ನೋಟು ರದ್ದತಿ ಛಾಯೆ ನಡುವೆ ನಾಳೆ ಪಶ್ಚಿಮಬಂಗಾಳದಲ್ಲಿ ಉಪಚುನಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

Notes-002
ಕೋಲ್ಕತ್ತಾ, ನ.18- ನೋಟು ರದ್ದತಿಯ ಛಾಯೆಯ ನಡುವೆ ಪಶ್ಚಿಮಬಂಗಾಳದಲ್ಲಿ ಎರಡು ಲೋಕಸಭಾ ಕ್ಷೇತ್ರಗಳು ಮತ್ತು ಒಂದು ವಿಧಾನಸಭಾ ಕ್ಷೇತ್ರಕ್ಕೆ ನಾಳೆ ಉಪ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಕೂಚ್ ಬೆಹರ್ ಮತ್ತು ಟಮ್ಲುಕ್ ಲೋಕಸಭಾ ಕ್ಷೇತ್ರಗಳು ಹಾಘೂ ಮಂಟೇಸ್ವರ್ ವಿಧಾನಸಭಾ ಕ್ಷೇತ್ರಕ್ಕೆ ನಾಳೆ ಮತದಾನ ನಡೆಯಲಿದ್ದು, ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಈ ಮೂರು ಕ್ಷೇತ್ರಗಳಿಗೆ ಆಡಳಿತರೂಢ ತೃಣಮೂಲ ಕಾಂಗ್ರೆಸ್, ಬಿಜೆಪಿ, ಎಡರಂಗ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಮುಂದಿನ ಚುನಾವಣೆಗೆ ದಿಕ್ಕೂಚಿ ಎಂದೇ ಬಿಂಬಿಸಲಾದ ಉಪ ಚುನಾವಣೆ ಸಂದರ್ಭದಲ್ಲಿ ಅಕ್ರಮಗಳು ನಡೆಯದಂತೆ ಆಯೋಗವು ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಈ ಮೊದಲು ಹಣ ಮತ್ತು ಮದ್ಯ ಹಂಚಿಕೆ ಎಥೇಚವಾಗಿ ನಡೆಯುತ್ತಿದ್ದು ಪ್ರಸ್ತುತ ನಡೆಯುತ್ತಿರುವ ಉಪಚುನಾವಣೆಯಲ್ಲಿ ಎಲ್ಲಕ್ಕೂ ಕಡಿವಾಣ ಬಿದ್ದಂತಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin