ಅದ್ದೂರಿಯಾಗಿ ನಡೆದ ರೆಡ್ಡಿ ಪುತ್ರಿ ಬ್ರಹ್ಮ್ಮಿಣಿ ಹಾಗೂ ಉದ್ಯಮಿ ರಾಜೀವ್‍ರೆಡ್ಡಿ ವಿವಾಹ

ಈ ಸುದ್ದಿಯನ್ನು ಶೇರ್ ಮಾಡಿ

reddy-marr2
ಬೆಂಗಳೂರು, ನ.16-ಅದ್ಧೂರಿ ವಿವಾಹ ಅನ್ನುವ ವಿಚಾರದೊಂದಿಗೆ ದೊಡ್ಡ ಸುದ್ದಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮ್ಮಿಣಿ ಹಾಗೂ ಉದ್ಯಮಿ ರಾಜೀವ್‍ರೆಡ್ಡಿ ವಿವಾಹ ಧನುರ್‍ಲಗ್ನದಲ್ಲಿ ನೆರವೇರಿತು. ಬೆಳಗ್ಗೆ 9.30 ರಿಂದ 10.30 ವರೆಗಿನ ಧನುರ್‍ಲಗ್ನದಲ್ಲಿ ರಾಜೀವ್ ರೆಡ್ಡಿಗೆ ಮಾಂಗಲ್ಯಧಾರಣೆ ನೆರವೇರಿಸಿದರು. ಹೈದ್ರಾಬಾದ್ ಮೂಲದ ಉದ್ಯಮಿಯಾಗಿದ್ದು ದುಬೈನಲ್ಲಿ ನೆಲೆಸಿರುವ ರಾಜೀವ್ ರೆಡ್ಡಿ ಜತೆ ಬ್ರಹ್ಮಿಣಿ ವಿವಾಹ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿರ್ಮಿಸಿರುವ ಅದ್ಧೂರಿ ವೇದಿಕೆಯಲ್ಲಿ ನೆರವೇರಿತು.ಮೊದಲು ವಧು-ವರರಿಬ್ಬರೂ ಕಲ್ಯಾಣ ಮಂಪಟಕ್ಕೆ ಆಗಮಿಸಿ, ಧಾರೆ ಪೂರ್ವ ನಡೆದ ಸಾಂಪ್ರದಾಯಿಕ ವಿಧಿ ವಿಧಾನಗಳು ಬಳಿಕ ಬ್ರಹ್ಮಿಣಿಗೆ ಮಾಂಗಲ್ಯ ಕಟ್ಟಿದರು. 8 ಅರ್ಚಕರಿಂದ ವಿವಾಹ ಪೂಜಾ ವಿಧಿ ವಿಧಾನ ನೆರವೇರುತ್ತಿದ್ದು, ಅದ್ಧೂರಿ ವೇದಿಕೆಯಲ್ಲಿ ವಿವಾಹದ ನಂತರ ಬೆಳಗ್ಗೆ 10.30ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಆರತಕ್ಷತೆ ನಡೆಯಲಿದೆ. ಶ್ರೀನಿವಾಸಕಲ್ಯಾಣ ಮಂಟಪದಲ್ಲಿ ವಿವಾಹ ಸಮಾರಂಭ ಸಂಪನ್ನಗೊಳ್ಳಲಿದೆ. 30ಕ್ಕೂ ಹೆಚ್ಚು ಧರ್ಮಗುರುಗಳಿಂದ ಆಶೀರ್ವಚನ ಪಡೆದರು.

 
ಬೆಳಗ್ಗೆ ಮೊದಲು ವಧು ಬ್ರಹ್ಮಿಣಿ ಶ್ರೀನಿವಾಸನಿಗೆ ಪೂಜೆ ಸಲ್ಲಿಸಿದರು. ನಂತರ ವರ ರಾಜೀವ್‍ರೆಡ್ಡಿ ಕಲ್ಯಾಣ ಮಂಟಪಕ್ಕೆ ಜನಾರ್ದನ ರೆಡ್ಡಿ ಅವರೊಂದಿಗೆ ವಿಜಯ ವಿಠ್ಠಲ ದೇವಸ್ಥಾನದಿಂದ ಸಾರೋಟಿನಲ್ಲಿ ಆಗಮಿಸಿ ಶ್ರೀನಿವಾಸನಿಗೆ ಪೂಜೆ ಸಲ್ಲಿಸಿದರು. ರೆಡ್ಡಿ ಸಂಪ್ರದಾಯದಂತೆ ವಿವಾಹ ನೆರವೇರಿಸಲಾಯಿತು. ಕಲ್ಯಾಣ ಮಂಟಪದಲ್ಲಿ ಮಂತ್ರಘೋಷಗಳ ಉದ್ಘಾರ ಕೇಳಿ ಬಂತು. ಸಪ್ತದ್ವಾರ ಕಲ್ಯಾಣ ಮಂಟಪವನ್ನು ವಧು-ವರರು ಪ್ರವೇಶಿಸಿದ್ದು, ಕುಟುಂಬ ಸದಸ್ಯರಿಂದ ಸಾಂಪ್ರದಾಯಿಕ ಆಚರಣೆ ಮುಂದುವರಿದಿದೆ. ಆರು ಮಹಿಳೆಯರು ನಾದಸ್ವರ ನುಡಿಸಲಿದ್ದಾರೆ.ಉತ್ತರ ಭಾರತ, ದಕ್ಷಿಣ ಭಾರತ ಶೈಲಿ ಅಡುಗೆ.
ವಿವಾಹದ ಇನ್ನೊಂದು ವಿಶೇಷ ಭೋಜನ. ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಶೈಲಿಯ ಅಡುಗೆ ಈಗಾಗಲೇ ಸಿದ್ಧವಾಗಿದ್ದು, ಆಗಮಿಸುವ ಬಂಧುಗಳಿಗೆ ಊಟವೂ ವಿಶೇಷವಾಗಿ ಲಭಿಸಲಿದೆ.ಸುಮಾರು 60 ಸಾವಿರ ಮಂದಿಗೆ ಊಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ವಿವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಊಟದ ಮೆನುವಿನಲ್ಲಿ 16 ಭಗೆಯ ಸಿಹಿ ತಿಂಡಿಗಳು ಇವೆ ಎಂದು ತಿಳಿದುಬಂದಿದೆ.

► Follow us on –  Facebook / Twitter  / Google+

Facebook Comments

Sri Raghav

Admin