56 ವರ್ಷಗಳ ಬಳಿಕ ಜಾಕಿ ಚಾನ್‍ಗೆ ಕೊನೆಗೂ ದಕ್ಕಿದ ಆಸ್ಕರ್ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Jackie-Chan

ಲಾಸ್ ಏಂಜೆಲಿಸ್, ನ.19 – ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 56 ವರ್ಷಗಳ ಬಳಿಕ ಹಾಗೂ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ನಂತರ ಜಗದ್ವಿಖ್ಯಾತ ನಟ, ಕುಂಗ್‍ಫು ಪಟು ಜಾಕಿಚಾನ್‍ಗೆ ಕೊನೆಗೂ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಲಭಿಸಿದೆ. ಅಮೆರಿಕ ಲಾಸ್ ಏಂಜೆಲ್ಸ್‍ನ ಹಾಲಿವುಡ್ ಹೈಲ್ಯಾಂಡ್ ಸೆಂಟರ್‍ನಲ್ಲಿ ಕಳೆದ ರಾತ್ರಿ ನಡೆದ ಎಂಟನೆ ವಾರ್ಷಿಕ ಗೌರ್ನರ್‍ಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 62 ವರ್ಷದ ಜಾಕಿಗೆ ಜೀವಮಾನ ಸಾಧನೆಗಾಗಿ ಗೌರವ ಆಸ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಲಿವುಡ್ ಜನಪ್ರಿಯ ನಟರಾದ ಟಾಮ್ ಹಾಂಕ್ಸ್, ಮೈಕೆಲ್ ಯೋಹ್ ಮತ್ತು ಕ್ರಿಸ್ ಟಕ್ಕರ್, ಜಾಕಿಚಾನ್‍ಗೆ ಈ ಪ್ರಶಸ್ತಿ ಪ್ರದಾನ ಮಾಡಿದ್ದು ವಿಶೇಷ.

ಜಾಕಿಚಾನ್ ಸಾಧನೆ ಬಗ್ಗೆ ಗುಣಗಾನ ಮಾಡಿದ ಹಾಲಿವುಡ್ ದಿಗ್ಗಜರು, ಇವರು ಚಿತ್ರರಂಗದ ಸರ್ವಶ್ರೇಷ್ಠ ನಟ, ಮಾರ್ಷಲ್ ಆಟ್ರ್ಸ್ ಚಿತ್ರಗಳ ಮೂಲದ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ ಎಂದರು.  ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಬಹುದಿನ ಕನಸು ಸಾಕಾರಗೊಂಡಿದೆ. ನೀನು ಅನೇಕ ಸಿನಿಮಾ ಪ್ರಶಸ್ತಿಗಳನ್ನು ಗಳಿಸಿರುವೆ. ನಿನಗೆ ಆಸ್ಕರ್ ಪುರಸ್ಕಾರ ಲಭಿಸುವುದು ಯಾವಾಗ ಎಂದು ನನ್ನ ತಂದೆ ಕೇಳುತ್ತಿದ್ದರು. ಈಗ ಅದು ಈಡೇರಿದೆ ಎಂದು ಸಂಭ್ರಮದಿಂದ ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin