ಹಣ ಕೊಡಲು ನಿರಾಕರಿಸಿದ ತಂದೆಯನ್ನೇ ಕೊಂದ ಕ್ರೂರ ಮಗ

ಈ ಸುದ್ದಿಯನ್ನು ಶೇರ್ ಮಾಡಿ

murder
ಕೊಪ್ಪಳ, ನ.15-  ಹಣ ಕೊಡಲು ನಿರಾಕರಿಸಿದ ತಂದೆ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ಮಗನೇ ಕೊಲೆ ಮಾಡಿರುವ ಘಟನೆ ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಂಗಪ್ಪ ಸುಂಕದ್ (72) ಕೊಲೆಯಾದ ನತದೃಷ್ಟ ತಂದೆ.  ಬಾದಾಮಿ ನಾಳ ಗ್ರಾಮದ ಗದ್ದೆಯಲ್ಲಿ ಮಲಗಿದ್ದ ತಂದೆಯನ್ನು ಮಗ ಮಲ್ಲಪ್ಪ ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿದ್ದಾನೆ.  ಕಳೆದ ಎರಡು ದಿನಗಳ ಹಿಂದೆ ಗದ್ದೆಯಲ್ಲಿನ ಗಿಡಗಳನ್ನು ಮಾರಾಟ ಮಾಡಲಾಗಿದ್ದು, ಮಾರಾಟ ಮಾಡಿದ್ದ ಹಣವಾದ 30 ಸಾವಿರದಲ್ಲಿ 10 ಸಾವಿರ ಕೊಡುವಂತೆ ಮಲ್ಲಪ್ಪ ತಂದೆಯನ್ನು ಕೇಳಿದ್ದ. ಆದರೆ, ತಂದೆ ಸಂಗಪ್ಪ ಹಣ ಕೊಡಲು ನಿರಾಕರಿಸಿದ್ದರು.
ಇದರಿಂದ ರೊಚ್ಚಿಗೆದ್ದ ಮಗ ತಂದೆ ಗದ್ದೆಯಲ್ಲಿ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿದ್ದಾನೆ.  ಈ ಸಂಬಂಧ ಹನುಮಸಾಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin