ತನ್ನನ್ನು ಬಿಟ್ಟು ಗಂಡನ ಮನೆ ಸೇರಿದ ಪ್ರೇಯಸಿಯನ್ನೇ ಕೊಚ್ಚಿ ಕೊಂದ ಪ್ರಿಯಕರ

ಈ ಸುದ್ದಿಯನ್ನು ಶೇರ್ ಮಾಡಿ

Murder-2

ಮೈಸೂರು,ನ.21-ತಾಳಿ ಕಟ್ಟಿದ ಪತಿಯ ಮಾತನ್ನು ಧಿಕ್ಕರಿಸಿ ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋದ ಮಹಿಳೆಯನ್ನು ಪ್ರಿಯಕರನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಉಪ್ಪಾರಗೇರೆಯ ನಿವಾಸಿ ಮಂಗಳ(28) ಕೊಲೆಯಾದ ಮಹಿಳೆ.  ಶಿವ ಎಂಬುವರ ಜೊತೆ ವಿವಾಹವಾಗಿದ್ದ ಮಂಗಳಾಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ಆಕೆಗೆ ಅದೇ ಗ್ರಾಮದ ರವಿ ಎಂಬಾತನ ಜೊತೆ ಪ್ರೇಮಾಂಕುರವಾಗಿದೆ.  ಈ ವಿಷಯ ತಿಳಿದ ಗಂಡ ಪತ್ನಿಗೆ ಬುದ್ದಿಮಾತು ಹೇಳಿದ ನಂತರವೂ ಪ್ರಿಯಕರ ರವಿ ಜೊತೆ ಬೆಂಗಳೂರಿಗೆ ಮಂಗಳ ಹೋಗಿದ್ದಳು.

ನಂತರ ಈ ವಿಚಾರವಾಗಿ ಶಿವ ಹಾಗೂ ಮಂಗಳ ಅವರ ಕುಟುಂಬಸ್ಥರು ಇವರಿಬ್ಬರ ನಡುವೆ ರಾಜಿ ಪಂಚಾಯ್ತಿ ನಡೆಸಿದ್ದರಿಂದ ಮಂಗಳ ಪತಿಯೊಂದಿಗೆ ಮನೆಗೆ ಹಿಂದಿರುಗಿದ್ದಳು.  ಇದರಿಂದ ಕುಪಿತಗೊಂಡ ಪ್ರಿಯಕರ ರವಿ ಆಕೆಯ ಮನೆಗೆ ನುಗ್ಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಪಿರಿಯಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರವಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin