ಐಸಿಸ್ ಉಗ್ರ ಸಂಘಟನೆಗೆ ಹಣ ಪೂರೈಸುತ್ತಿದ್ದ ಭಯೋತ್ಪಾದಕನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

 

isis-arrested
ಜೈಪುರ, ನ.17- ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಗಳಿಗೆ ಹಣ ಪೂರೈಕೆ ಮಾಡುತ್ತಿದ್ದ ಭಯೋತ್ಪಾದಕನೊಬ್ಬನನ್ನು ರಾಜಸ್ತಾನದ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳು ಶಿಕಾರ್ ಪ್ರದೇಶದಲ್ಲಿ ಬಂಧಿಸಿದ್ದಾರೆ.  ಇವನನ್ನು ತನಿಖೆ ಒಳಪಡಿಸಿದಾಗ, ಭಾರತದಲ್ಲಿ ಹಣ ಸಂಗ್ರಹಿಸಿ ಐಎಸ್ ಉಗ್ರಗಾಮಿಗಳಿಗೆ ಹವಾಲಾ ಮೂಲಕ ಕಳುಹಿಸುವ ದಂಧೆಯಲ್ಲಿ ತೊಡಗಿದ್ದ ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ.  ಬಂಧಿತನನ್ನು ಜಮಿಲ್ ಅಹಮದ್(41) ಎಂದು ಗುರುತಿಸಲಾಗಿದೆ. ದುಬೈನ ಪ್ರಸಿದ್ಧ ಸಂಸ್ಥೆಯೊಂದಿರಲ್ಲಿ ಸಹಾಯಕ ಹಣಕಾಸು ವ್ಯವಸ್ಥಾಪಕನಾಗಿರುವ ಈತ ಅಲ್ಲಿನ ಐಎಸ್ ಶಾಖೆಗೆ ಹಣವನ್ನು ರವಾನಿಸುವ ಕಾರ್ಯದಲ್ಲಿ ನಿರತವಾಗಿದ್ದ. ಸಾಮಾಜಿಕ ಜಾಲತಾಣಗಳ ಮೂಲಕ ಐಎಸ್ ಉಗ್ರರೊಂದಿಗೆ ಈತ ಸಂಪರ್ಕ ಸಾಧಿಸುತ್ತಿದ್ದ ಎಂದು ಎಟಿಎಸ್‍ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ ತಿಳಿಸಿದ್ದಾರೆ.  ಈತ ಕೆಳದ ಎರಡು ವರ್ಷಗಳಿಂದ ಭಾರತ, ಬಾಂಗ್ಲಾದೇಶ ಮತ್ತು ಯುಎಇ ದೇಶಗಳಿಂದ ಹಣವನ್ನು ಕ್ರೋಢೀಕರಿಸಿ ಹವಾಲಾ ಮೂಲಕ ಐಎಸ್ ಸಂಘಟನೆಗೆ ಹಣವನ್ನು ಕಳುಹಿಸುತ್ತಿದ್ದ. ಎಂಬಿಎ ಪದವೀಧರನಾಗಿರುವ ಜಮಿಲ್ 2003ರಿಂದ ಅಲ್ಲಿ ಚಾರ್ಟಡ್ ಅಕೌಂಟೆಂಟ್  ಕೆಲಸ ಮಾಡುತ್ತಿದ್ದ ಕಳೆದ ಇತ್ತೀಚೆಗೆ ಭಾರತಕ್ಕೆ ಬಂದು ಫತೇಪುರ್‍ನ ತನ್ನ ಪೂರ್ವಜರ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈತನ ಚಲನವಲನ ಗಮನಿಸಿದ ಎಟಿಎಸ್ ಸಿಬ್ಬಂದಿ ಶಿಕಾರ್‍ನಲ್ಲಿ ಈತನನ್ನು ಬಲೆಗೆ ಕೆಡವಿಕೊಂಡರು.  ಈ ಮುಂಬೈನಲ್ಲಿ ಸ್ವಂತ ಮನೆ ಹೊಂದಿದ್ದು, ಆತನ ಪತ್ನಿ ಮತ್ತು ಮಕ್ಕಳು ಅಲ್ಲಿ ನೆಲೆಸಿದ್ದಾರೆ. ಜಮಿಲ್‍ನನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದ್ದು, ಇನ್ನಷ್ಟು ಸಂಗತಿಗಳು ಬೆಳಕಿಗೆ ಬರಲಿದೆ ಎಂದು ಉಮೇಶ್ ಮಿಶ್ರಾ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin