ವಿಜಯ್ ಮಲ್ಯ ಸಾಲ ಮನ್ನಾ ಇಲ್ಲ: ರಾಜ್ಯಸಭೆಯಲ್ಲಿ ಜೇಟ್ಲಿ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

malya
ನವದೆಹಲಿ, ನ.17-ಉದ್ಯಮಿ  ವಿಜಯ್ ಮಲ್ಯ  ಸೇರಿದಂತೆ 63ಕ್ಕೂ ಅಧಿಕ ಉದ್ದೇಶಪೂರ್ವಕ ಸುಸ್ತಿದಾರರ ಸಾಲವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮನ್ನಾ ಮಾಡಿರುವ ಸುದ್ದಿಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ವಿತ್ತ ಸಚಿವ ಸಚಿವ ಅರುಣ್ ಜೇಟ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಎಲ್ಲಾ ಖಾತೆಗಳನ್ನು ದುಡಿಯದ ಬಂಡವಾಳ ಎಂದು ಲೆಕ್ಕ ಪುಸ್ತಕದಲ್ಲಿ ಬರೆದಿಡಲಾಗಿದೆ. ಆದರೆ, ಇದರಿಂದ ಸಾಲ ಮನ್ನಾ ಮಾಡಿದಂತೆ ಆಗುವುದಿಲ್ಲ. ಸಾಲಗಾರರಿಂದ ಸಾಲ ವಸೂಲಿ ಮಾಡುವ ಹಕ್ಕು ಬ್ಯಾಂಕ್‍ಗಳಿಗೆ ಇವೆ. ಮಲ್ಯ ವಿರುದ್ಧದ ಕಾನೂನು ಹೋರಾಟ ಮುಂದುವರೆಯಲಿದೆ ಎಂದು ರಾಜ್ಯಸಭೆಯಲ್ಲಿ ಹೇಳಿದರು. ಉದ್ದೇಶಪೂರ್ವಕ ಸುಸ್ತಿದಾರ ಮಲ್ಯಗೆ ಎಸ್‍ಬಿಐ ಸಾಲದಿಂದ ಮುಕ್ತಿ!  ವಿಜಯ್ ಮಲ್ಯ  ಅವರ ಕಿಂಗ್‍ಫಿಷರ್ ಏರ್ ಲೈನ್ಸ್ ಸಂಸ್ಥೆ ಸರಿ ಸುಮಾರು 1,201 ಕೋಟಿ ರು ಬಾಕಿ ಉಳಿಸಿಕೊಂಡಿತ್ತು. ಎಸ್‍ಬಿಐ ಈಗ ಕಾರ್ಯನಿರ್ವಹಣಾ ರಹಿತ ಸ್ವತ್ತು ಸಾಲದ ಬಗ್ಗೆ ಮೌಲ್ಯರಹಿತ ಎಂದು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಈ ಪೈಕಿ 63 ಉದ್ದೇಶಪೂರ್ವಕ ಸುಸ್ತಿದಾರರಿಗೆ ಪೂರ್ಣ ಪ್ರಮಾಣದ ಸಾಲಮನ್ನಾ ಹಾಗೂ 31 ಖಾತೆಗಳಿಗೆ ಪಾಶ್ರ್ವ ಉಪಯೋಗ ಸಿಕ್ಕಿದೆ ಎಂದು ಪತ್ರಿಕೆಯೊಂದಕ್ಕೆ ಸಿಕ್ಕಿರುವ ದಾಖಲೆಗಳು ಹೇಳಿದೆ.  ಸಂಗ್ರಹ ಖಾತೆ ಅಡಿ ಮುಂಗಡ (ಎಐಸಿಎ) ಅಡಿಯಲ್ಲಿ ಬ್ಯಾಂಕ್ ಖಾತೆಗೆ 7,016 ಕೋಟಿ ರು ಸೇರಿಸಿ ಬ್ಯಾಲೆನ್ಸ್ ಶೀಟ್ ಸಮ ಮಾಡಲಾಗಿದೆ. ದಾಖಲೆಗಳ ಪ್ರಕಾರ ಕಿಂಗ್ ಫಿಷರ್ ಏರ್ ಲೈನ್ಸ್ 17 ಬ್ಯಾಂಕ್ ಗಳಿಂದ 6,963 ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin