ಕುಖ್ಯಾತ ಸರಗಳ್ಳರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

kallaaru-2

ಬೆಂಗಳೂರು, ನ.18- ರಾತ್ರಿ ವೇಳೆ ಮೊಬೈಲ್ ಅಂಗಡಿ ಕನ್ನ ಕೊರೆದು ಮೊಬೈಲ್ ಕಳ್ಳತನ ಮಾಡುತ್ತಿದ್ದ ಹಾಗೂ ಕುಖ್ಯಾತ ಸರಗಳ್ಳರನ್ನು ಬಂಧಿಸಿರುವ ಕುಮಾರಸ್ವಾಮಿಲೇಔಟ್ ಪೊಲೀಸರು 2.35 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪೆನಿಯ 11 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ರಾತ್ರಿ ವೇಳೆ ಮೊಬೈಲ್ ಕಳ್ಳತನ ಮಾಡುವ ಆರೋಪಿಗಳ ಬಗ್ಗೆ ವಿಶೇಷ ಅಪರಾಧ ಪತ್ತೆ ದಳದ ಪಿಎಸ್‍ಐ ಪಾಂಡುರಂಗಯ್ಯ ಮತ್ತು ಸಿಬ್ಬಂದಿಗಳು ಕಾರ್ಯಾ ಚರಣೆ ನಡೆಸಿ ಮಾಹಿತಿ ಕಲೆ ಹಾಕಿ ಆರೋಪಿಗಳಾದ ಪವನ್‍ಕುಮಾರ್ ಮತ್ತು ಅಕ್ಬರ್‍ಪಾಷ ಎಂಬುವರನ್ನು ಕಾಶಿನಗರ ಕೆರೆ ಬಳಿಯಿಂದ ಬಂಸಿ 1.75 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪೆನಿಯ ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಜರಗನಹಳ್ಳಿ, ಕನಕಪುರ ಮುಖ್ಯರಸ್ತೆಯಲ್ಲಿರುವ ಲೋಟಸ್ ಮೊಬೈಲ್ ಶಾಪ್‍ನಲ್ಲಿ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.

ಸರಗಳ್ಳನ ಸೆರೆ:
ಇಸ್ರೋ ಲೇಔಟ್ ಪಾರ್ಕ್ ಬಳಿ ಬೆಳಗಿನ ಜಾವ ಮಹಿಳೆಯೊಬ್ಬರು ಮನೆ ಮುಂದೆ ಮೊಬೈಲ್‍ನಲ್ಲಿ ಮಾತನಾಡಿಕೊಂಡು ಹೋಗುತ್ತಿ ದ್ದಾಗ ಇವರಿಗೆ ಚಾಕು ತೋರಿಸಿ ಬೆದರಿಸಿ 50ಸಾವಿರ ಬೆಲೆಯ 18 ಗ್ರಾಂ ಚಿನ್ನದ ಸರವನ್ನು ಎಗರಿಸಲಾಗಿತ್ತು. ಆರೋಪಿಯನ್ನು ಪತ್ತೆ ಮಾಡಲು ವಿಶೇಷ ಅಪರಾಧ ಪತ್ತೆದಳದ ಎಎಸ್‍ಐ ಪಾಂಡುರಂಗಯ್ಯ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸರಗಳ್ಳದಾವುದ್‍ಖಾನ್(25) ಎಂಬಾತನನ್ನು ಬಂಸಿದ್ದಾರೆ. 2016ರಲ್ಲಿ ಕೆಎಸ್‍ಲೇಔಟ್ ವ್ಯಾಪ್ತಿಯ ಇಸ್ರೋ ಲೇಔಟ್‍ನಲ್ಲಿ ಆರೋಪಿ ದಾವುದ್‍ಖಾನ್ ಸಹಚರ ತಾರಿಕ್‍ನೊಂದಿಗೆ  ಸೇರಿ ಸರಗಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin