ಪಶ್ಚಿಮಘಟ್ಟಗಳ ಜನರ ನಿದ್ದೆಗೆಡಿಸಿದ್ದ ನಾಲ್ಕುಮಂದಿ ಕುಖ್ಯಾತ ನಕ್ಸಲೀಯರು ಶರಣು ..!

ಈ ಸುದ್ದಿಯನ್ನು ಶೇರ್ ಮಾಡಿ

ckm

ಚಿಕ್ಕಮಗಳೂರು,ನ.14- ಪಶ್ಚಿಮಘಟ್ಟಗಳ ಜನರ ನಿದ್ದೆಗೆಡಿಸಿದ್ದ ನಾಲ್ಕುಮಂದಿ ಕುಖ್ಯಾತ ನಕ್ಸಲೀಯರು ಇಂದು ಚಿಕ್ಕಮಗಳೂರು ಜಿಲ್ಲಾಡಳಿತದ ಎದುರು ಶರಣಾಗಿದ್ದಾರೆ. ಶರಣಾಗತರಾದ ನಕ್ಸಲೀಯರನ್ನು ನೀಲಗುಣಿ ಪದ್ಮನಾಭ-ಭಾರತಿ ಮತ್ತು ಪರಶುರಾಮ್-ಪಾರ್ವತಿ ದಂಪತಿ ಎಂದು ಹೇಳಲಾಗಿದೆ. ರಾಜ್ಯ ಕೋಮು ಸೌಹಾರ್ದ ವೇದಿಕೆ ಮುಖ್ಯಸ್ಥರಾದ ಪತ್ರಿಕರ್ತೆ ಗೌರಿಲಂಕೇಶ್ ಮತ್ತು ಹಿರಿಯ ನ್ಯಾಯವಾದಿ ಎ.ಕೆ.ಸುಬ್ಬಯ್ಯ ಅವರ ನೇತೃತ್ವದಲ್ಲಿ ಈ ನಾಲ್ವರೂ ಇಂದು ಶರಣಾಗತರಾದರು. ಮಲೆನಾಡು ಪ್ರದೇಶಗಳಲ್ಲಿ ಇವರ ಹೆಸರು ಕೇಳಿದರೆ ಜನ ಬೆಚ್ಚಿ ಬೀಳುತ್ತಿದ್ದರು.  ಕಳೆದ ವರ್ಷ ಡಿಸೆಂಬರ್‍ನಲ್ಲಿ ಇದೇ ಕೋಮು ಸೌಹಾರ್ದ ವೇದಿಕೆ ಮುಂದಾಳತ್ವದಲ್ಲಿ ಸಿರಿಮನೆ ನಾಗರಾಜ್ ಮತ್ತು ನೂರ್ ಜುಲ್ಫಿಖಾರ್ ಅಲಿಯಾಸ್ ಶ್ರೀಧರ್ ಶರಣಾಗತರಾಗಿದ್ದರು. ಅಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರು ಕೂಡ ಇದ್ದರು. ಆದರೆ ಈ ಬಾರಿ ಗೌರಿ ಲಂಕೇಶ್, ಎ.ಕೆ.ಸುಬ್ಬಯ್ಯ ಮತ್ತು ವಿಠ್ಠಲ್ ಹೆಗ್ಗಡೆ ಕಲ್ಕುಣಿ ಇದ್ದರು. ಕಾನೂನಿನಂತೆ ಶರಣಾಗತರಾದ ನಾಲ್ವರನ್ನೂ ಪೊ ಲೀಸರು ವಶಕ್ಕೆ ಪಡೆದರು.

► Follow us on –  Facebook / Twitter  / Google+

Facebook Comments

Sri Raghav

Admin