ಅರ್ಜೆಂಟೈನಾ, ಚಿಲಿಯಲ್ಲಿ 6.4ರಷ್ಟು ತೀವ್ರತೆಯ ಪ್ರಬಲ ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

Earthquake-002

ಸ್ಯಾಂಟಿಯಾಗೋ, ನ.21– ಅರ್ಜೆಂಟೈನಾ ಮತ್ತು ಚಿಲಿ ಗಡಿ ಭಾಗದಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆಯ ಭೂಕಂಪದಿಂದ ಸಾವು-ನೋವು ಅಥವಾ ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ.  ಅರ್ಜೆಂಟೈನಾದ ಪಶ್ಚಿಮ ಭಾಗ ಮತ್ತು ಚಿಲಿ ಗಡಿ ಭಾಗಗಳಲ್ಲಿ ಭೂಮಿ ಕಂಪಿಸಿದ ವರದಿಗಳಿವೆ. ಕೆಲವೆಡೆ ಹಲವು ಕಟ್ಟಡಗಳು ನಡುಗಿಡ ವರದಿಗಳಿವೆ.  ಅರ್ಜೆಂಟೈನಾದ ಸಾನ್ ಜೌನ್ ಪಟ್ಟಣದಿಂದ 24 ಕಿ.ಮೀ. ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿತ್ತು ಎಂದು ಭೂಗರ್ಭ ಸರ್ವೇಕ್ಷಣಾ ಇಲಾಖೆ ಹೇಳಿದೆ. ಭೂಕಂಪ ನಂತರ ಸುನಾಮಿ ಅಪ್ಪಳಿಸಬಹುದೆಂಬ ಆತಂಕವೂ ಎದುರಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin