ, ಭಾರತದ ಮಂಗಳಯಾನ ಮತ್ತು ಆರ್ಥಿಕ ಕ್ರಾಂತಿಯ ಪ್ರತೀಕವಾಗಿರುವ ಕಾಳಧನದ ಸರ್ಜಿಕಲ್ ಸ್ಟ್ರೈಕ್ ಇವೆರಡು ಇದೀಗ ಒಂದೇ ಹಾಳೆಯಲ್ಲಿರುವುದು ಭಾರತದ ಕೀರ್ತಿ ಪತಾಕೆ ಹಾರಾಡುವಂತೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.  ಕಾಳಧನ, ಖೋಟಾನೋಟು, ಭಷ್ಟಾಚಾರ ಹಾಗೂ ಭಯೋತ್ಪಾದನೆ ಚಟುವಟಿಕೆ ನಿಗ್ರಹಗಳಿಗಾಗಿ ಮೋದಿ ಕೈಗೊಂಡಿರುವ ದಿಟ್ಟ ಕ್ರಮದಿಂದಾಗಿ ಭಾರತದ ಆರ್ಥಿಕ ವ್ಯವಸ್ಥೆಯು ಪ್ರಗತಿಪಥದ ಹೊಸ ಕಕ್ಷೆಯಲ್ಲಿ ಸಾಗಲಿದೆ ಎಂದು ಮಂಗಳಯಾನ ಮತ್ತು ನೋಟಿನ ಬಗ್ಗೆ ತುಲನಾತ್ಮಕ ಸಮೀಕರಣ ಮಾಡಲಾಗುತ್ತಿದೆ.

 

ಹೊಸ ಕರೆನ್ಸಿ ನೋಟಿನ ಮೇಲೆ ಭಾರತದ ಹೆಮ್ಮೆಯ ಪ್ರತೀಕಗಳ ಇತರ ಚಿತ್ರಗಳನ್ನು ಛಾಪಿಸಬೇಕೆಂಬುದು ಅನೇಕರ ಆಯ್ಕೆಯಾಗಿತ್ತು. ಆದರೆ ದೂರದೃಷ್ಟಿಗೆ ಹೆಸರಾದ ಚತುರ ಮೋದಿ ಅವರು ಹೊಸ ನೋಟಿನಲ್ಲಿ ಮಂಗಳಯಾನದ ಚಿತ್ರವೇ ಸಾಂಕೇತಿಕವಾಗಿರಬೇಕೆಂದು ಪ್ರತಿಪಾದಿಸಿದ್ದರು ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.  ಮೇಲಾಗಿ ಪ್ರಧಾನಿಯವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋದ ದೊಡ್ಡ ಅಭಿಮಾನಿ. ಮಂಗಳಯಾನ ಯೋಜನೆ ಯಶಸ್ಸಿಗೆ ಹೆಮ್ಮೆ ಪಟ್ಟವರು. ಹೀಗಾಗಿ ಭಾರತದ ಮೇಕ್ ಇನ್ ಇಂಡಿಯಾ ಸ್ಫೂರ್ತಿಯೂ ಮಂಗಳಯಾನ ಸಂಕೇತವಾಗಿ ಭಾರತೀಯ ಕೈಗಳ ಮೂಲಕ ಪ್ರತಿದಿನ ಚಲಾವಣೆ ಆಗುವ ನೋಟಿನಲ್ಲಿರಬೇಕು ಎಂಬ ಸಲಹೆ ಮಾಡಿದರು. ತತ್ಪರಿಣಾಮವಾಗಿ ಈಗ ನಸುಗೆಂಪು ಬಣ್ಣದ ಹೊಸ ಕರೆನ್ಸಿಯಲ್ಲಿ ಭಾರತದ ಬಾಹ್ಯಾಕಾಶ ನೌಕೆ ಕೆಂಪುಬಣ್ಣದ ಮಂಗಳನ ಅಂಗಳಕ್ಕೆ ಕಾಲಿಡುತ್ತಿರುವ ಚಿತ್ರವು ರಾರಾಜಿಸುತ್ತಿದೆ. ಹೀಗಾಗಿ ಎಲ್ಲರಿಗೂ ಮಂಗಳಯಾನದ ಕೊಡುಗೆಯನ್ನು ಪ್ರಧಾನಿ ನೀಡಿ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin