ರಣಜಿ ಕ್ರಿಕೆಟ್ : ಕರ್ನಾಟಕ ಕಡಿವಾಣ ಹಾಕುವುದೇ ಒಡಿಸ್ಸಾ ..?

ಈ ಸುದ್ದಿಯನ್ನು ಶೇರ್ ಮಾಡಿ

poddar

ನವದೆಹಲಿ, ನ.20- ಪ್ರಸಕ್ತ ರಣಜಿ ಋತುವಿನಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಜಯಿಸುವ ಮೂಲಕ ಅಶ್ವಮೇಧದ ಯಾಗದ ಕುದುರೆಯಂತೆ ಮುನ್ನುಗ್ಗುತ್ತಿರುವ ವಿನಯ್‍ಕುಮಾರ್ ನಾಯಕತ್ವದ ಕರ್ನಾಟಕ ತಂಡಕ್ಕೆ ಒಡಿಸ್ಸಾ ಕಡಿವಾಣ ಹಾಕಲು ಪರದಾಡುತ್ತಿದೆ. ತಾನು ಆಡಿರುವ 5 ಪಂದ್ಯಗಳಲ್ಲಿ ಕೇವಲ 1 ರಲ್ಲಿ ಮಾತ್ರ ಜಯ ಗಳಿಸಿರುವ ಒರಿಸ್ಸಾ ನಾಳೆಯಿಂದ ಇಲ್ಲಿ ಆರಂಭವಾಗುವ ರಣಜಿ ಪಂದ್ಯದಲ್ಲಿ ಕರ್ನಾಟಕದ ಕಠಿಣ ಸವಾಲು ಹೇಗೆ ಎದುರಿಸಬೇಕೆಂಬ ಬಗ್ಗೆ ನಾಯಕ ಗೋವಿಂದ ಪೊಡ್ಡರ್ ಕಾರ್ಯತಂತ್ರ ರೂಪಿಸಿದ್ದಾರೆ.

ಕಾಡುತ್ತಿರುವ ಆರಂಭಿಕರ ವೈಫಲ್ಯ:
ಸತತ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿರುವ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರರದೇ ದೊಡ್ಡ ತಲೆನೋವಾಗಿ ಪರಿಣಿಸಿದೆ. ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಹಾಗೂ ಆರ್.ಸಮರ್ಥ್ ಅವರು ಉತ್ತಮ ಜೊತೆಯಾಟ ನೀಡಿದ್ದರು. ಆದರೆ ಉಳಿದ ಪಂದ್ಯಗಳಲ್ಲಿ ಸಮರ್ಥ್ ರೋಚಕ ಬ್ಯಾಟಿಂಗ್ ಪ್ರದರ್ಶನ ನೀಡಿದರೂ ಅವರಿಗೆ ಉತ್ತಮ ಬೆಂಬಲ ದೊರೆತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಭರವಸೆಯ ಬ್ಯಾಟ್ಸ್‍ಮನ್‍ಗಳಾದ ರಾಬಿನ್ ಉತ್ತಪ್ಪ , ಮಯಾಂಕ್ ಅಗರ್‍ವಾಲ್‍ರವರಿಂದಲೂ ಸ್ಥಿರ ಪ್ರದರ್ಶನ ಕಂಡು ಬರದಿರುವುದು ಕೂಡ ವಿನಯ್‍ಗೆ ತಲೆನೋವಾಗಿದೆ.

ಬೌಲಿಂಗ್ ಬಲಿಷ್ಠ:
ಒರಿಸ್ಸಾ ತಂಡಕ್ಕೆ ಹೋಲಿಸಿದರೆ ಕರ್ನಾಟಕದ ಬೌಲಿಂಗ್ ಪಡೆ ಸಮರ್ಥವಾಗಿದೆ. ನಾಯಕ ವಿನಯ್‍ಕುಮಾರ್, ಶ್ರೀನಾಥ್ ಅರವಿಂದ್‍ರ ವೇಗದ ಅಸ್ತ್ರದ ಜೊತೆಗೆ ಶ್ರೀಯಾಸ್ ಗೋಪಾಲ್, ಕೆ.ಗೌತಮ್‍ರ ಸ್ಪಿನ್ ಎದುರಾಳಿ ಬ್ಯಾಟ್ಸ್‍ಮನ್‍ಗಳಿಗೆ ಕಠಿಣ ಸವಾಲಾಗಿ ಪರಿಣಮಿಸಲಿದೆ.

ಮನೀಷ್ ಪಾಂಡೆಗೆ ಸ್ಥಾನ:
ರಾಜಸ್ಥಾನ ಪಂದ್ಯದಲ್ಲಿ ತಂಡದಿಂದ ಹೊರಗುಳಿದಿದ್ದ ಮನೀಷ್ ಪಾಂಡೆ ಅವರು ಮತ್ತೆ ತಂಡವನ್ನು ಕೂಡಿಕೊಳ್ಳುವುದರಿಂದ ಬ್ಯಾಟಿಂಗ್ ಬಲ ಹೆಚ್ಚಲಿದೆ. ಒಡಿಸ್ಸಾ ತಂಡದ ನಾಯಕ ಜಿ.ಬಿ.ಪೊಡ್ಡಾರ್ ತಂಡದ ಬಲಿಷ್ಠ ಬ್ಯಾಟಿಂಗ್ ಅಸ್ತ್ರವಾಗಿದ್ದರೂ ಅವರಿಗೆ ಉಳಿದ ಬ್ಯಾಟ್ಸ್‍ಮನ್‍ಗಳಿಂದ ಉತ್ತಮ ಬೆಂಬಲ ದೊರೆಯದಿರುವುದರಿಂದ ಒಡಿಸ್ಸಾ ಬೃಹತ್ ಮೊತ್ತ ಗಳಿಸಲು ಎಡವಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಎಸ್.ಬಿ.ಪ್ರಧಾನ್ ಎದುರಾಳಿ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಬ್ರೇಕ್ ಹಾಕಿದರೂ ಕೂಡ ಇನ್ನುಳಿದ ಬೌಲರ್‍ಗಳು ದುಬಾರಿಯಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin