ದೆಹಲಿಯಲ್ಲಿ ಮತ್ತೊಂದು ಭಾರಿ ಅಗ್ನಿ ಅವಘಡ

ಈ ಸುದ್ದಿಯನ್ನು ಶೇರ್ ಮಾಡಿ

Delhi-Fire-02

ನವದೆಹಲಿ. ನ.18 : ದೆಹಲಿಯಲ್ಲಿ ಅಗ್ನಿ ಅವಘಡಗಳ ಸರಣಿ ಮುಂದುವರೆದಿದ್ದು ಪಶ್ಚಿಮ ದೆಹಲಿಯ ಮುಂಡ್ಕ ಪ್ರದೇಶದಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಮಾರುಕಟ್ಟೆಯೊಂದರಲ್ಲಿ ಇಂದು ಬೆಳಗಿನ ಜಾವ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಮಾರುಕಟ್ಟೆಯ ಸುತ್ತಲೂ ದಟ್ಟ ಹೊಗೆ ಆವರಿಸಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ 33 ಅಗ್ನಿ ಶಾಮಕದಳದ ವಾಹನಗಳೊಂದಿಗೆ ಸ್ಥಳಕ್ಕಾಗಮಿಸಿರುವ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಘಟನೆಗೆ ಈ ವರೆಗೂ ಕಾರಣಗಳು ತಿಳಿದುಬಂದಿಲ್ಲ. ಯಾವುದೇ ರೀತಿಯ ಸಾವು, ನೋವುಗಳ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಮೂಲಗಳ ಪ್ರಕಾರ ಈಗಾಗಲೇ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ತಿಳಿದುಬಂದಿದೆ. ಅಗ್ನಿ ಶಾಮಕದಳದ ಬೆಂಕಿಯನ್ನು ಆರಿಸಲು ಹರಸಾಹಸ ಪಡುತ್ತಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin