ಪಿಂಚಣಿ-ಸೇವಾಭದ್ರತೆಗೆ ಕಂದಾಯ ಇಲಾಖೆ ನೌಕರರ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

cm

ಬೆಳಗಾವಿ,ನ.21- ಸುಮಾರು ಮೂವತ್ತೆಂಟು ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿದರೂ ಸೇವಾ  ಪಿಂಚಣಿ, ಬಡ್ತಿ ಸೇರಿದಂತೆ ಇತರೆ ಸೌಲಭ್ಯಗಳು ದೊರಕುತ್ತಿಲ್ಲ. 2013ರ ನ.25ರಂದು ಇಲ್ಲಿನ ಅಧಿವೇಶನದಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿದವನ್ನು ಡಿ ದರ್ಜೆ ಎಂದು ಪರಿಗಣಿಸಲಾಗುವುದೆಂದು ಭರವಸೆ ನೀಡಿದ್ದರು. ಆದರೆ ಇದುವರೆಗೆ ಈಡೇರಿಲ್ಲ. ನಮ್ಮ ಬೇಡಿಕೆ ಈಡೇರಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ. ಈ ಕುರಿತು ಚಳಿಗಾಲ ಅಧಿವೇಶನದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ಕಂದಾಯ ಗ್ರಾಮ ಸಹಾಯಕರ ಸಂಘ ನಿರ್ಧರಿಸಿದೆ. ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದ 10,450 ಗ್ರಾಮ ಸಹಾಯಕರಿಗೆ ಪಿಂಚಣಿ, ಸೇವಾ ಭದ್ರತೆಯೂ ಇಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ, ಸೌಲಭ್ಯವೂ ಇಲ್ಲ. ಕೇವಲ ಹತ್ತು ಸಾವಿರ ಗೌರವಧನ ಪಡೆಯುತ್ತಿದ್ದರೂ ಇವರ ಸ್ಥಿತಿ ಅತಂತ್ರವಾಗಿರುವುದರಿಂದ ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡುವಂತಾಗಿದೆ.

