ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿರ್ವಾಣ ಪ್ರಯುಕ್ತ ಡಿ.6 ರಂದು ಬಿಜೆಪಿ ವಿಶಿಷ್ಟ ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

 

 

ambedkar

ಬೆಂಗಳೂರು, ನ.15-ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ್ದ ಡಿ.6 ರಂದು ಬಿಜೆಪಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದೆ.ಅಂದು ಅಂಬೇಡ್ಕರ್ ಪರಿನಿರ್ವಾಣ ಹೊಂದಿ 125 ವರ್ಷವಾಗುತ್ತದೆ. ಪಕ್ಷದ ಕಚೇರಿಯಲ್ಲಿ ವಿಶಿಷ್ಟ ಕಾರ್ಯಕ್ರಮ ಮಾಡುವ ಮೂಲಕ ಅಂಬೇಡ್ಕರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸುವುದಾಗಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಡಿ.ಎಸ್.ವೀರಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಅಂದು ಪಕ್ಷದ ಕಚೇರಿಯಲ್ಲಿ ಅಂಬೇಡ್ಕರ್ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಮಧ್ಯಾಹ್ನ 1 ಗಂಟೆಗೆ ಅಂಬೇಡ್ಕರ್ ಕುರಿತ ಉಪನ್ಯಾಸ, ಪುಸ್ತಕ ಮತ್ತು ಭಾವಚಿತ್ರಗಳ ವಿತರಣೆ ಮಾಡಲಾಗುವುದು.
ಕಾಂಗ್ರೆಸ್ ನಮ್ಮ ಸಮುದಾಯಕ್ಕೆ ಎಂತಹ ಅನ್ಯಾಯ ಮಾಡಿದೆ ಎಂಬುದನ್ನು ಜನತೆ ಮುಂದಿಡಲಾಗುವುದು ಎಂದರು.ಮಹಾರಾಷ್ಟ್ರದ ಮುಂಬೈ ಸಮೀಪದ ದಾದರ್‍ನಲ್ಲಿ ಅಂಬೇಡ್ಕರ್ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಕರ್ನಾಟಕದಿಂದ 32 ಮಂದಿ ದಾದರ್‍ಗೆ ತೆರಳಲಿದ್ದೇವೆ. ಒಟ್ಟು 5 ಜಿಲ್ಲೆಗಳಲ್ಲಿ ಈ ಬಸ್ ತೆರಳಲಿದ್ದು (ಚೈತ್ರ ಜ್ಯೋತಿ ಯಾತ್ರೆ) ಎಲ್ಲಾ ಕಡೆ ವಿಶೇಷ ಕಾರ್ಯಕ್ರಮ ನಡೆಸಲಾಗುವುದು ಎಂದರು.ಇದೇ ವೇಳೆ ಪರಿಶಿಷ್ಟ ಜಾತಿ, ವರ್ಗಕ್ಕೆ ಬಿಜೆಪಿ ಸರ್ಕಾರ ಏನೇನು ಕೊಡುಗೆ ಕೊಟ್ಟಿದೆ, ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ ಪರಿಶಿಷ್ಟ ಜಾರಿಗೆ ನೀಡಿದ್ದ ಮೀಸಲಾತಿ ಕಾರ್ಯಕ್ರಮಗಳು, ಅಂಬೇಡ್ಕರ್ ಹುಟ್ಟಿದ ಮನೆ, ಪರಿನಿರ್ವಾಣ ಹೊಂದಿದ ಸ್ಥಳ, ಲಂಡನ್‍ನಲ್ಲಿ ಓದಿದ ಶಾಲೆ, ದೆಹಲಿಯಲ್ಲಿ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆ ಸೇರಿದಂತೆ ಇನ್ನಿತರ ಸಂಸ್ಥೆಗಳನ್ನು ಸ್ಥಾಪನೆ ಮಾಡಿರುವುದು ಸಮುದಾಯಕ್ಕೆ ಕೊಟ್ಟ ಕೊಡುಗೆ.
ಕಾಂಗ್ರೆಸ್ ಪಕ್ಷ ನಮ್ಮನ್ನು ಕೇವಲ ವೋಟ್ ಬ್ಯಾಂಕ್‍ಗೆ ಸೀಮಿತಗೊಳಿಸಿತ್ತು. ಬರುವ ಮಾರ್ಚ್ ಮಧ್ಯಭಾಗದಲ್ಲಿ ಮೈಸೂರಿನಲ್ಲಿ ರಾಜ್ಯಮಟ್ಟದ ದಲಿತ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಉಪಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರ ಜತೆ ಚರ್ಚಿಸಿ ದಿನಾಂಕ ನಿಗದಿ ಮಾಡಲಾಗುವುದೆಂದು ಹೇಳಿದರು.

 

► Follow us on –  Facebook / Twitter  / Google+

Facebook Comments

Sri Raghav

Admin