ಭಾರತ v/s ಇಂಗ್ಲೆಂಡ್- ದ್ವಿತೀಯ ಟೆಸ್ಟ್ (LIVE UPDATES)

ಈ ಸುದ್ದಿಯನ್ನು ಶೇರ್ ಮಾಡಿ

 

kohli

ವಿಶಾಖಪಟ್ಟಣಂ ,ನ.೧೭-ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಮುಂಚೂಣಿ ಆಟಗಾರರಾದ   ಕನ್ನಡಿಗ ಕೆ ಎಲ್  ರಾಹುಲ್ ಮತ್ತು  ಮುರಳಿ ವಿಜಯ್ ಅವರ   ವಿಕೆಟ್  ಬಹುಬೇಗ ಕಳೆದುಕೊಂಡು  ಆರಂಭಿಕ ಆಘಾತಕ್ಕೆ ಒಳಗಾಗಿದ್ದ ಭಾರತಕ್ಕೆ   ಚೇತೇಶ್ವರ ಪೂಜಾರ  ಮತ್ತು ನಾಯಕ ವಿರಾಟ್ ಕೊಹ್ಲಿ ಇವರಿಬ್ಬರ  ಶತಕಗಳನ್ನು ಸಿಡಿಸಿ  ತಂಡಕ್ಕೆ ಆಸರೆಯಾದರು   .    ಈ ಜೋಡಿಯ ಉತ್ತಮ  ಜೊತೆಯಾಟದೊಂದಿಗೆ  ಭಾರತ  220 ರ ಗಡಿ ದಾಟಲು ಕಾರಣವಾಯಿತು . ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿದ್ದ ಪೂಜಾರ  ಆಂಡರ್ಸನ್ ಎಸೆತದಲ್ಲಿ  ಬೈರ್ಸ್ಟೌ ಗೆ ಕ್ಯಾಚ್ಚೆತ್ತಿ ಪೆವಿಲಿಯನ್ ಸೇರಿದರು. ನಂತರ ಕ್ರೀಸ್ ಗೆ  ಆಗಮಿಸಿದ   ರಹಾನೆ ತಾಳ್ಮೆಯ ಆಟ ಪ್ರದರ್ಶನ ಮಾಡಿದರು ಕೂಡ ೨೩ ರನ್ ಗಳಿಸಿ ಆಂಡೆರ್ಸನ್ ಎಸೆತದಲ್ಲಿ  ಬೈರ್ಸ್ಟೌ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು .ನಂತರ ಕ್ರೀಸ್ ಗೆ ಆಗಮಿಸಿದ ಅಶ್ವಿನ್ ೧ ರನ್ ಗಳಿಸುವ ಮೂಲಕ ನಾಳೆಯ ದಿನಕ್ಕೆ ತಮ್ಮ ಬ್ಯಾಟಿಂಗ್ ನ್ನು ಕಾಯ್ದುಕೊಂಡಿದ್ದಾರೆ .  ೧ ದಿನದ ಮುಕ್ತಾಯಕ್ಕೆ ಭಾರತ ೪ ವಿಕೆಟ್ ನಷ್ಟಕ್ಕೆ ೩೧೭ ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ .

ಕೊಹ್ಲಿಯ ಮಿಂಚಿನ ಆಟ: ಕೊಹ್ಲಿಯ ಮಿಂಚಿನ ಆಟ: ತಮ್ಮ ಟೆಸ್ಟ್ ಜೀವನದ ೫೦ ನೇ ಪಂದ್ಯ ಆಡುತ್ತಿರುವ ಕೊಹ್ಲಿ ದ್ವಿಶತಕದತ್ತಾ ಮುನ್ನುಗ್ಗುತ್ತಿದ್ದು ,ಕ್ರೀಡಾ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ .

 

ಸ್ಕೋರ್ ವಿವರ:
ಭಾರತ :317/4(90 overs )
ಚೇತೇಶ್ವರ ಪೂಜಾರ -119
ವಿರಾಟ್ ಕೊಹ್ಲಿ -139*

ಅಶ್ವಿನ್-1*
ಬೌಲಿಂಗ್ : ovr-wkt-run
ಆಂಡರ್ಸನ್ -16-3-44

ಬ್ರಾಡ್ :12-1-39

ಸ್ಟೋಕ್ಸ್ :13-0-52
ಜಾಫರ್ ಅನ್ಸಾರಿ:12-0-45
ಆದಿಲ್ ರಷೀದ್:26-0-85
ಅಲಿ:11-0-50
Facebook Comments

Sri Raghav

Admin