ಕಂದಾಯ ಇಲಾಖೆಯ ಕಾರ್ಯನಿರ್ವಹಿಸುತ್ತ್ತಿರುವ ಗ್ರಾಮ ಸಹಾಯಕರು, ಇಂದಿನ ದುಬಾರಿ ಕಾಲದಲ್ಲಿ ಪರದಾಡುತ್ತಿರುವ ರಾಜ್ಯದ ಶೇ.90 ರಷ್ಟು ಗ್ರಾಮ ಸಹಾಯಕರು ನಿವೃತ್ತಿ ಅಂಚಿನಲ್ಲಿದ್ದಾರೆ. ತಮ್ಮ ಸೇವಾ ದಿನಗಳ ಕೊನೆ ಗಳಿಗೆಯಲ್ಲೂ ದಿನನಿತ್ಯ ಆಶಾಭಾವನೆಯಿಂದ ಸರಕಾರ ಹೊರಡಿಸುತ್ತಿರುವ ಆದೇಶಗಳ ಕಡೆಗೆ ನೋಡುತ್ತಲೇ ಕಾಲ ಕಳೆಯುತ್ತಿದ್ದಾರೆ. ಈ ಗ್ರಾಮ ಸಹಾಯಕರಲ್ಲಿ ಶೇ.90 ರಷ್ಟು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಬೇರೆ ಪಕ್ಷ ಅಧಿಕಾರದಲ್ಲಿದ್ದ್ದಾಗ ಇದೇ ವಿಷಯವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ದ ಹೋರಾಟ ಮಾಡಿದ ಪಕ್ಷ, ತಮ್ಮ ಅಧಿಕಾರದ ಅವಧಿಯಲ್ಲಿ ಇದು ತಮಗೆ ಸಂಬಂಧಿಸಿದ ವಿಚಾರವಲ್ಲ ಎನ್ನುವಂತೆ ಜಣ ಕುರುಡುತನ ಪ್ರದರ್ಶನ ಮಾಡುತ್ತಿದೆ. ಇಲ್ಲಿಯವರೆಗೆ ಹುದ್ದೆಗೆ ತಕ್ಕ ವೇತನ, ಪಿಂಚಣಿ, ಗ್ರ್ಯಾಚ್ಯುಟಿ, ಬಡ್ತಿ, ಗೌರವಧನ ಪಡೆಯುವ ನೌಕಕರನ್ನು ಖಾಯಂ ನೌಕರರೆಂದು ಪರಿಗಣಿಸಿಲ್ಲ, ಹೀಗಾಗಿ ನೌಕರರಿಗೆ ನಿವೃತ್ತಿ ನಂತರ ಸಿಗುವ ಸೌಲಭ್ಯ ಸಿಗುತ್ತಿಲ್ಲ. ಒಟ್ಟಿನಲ್ಲಿ ಗ್ರಾಮಗಳಲ್ಲಿ ಗ್ರಾಮ ಸಹಾಯಕ, ತಳವಾರ, ತೋಟ, ವಾಲಿಕಾರ, ಹಳಬ, ಸನದಿ ಎಂದು ನೇಮಕಗೊಂಡವರ ಪೈಕಿ ಕೆಲವರು ಈಗಾಗಲೇ ನಿವೃತ್ತಿ ಹೊಂದಿದ್ದಾರೆ.
2013ರ ನ.25 ರಂದು ಖಾನಾಪುರ ತಾಲೂಕಿನ ನಂದಗಡ ಗ್ರಾಮದಿಂದ ಸುವರ್ಣ ವಿಧಾನ ಸೌಧದವರೆಗೆ ಬೃಹತ್ ಪ್ರತಿಭಟನಾ ಪಾದಯಾತ್ರೆ ಮೂಲಕ ರಾಜ್ಯದ 10450 ಜನ ಗ್ರಾಮ ಸಹಾಯಕರು ಮತ್ತು ರಾಜ್ಯ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಪಾದಯಾತ್ರೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿತ್ತು. ನ.28 ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಗ್ರಾಮ ಸಹಾಯಕರ ಪದಾಧಿಕಾರಿಗಳನ್ನು ಕರೆದು ಡಿ ದರ್ಜೆ ನೌಕರರು ಎಂದು ಪರಿಗಣಿಸುವುದಾಗಿ ಭರವಸೆ ನೀಡಿದ್ದರು. ಆದರೆ ಸರ್ಕಾರ ಭರವಸೆ ಈಡೇರಿಸರಿಸಿರುವುದು ಸದ್ಯ ಆಕ್ರೋಶಕ್ಕೆ ಕಾರಣವಾಗಿದೆ. 38 ವರ್ಷ ಕಂದಾಯ ಇಲಾಖೆಯ ಸೇವೆಯಲ್ಲಿದ್ದರೂ ಇಂದಿಗೂ ಇವರಿಗೆ ರಜೆ, ಬಡ್ತಿ, ಆರೋಗ್ಯ ಸೇರಿದಂತೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಮಕ್ಕಳ ಶಿಕ್ಷಣ, ತಂದೆ-ತಾಯಿ, ಹೆಂಡತಿ ಜೀವನಕ್ಕಾಗದ ಮಿತ ಗೌರವಧನ, ಗ್ರಾಮ ಮಟ್ಟದಿಂದ ತಾಲೂಕು ಕಚೇರಿಗೆ, ಚುನಾವಣಾ ಕರ್ತವ್ಯ ಸೇರಿದಂತೆ ವಿವಿಧ ಕೆಲಸ ನಿರ್ವಹಿಸಿದರೂ ಯಾವುದೇ ಧನ ಸಹಾಯ ಇಲ್ಲದ ಇವರು ಅಭದ್ರತೆಯಿಂದ ಜೀವನ ಸಾಗಿಸುತ್ತಿದ್ದಾರೆ.
ಕಳೆದೆರಡು ವರ್ಷದ ಹಿಂದೆ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ನೀಡಿದ ಭರವಸೆಯಂತೆ ಮುಖ್ಯಮಂತ್ರಿಗಳು ತಮ್ಮನ್ನು ಡಿ ದರ್ಜೆ ನೌಕರರಾಗಿ ಪರಿಗಣಿಸುವವರೆಗೆ ಹೋರಾಟ ಮುಂದುವರಿಸಲಿದ್ದೇವೆ. ಮಹಾದೇವಪ್ಪ ಇಂಗಳಗಿ, ಜಿಲ್ಲಾಧ್ಯಕ್ಷ, ಗ್ರಾಮ ಸಹಾಯಕರ ಸಂಘ

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin