50 ಸಾವಿರಕ್ಕೂ ಹೆಚ್ಚು ಹಣ ವ್ಯವಹಾರಕ್ಕೆ ಪ್ಯಾನ್ ಕಾರ್ಡ್ ಕಡ್ಡಾಯ :ಆರ್.ಬಿ.ಐ ಬ್ಯಾಂಕ್ ಗಳಿಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

pan-card
ನವದೆಹಲಿ,ನ.17- 50,000 ರೂ. ಮೀರಿದ ಎಲ್ಲಾ ಹಣಕಾಸು ವ್ಯವಹಾರಗಳಿಗೆ ಪ್ಯಾನ್ ಕಡ್ಡಾಯಗೊಳಿಸಲಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಈ ಕುರಿತು ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. 50,000 ರೂ. ಗಳಿಗಿಂತ ಹೆಚ್ಚಿನ ಹಣವನ್ನು ಠೇವಣಿ ಇಡುವ ಗ್ರಾಹಕರಿಂದ ಪ್ಯಾನ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಆರ್.ಬಿ.ಐ. ಸೂಚನೆ ನೀಡಿದ್ದು, ಆದಾಯ ತೆರಿಗೆ ನಿಯಮದನ್ವಯ ಬ್ಯಾಂಕ್, ಸಹಕಾರ ಸಂಘ, ಪೋಸ್ಟ್ ಆಫೀಸ್ ಮತ್ತಿತರ ಹಣಕಾಸು ಸಂಸ್ಥೆಗಳಲ್ಲಿ ನಿಶ್ಚಿತ ಠೇವಣಿ ಇಡುವ ಸಂದರ್ಭದಲ್ಲಿ ಪ್ಯಾನ್  ವಿವರ ನೀಡಬೇಕಿದೆ.
ಹೋಟೆಲ್ ಗಳಲ್ಲಿ ಪಾವತಿಸುವ ಬಿಲ್, ವಿದೇಶಿ ಪ್ರವಾಸದ ಸಂದರ್ಭದಲ್ಲಿ 50,000 ರೂ.ಗಳಿಗಿಂತ ಹೆಚ್ಚಿನ ಮೊತ್ತದ್ದಾಗಿದ್ದರೆ, ಮ್ಯೂಚುವೆಲ್  ಫಂಡ್, ಬಾಂಡ್, ಮೊದಲಾದ ಹಣಕಾಸು ವ್ಯವಹಾರಗಳಲ್ಲಿ ಪ್ಯಾನ್ ಕಡ್ಡಾಯಗೊಳಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin