ತಗಡೂರು ಗ್ರಾಪಂ ಪಿಡಿಓಯಿಂದ ಹಣ ದುರುಪಯೋಗ : ಗ್ರಾ ಪಂ ಸದಸ್ಯರಿಂದ ದೂರು

ಈ ಸುದ್ದಿಯನ್ನು ಶೇರ್ ಮಾಡಿ

nanjanagudu-0

ನಂಜನಗೂಡು, ನ.17- ತಗಡೂರು ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯ ಸರ್ವಾಧಿಕಾರ ಮತ್ತು ಹಣ ದುರುಪಯೋಗದಿಂದ ಗ್ರಾಮ ಅಭಿವೃದ್ದಿ ಕುಂಠಿತಗೊಂಡಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ 12 ಸದಸ್ಯರು ತಾಪಂ ಅಧ್ಯಕ್ಷರಿಗೆ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿರುವ ಪ್ರಸಂಗ ನಡೆದಿದೆ. ಗ್ರಾಪಂ ಅಧ್ಯಕ್ಷೆ ದೇವರಾಜಮ್ಮ ಮಹೇಶ್ ನೇತೃತ್ವದಲ್ಲಿ 13 ಜನ ಸದಸ್ಯರು ತಾಪಂ ಕಚೇರಿಗೆ ಆಗಮಿಸಿ ಅಧ್ಯಕ್ಷ ಬಿ.ಎಸ್.ಮಹದೇವಪ್ಪಗೆ ದೂರಿನ ಅರ್ಜಿ ನೀಡಿ ಮಾತನಾಡಿದರು.ಪಿಡಿಓ ಸೌಮ್ಯಲತಾರವರು ತಗಡೂರು ಗ್ರಾಪಂಗೆ ಆಗಮಿಸಿದ ಮೇಲೆ ಪಂಚಾಯಿತಿಯ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ . ಜನಪ್ರತಿನಿಧಿಗಳಿಗೆ 3 ಕಾಸಿನ ಬೆಲೆ ನೀಡದೇ ಸರ್ವಾಧಿಕಾರಿ ಧೋರಣೆ ಅನುಸರಿಸಿ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಮಂಜೂರಾದ ಹಣ ದುರುಪಯೋಗ ಮಾಡಲಾಗಿದೆ ಎಂದರು.

 
ಕ್ರಿಯಾ ಯೋಜನೆ ಮಾಡದೇ ಹಣವನ್ನು ಇಷ್ಟ ಬಂದ ಹಾಗೇ ಖರ್ಚು ಮಾಡಲಾಗುತ್ತಿದೆ. ನರೇಗಾ, ಸ್ವಚ್ಛತೆ, ಬೀದಿ ದ್ವೀಪಗಳ ಅಳವಡಿಕೆ, ಪರಿಶಿಷ್ಟ ವರ್ಗ – ಜಾತಿ ಜನಾಂಗಕ್ಕೆ ಬಂದ ಸರ್ಕಾರದ ಹಣ ದುರುಪಯೋಗವಾಗಿದೆ. ಯಾವುದೇ ಕೆಲಸ ಕಾರ್ಯಗಳನ್ನು ಸದಸ್ಯರ ಗಮನಕ್ಕೆ ತರದೆ ಏಕ ಪಕ್ಷಿಯ ತಿರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಎಂದು ಆರೋಪಿಸಿದರು.ಪಂಚಾಯತಿ ಸದಸ್ಯರಾದ ಟಿ.ಎನ್. ಗುರುಮಲ್ಲೇಶ್, ಅನಿತಾ ನಾಗೇಶ್‍ನಾಯಕ, ರಾಜಮ್ಮ ಶಿವುಕುಮಾರ್, ನಾಗಮ್ಮಮಹದೇವು, ಮಾದಶಟ್ಟಿ, ಮಸಣಶಟ್ಟಿ, ಟಿ,ಎನ್,ಮಾದಪ್ಪ, ಭ್ರಮರಾಂಭ, ಕಾವೇರಮ್ಮ, ಪರಶಿವನಾಯಕ, ಮಂಜು, ಉಷಾ, ಮತ್ತು ಮುಖಂಡರಾದ ಕುಂಬ್ರಳ್ಳಿ ಸುಬ್ಬಣ್ಣ, ಕರಳಪುರ ನಾಗರಾಜು, ಡಿ.ಪಿ, ನಾಗರಾಜು, ಇದ್ದರು.  ದೂರಿನ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರನ್ನು ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

 

 

► Follow us on –  Facebook / Twitter  / Google+

Facebook Comments

Sri Raghav

Admin