ಜಿಲ್ಲಾಸ್ಪತ್ರೆಗೆ ಶಾಲಿನಿ ರಜನೀಶ್ ಭೇಟಿ : ಅಧಿಕಾರಿಗಳಿಗೆ ತರಾಟೆಗೆ

ಈ ಸುದ್ದಿಯನ್ನು ಶೇರ್ ಮಾಡಿ

hospital

ಬೆಳಗಾವಿ,ನ.21- ಜಿಲ್ಲಾಸ್ಪತ್ರೆಗೆ ನಿನ್ನೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ನಂತರ ಅಧಿಕಾರಿಗಳೊಂದಿಗೆ ಮಾತನಾಡಿ, ನಾನು ಇಲ್ಲಿನ ಜಿಲ್ಲಾಧಿಕಾರಿ ಆಗಿದ್ದಾಗ ಜಿಲ್ಲಾಸ್ಪತ್ರೆ ಯಾವ ಪರಿಸ್ಥಿತಿ ಇದೆಯೋ ಅದೇ ರೀತಿ ಇದೆ. ಆಸ್ಪತ್ರೆಗೆ ಸಾಕಷ್ಟು ಅನುದಾನ ಬಂದರೂ ಸರಿಯಾಗಿ ಬಳಸಿಕೊಂಡಿಲ್ಲ. ಅಲ್ಲದೆ ಆಸ್ಪತ್ರೆಯನ್ನು ಸುಧಾರಿಸುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಆಸ್ಪತ್ರೆಯ ಹೆರಿಗೆ ವಾರ್ಡಿಗೆ ಭೈೀಟಿ ನೀಡಿದ ಅವರು ಬಾನಂತಿಯರ ಆರೋಗ್ಯ ವಿಚಾರಿಸಿದರು. ಬಿಸಿ ನೀರು ಸೇರಿದಂತೆ ಇತರೆ ಆರೋಗ್ಯ ಸೇವೆಗಳು ನಿಗದಿತ ಸಮಯದಲ್ಲಿ ಸಿಗುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.

ಆಸ್ಪತ್ರೆಯಲ್ಲಿನ ಅನೈರ್ಮಲ್ಯ ನೋಡಿದ ಅವರು ಜಿಲ್ಲಾ ಆರೋಗ್ಯಾಧಿಕಾರಿ ನರಹಟ್ಟಿ ಹಾಗೂ ಕಳಸದ ಅವರಿಗೆ ಆಸ್ಪತ್ರೆಯಲ್ಲಿ ಸ್ವಚ್ಚತೆ ಕಾಪಾಡುವಂತೆ ಸೂಚನೆ ನೀಡಿದರು.ಆರೋಗ್ಯ ಅಧಿಕಾರಿ ಅಪ್ಪಾಸಾಹೇಬ್ ನರಟ್ಟಿ ಸೇರಿದಂತೆ ಇತರೆ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin