ಡಿ.30ರವರೆಗೆ ಎಟಿಎಂ ಟ್ರಾಂಜಾಕ್ಷನ್ ಶುಲ್ಕವನ್ನು ವಿಧಿಸದಂತೆ ಬ್ಯಾಂಕ್‍ಗಳಿಗೆ ಆರ್‍ಬಿಐ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

atm

ಮುಂಬೈ, ನ.15- ನೋಟು ಬ್ಯಾನ್ ಮಾಡಿದ್ದರಿಂದ ಹಣಕ್ಕಾಗಿ ಜನ ಪರದಾಡುತ್ತಿರುವ ಹಿನ್ನೆಲೆಯಲ್ಲಿ ಆರ್‍ಬಿಐ ಗ್ರಾಹಕರಿಗಾಗಿ ಮತ್ತೊಂದು ಕ್ರಮ ಕೈಗೊಂಡಿದೆ. ಡಿ.30ರವರೆಗೆ ಎಟಿಎಂ ಟ್ರಾಂಜಾಕ್ಷನ್ ಶುಲ್ಕವನ್ನು ವಿಧಿಸದಂತೆ ಬ್ಯಾಂಕ್‍ಗಳಿಗೆ ಆರ್‍ಬಿಐ ಸೂಚಿಸಿದೆ.
ಈ ಮೂಲಕ ಗ್ರಾಹಕರು ಎಟಿಎಂಗಳಲ್ಲಿ ಡಿ.30ರ ವರೆಗೆ ಯಾವುದೇ ಶುಲ್ಕದ ಭಯವಿಲ್ಲದೆ ಯಾವುದೇ ಬ್ಯಾಂಕ್‍ನ ಎಟಿಎಂನಲ್ಲಿ ಎಷ್ಟು ಬಾರಿಯಾದರೂ ಹಣ ಪಡೆಯಬಹುದು. ಈ ಹಿಂದೆ ಒಂದು ತಿಂಗಳಿಗೆ ಇಂತಿಷ್ಟೇ ಬಾರಿ ಎಟಿಎಂನಿಂದ ಹಣ ಪಡೆಯಬೇಕಾಗಿತ್ತು. ಒಂದು ವೇಳೆ ಹೆಚ್ಚು ಬಾರಿ ಎಟಿಎಂನಿಂದ ಹಣ ತೆಗೆದರೆ ಬ್ಯಾಂಕ್‍ಗಳು ಶುಲ್ಕ ವಿಧಿಸುತ್ತಿದ್ದವು.  ಖಾತೆ ಹೊಂದಿರುವ ಬ್ಯಾಂಕ್ ಎಟಿಎಂ ಹಾಗೂ ಇತರೆ ಬ್ಯಾಂಕ್ ಎಟಿಎಂಗಳಲ್ಲೂ ಡಿ.30ರವರೆಗೆ ಗ್ರಾಹಕರು ಶುಲ್ಕದ ಭಯವಿಲ್ಲದೆ ಹಣ ಡ್ರಾ ಮಾಡಿಕೊಳ್ಳಬಹುದು.  ತಿಂಗಳಲ್ಲಿ ಗ್ರಾಹಕರು ಎಟಿಎಂಗಳಲ್ಲಿ ಎಷ್ಟು ಬಾರಿಯಾದರೂ ಹಣ ಡ್ರಾ ಮಾಡಿಕೊಳ್ಳಬಹುದು. ಇದಕ್ಕೆ ಬ್ಯಾಂಕ್‍ಗಳು ಗ್ರಾಹಕರಿಗೆ ಚಾರ್ಜ್ ವಿಧಿಸುವುದಿಲ್ಲವೆಂದು ಆರ್‍ಬಿಐ ತಿಳಿಸಿದೆ. ಜೊತೆಗೆ ನ.10 ರಿಂದ ಡಿ.30ರ ವರೆಗೆ ಗ್ರಾಹಕರು ಎಟಿಎಂಗಳಲ್ಲಿ ಎಷ್ಟು ಬಾರಿಯಾದರೂ ಹಣ ಪಡೆದುಕೊಳ್ಳಬಹುದು. ನ.10 ರಿಂದ ಡಿ.30 ರವರೆಗೆ ಎಟಿಎಂ ಜಾರ್ಜ್  ಮನ್ನಾ ಮಾಡುವುದಾಗಿ ಕೇಂದ್ರ ಬ್ಯಾಂಕ್ ಮಾಹಿತಿ ನೀಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin