ಸಾಲಬಾಧೆ ತಾಳಲಾರದೆ ಮೂವರು ರೈತರು ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

 

former-sucide

ಚಿಕ್ಕಮಗಳೂರು/ಮಂಡ್ಯ, ನ.14- ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದ್ದು, ವಿವಿಧೆಡೆ ಮೂವರು ರೈತರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆದಿವೆ. ಚಿಕ್ಕಮಗಳೂರು ಜಿಲ್ಲೆ ಎನ್‍ಆರ್ ಪುರ ತಾಲೂಕಿನ ವರ್ಕಾಟಿ ಗ್ರಾಮದ ರೈತ ದೇವಸಿ (44) ಸಾಲಬಾಧೆ ತಾಳಲಾರದೆ ಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಂಡ್ಯ ಜಿಲ್ಲೆಯಲ್ಲೇ ಇಬ್ಬರು ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಂಡ್ಯ ತಾಲೂಕಿನ ಮಾದೇಗೌಡ ಕೊಪ್ಪಲು ಗ್ರಾಮದ ರೈತ ಮರಿಗೌಡ (50) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಂಡ್ಯ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಮತ್ತೊಬ್ಬ ರೈತ ಹಿರೇಗೌಡ (42)ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಆಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

 

► Follow us on –  Facebook / Twitter  / Google+

Facebook Comments

Sri Raghav

Admin