ನಿಷೇಧಿತ ನೋಟು ಸಾಗಿಸುತ್ತಿದ್ದ ಲಾರಿ ಪಲ್ಟಿ:ಚಾಲಕ – ಕ್ಲೀನರ್‍ ಆಸ್ಪತ್ರೆಗೆ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

 

raichuru

ರಾಯಚೂರು,ನ.14-ಮೈಸೂರಿನಿಂದ ಕಲ್ಬುರ್ಗಿಗೆ ಹಳೆ ನೋಟುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಸಿಂದನೂರು ತಾಲ್ಲೂಕಿನ ಖುನ್ನಟಗಿ ಬಳಿ ಇಂದು ಬೆಳಗ್ಗೆ ನಡೆದಿದೆ. ಮೈಸೂರಿನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್‍ಗೆ ಬಂದಂತಹ 500 ಹಾಗೂ 1000 ಮುಖಬೆಲೆಯ ನಿಷೇಧಿತ ನೋಟುಗಳನ್ನು ಸಿಂದನೂರಿನ ವಾಡಿಗೆ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಆದರೆ ಮಂಜು ಕವಿದ ವಾತಾವರಣದಲ್ಲಿ ಚಾಲಕ ದಾರಿ ಕಾಣದೆ ವಾಹನವನ್ನು ರಸ್ತೆಬದಿ ತಿರುಗುವಾಗ ಲಾರಿ ಪಲ್ಟಿ ಹೊಡೆದಿದೆ. ಸ್ಥಳೀಯರು ಇದನ್ನು ನೋಡಿ ಚಾಲಕ ಹಾಗೂ ಕ್ಲೀನರ್‍ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಲಾರಿಯಲ್ಲಿ ಏನಿದೆ ಎಂಬುದನ್ನ ತಿಳಿಯುವಷ್ಟರಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ನೋಟುಗಳನ್ನು ಕಂಡು ಮಾಹಿತಿ ಕಲೆ ಹಾಕಿ ಆರ್‍ಬಿಐ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಯಾರು ಲಾರಿಯನ್ನು ಮುಟ್ಟದಂತೆ ಪೊಲೀಸರ ಭದ್ರತೆಯನ್ನು ಮಾಡಿ ವಾಹನವನ್ನು ಮೇಲೆತ್ತಿ ಮತ್ತೊಂದು ವಾಹನಕ್ಕೆ ನೋಟುಗಳನ್ನು ತುಂಬಿ ಸಾಗಿಸುವ ಪ್ರಕ್ರಿಯೆ ನಡೆದಿದೆ. ತುರವಿಹಾಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin