ಜಾನುವಾರುಗಳ ಆರೋಗ್ಯ ತಪಾಸಣೆ ಮಾಡಿಸಿ

ಈ ಸುದ್ದಿಯನ್ನು ಶೇರ್ ಮಾಡಿ

KRPETE

ಕೆ.ಆರ್.ಪೇಟೆ, ನ.21- ಜಾನುವಾರುಗಳ ಆರೋಗ್ಯ ರಕ್ಷಣೆ ಮಾಡುವುದರಿಂದ ರೈತರ ಅಭಿವೃದ್ಧಿ ಸಾಧ್ಯ. ರೈತರು ತಮ್ಮ ಜಾನುವಾರುಗಳ ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದು ತಾಲೂಕು ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ದೇವರಾಜು ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕವು ತಾಲೂಕಿನ ನಾಡಬೋಗನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನಾ ವಾರ್ಷಿಕ ವಿಶೇಷ ಶಿಬಿರದಲ್ಲಿ ಜಾನುವಾರು ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ರೈತರ ಅಭಿವೃದ್ಧಿಯಲ್ಲಿ ಜಾನುವಾರುಗಳ ಪ್ರಮುಖ ಪಾತ್ರ ವಹಿಸುತ್ತವೆ. ಕೃಷಿ ಯಾಂತ್ರೀಕರಣಕ್ಕೆ ಮೊದಲು ಜಾನುವಾರುಗಳು ಬೇಸಾಯಕ್ಕೆ ಬಳಕೆ ಮಾಡಲಾಗುತ್ತಿದೆ. ಜೊತೆಗೆ ಈಗಲೂ ರೈತರು ಕೃಷಿಯಲ್ಲಿ ನಷ್ಟವುಂಟಾದರೆ ಹೈನುಗಾರಿಕೆಯಿಂದ ರೈತರು ನಷ್ಟ ಭರ್ತಿ ಮಾಡಿಕೊಳ್ಳಲು ಜಾನುವಾರುಗಳು ಸಹಕಾರಿಯಾಗಿವೆ.

ಆದ್ದರಿಂದ ರೈತರ ಜೀವನಾಡಿಯಾಗಿರುವ ಜಾನುವಾರುಗಳಿಗೆ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಬೇಕು. ಮಾರಕ ಕಾಯಿಲೆ ಕಾಲು ಬಾಯಿಜ್ವರ ಬಾರದಂತೆ ಜಾನುಬಾಯಿ ಜ್ವರ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸುವ ಮೂಲಕ ರೋಗದಿಂದ ರಕ್ಷಿಸಬೇಕು ಎಂದು ಡಾ.ದೇವರಾಜು ರೈತರಿಗೆ ಸಲಹೆ ನೀಡಿದರು.ಪಶು ವೈದ್ಯಾಧಿಕಾರಿಗಳಾದ ಡಾ.ರವಿಕುಮಾರ್, ಡಾ.ಕೃಷ್ಣೇಗೌಡ, ಡಾ.ಕಾರ್ತಿಕ್, ಪಶು ಸಹಾಯಕರಾದ ಕುಮಾರ್ ಮತ್ತಿತರರ ನೇತೃತ್ವದ ತಂಡ ಗ್ರಾಮದ ಸುಮಾರು 300ಕ್ಕೂ ಹೆಚ್ಚು ಜಾನುವಾರುಗಳ ಆರೋಗ್ಯ ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡಿದರು. ಎನ್.ಎಸ್.ಎಸ್. ಸ್ವಯಂ ಸೇವಕರು ಮನೆ ಮನೆಗೆ ತೆರಳಿ ರೈತರನ್ನು ಮನವೊಲಿಸಿ ಶೇ.100ರಷ್ಟು ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು.ಎನ್.ಎಸ್.ಎಸ್.ಅಧಿಕಾರಿ ಎಸ್.ಚಂದ್ರಶೇಖರ್, ಗ್ರಾ.ಪಂ. ಸದಸ್ಯ ಮಹಾದೇವ್, ಶಿಕ್ಷಕ ಚಂದ್ರಪ್ಪ, ಆರ್.ಶ್ರೀನಿವಾಸ್ ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin