ಅರಣ್ಯ ಇಲಾಖೆಯ ಅಧಿಕಾರಿಗಳು ವಿಶೇಷ ದಾಳಿ ನಡೆಸಿ ನಾಲ್ಕು ಕೆಜಿ ಗಂಧ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ನ.21- ಅರಣ್ಯ ಇಲಾಖೆಯ ಅಧಿಕಾರಿಗಳು ವಿಶೇಷ ದಾಳಿ ನಡೆಸಿ ನಾಲ್ಕು ಕೆಜಿ ಗಂಧ ವಶಪಡಿಸಿಕೊಂಡಿರುವ ಘಟನೆ ಎಚ್.ಡಿ.ಕೋಟೆಯ ನುಗು ಜಲಾಶಯ ಸಮೀಪ ನಡೆದಿದೆ. ಜಲಾಶಯದ ಬಳಿ ಇರುವ ಕಾಂಗ್ರೆಸ್ ಮುಖಂಡರಿಗೆ ಸೇರಿದ ಫಾರ್ಮ್ ಹೌಸ್‍ವೊಂದಕ್ಕೆ ದಿಢೀರ್ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳು ಫಾರ್ಮ್ ಹೌಸನ್ನು ಪರಿಶೀಲಿಸಿ 4 ಕೆಜಿ ಗಂಧ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin