ಕಿಂಗ್‍ಖಾನ್‍ಗೆ ಮಿಲ್ಕಿಬ್ಯೂಟಿ ತಮನ್ನಾ ಗುಣಗಾನ

ಈ ಸುದ್ದಿಯನ್ನು ಶೇರ್ ಮಾಡಿ

 

thammanna

ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್‍ರನ್ನು ಎಲ್ಲ ಮಹಿಳೆಯರು ಇಷ್ಟಪಡುತ್ತಾರೆ. ಅವರು ಶ್ರೇಷ್ಠ ಮಾನವೀಯ ಮೌಲ್ಯಗಳ ಅದ್ಭುತ ನಟ. ಶಾರುಖ್‍ಗಿಂತ ಉತ್ತಮ ನಟರು ಇನ್ನೊಬ್ಬರಿಲ್ಲ-ಹೀಗೆ ಕಿಂಗ್‍ಖಾನ್ ಬಗ್ಗೆ ಗುಣಗಾನ ಮಾಡಿದ್ದಾಳೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ.  ಮುಂಬೈನಲ್ಲಿ ಶನಿವಾರ ರಾತ್ರಿ ನಡೆದ ವರ್ಣರಂಜಿತ ಲಕ್ಸ್ ಗೋಲ್ಡನ್ ರೋಸ್ ಅವಾರ್ಡ್ ಸಮಾರಂಭದಲ್ಲಿ ತಮನ್ನಾ ಈ ಪ್ರಶಂಸೆ ಮಾತುಗಳನ್ನಾಡುತ್ತಿದ್ದರೆ ಅಲ್ಲೇ ಇದ್ದ ಶಾರುಖ್ ನಾಚಿ ನೀರಾದರು. ಸಿನಿಮಾ ಇರಲಿ, ಜಹೀರಾತುಗಳಿರಲಿ ಅವುಗಳಲ್ಲಿ ಎಸ್‍ಆರ್‍ಕೆ ಎಲ್ಲರನ್ನೂ ವಿಶೇಷ ರೀತಿಯಲ್ಲಿ ಆಕರ್ಷಿಸುತ್ತಾರೆ. ಇಂಥ ಸ್ಪೆಷಲ್ ಸ್ಟಾರ್ ಅಟ್ರಾಕ್ಷನ್ ಇರುವುದು ಕೆಲವೇ ಕೆಲವು ಮಂದಿಗೆ ಮಾತ್ರ ಎಂದು ತಮನ್ನಾ ಹೇಳಿದಳು.  ಸಮಾರಂಭದ ಬಳಿಕ ಮಾಧ್ಯಮ ಪ್ರತಿನಿಧಿ ಗಳು ಗ್ಲಾಮರ್ ಬೆಡಗಿಯನ್ನು ಮುತ್ತಿಕೊಂಡ ಬಾಹುಬಲಿ ನಿರ್ಮಾಪಕರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ಪಡೆಯಲು ಯತ್ನಿಸಿದಾಗ. ಹೌದಾ.. ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆ ಬಗ್ಗೆ ನಾನು ಕೇಳಿಯೂ ಇಲ್ಲ ಎಂದು ಜರಿಕೊಂಡರು. ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ಬಾಹುಬಲಿ: ದಿ ಬಿಗಿನಿಂಗ್ ಸಿನಿಮಾದಲ್ಲಿ ಗಮನಸೆಳೆದಿರುವ ತಮನ್ನಾ, ಮುಂದಿನ ವರ್ಷ ಏಪ್ರಿಲ್‍ನಲ್ಲಿ ತೆರೆಕಾಣುವ ಮುಂದಿನ ಸರಣಿಯಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾಳೆ.

 

► Follow us on –  Facebook / Twitter  / Google+

Facebook Comments

Sri Raghav

Admin