ಆಫ್ಘಾನಿಸ್ತಾನ ಮಸೀದಿಯೊಂದರ ಮೇಲೆ ಆತ್ಮಾಹುತಿ ಬಾಂಬ್ ದಾಳಿ : 32ಕ್ಕೇರಿದ ಸಾವಿನ ಸಂಖ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

32-Killed

ಕಾಬೂಲ್, ನ.22-ಆಫ್ಘಾನಿಸ್ತಾನ ರಾಜಧಾನಿಯ ಮಸೀದಿಯೊಂದರ ಮೇಲೆ ನಿನ್ನೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೇರಿದೆ. ಅಲ್ಪಸಂಖ್ಯಾತ ಶಿಯಾ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಉಗ್ರರು ಕಾಬೂಲ್‍ನಲ್ಲಿ ನಡೆಸಿದ ಎರಡನೇ ದೊಡ್ಡ ಪ್ರಮಾಣದ ದಾಳಿ ಇದಾಗಿದೆ.  ಪಶ್ಚಿಮ ಕಾಬೂಲ್‍ನ ಶಿಯಾ ಮಸೀದಿಗೆ ಪ್ರಾರ್ಥನೆ ನೆಪದಲ್ಲಿ ತೆರಳಿದ ಬಾಂಬರ್ ಗುಂಪಿನ ಮಧ್ಯೆ ತನ್ನನ್ನು ತಾನು ಸ್ಫೋಟಿಸಿಕೊಂಡ. ಈ ದಾಳಿಯಲ್ಲಿ ಈವರೆಗೆ 32 ಮಂದಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಗಾಯಗಳಾಗಿವೆ ಎಂದು ಆಫ್ಘನ್ ಪೊಲೀಸರು ತಿಳಿಸಿದ್ದಾರೆ. ಈ ದಾಳಿಗೆ ತಾನೇ ಹೊಣೆ ಎಂದು ಯಾವುದೇ ಉಗ್ರಗಾಮಿ ಸಂಘಟನೆ ಹೇಳಿಕೊಂಡಿಲ್ಲವಾದರೂ, ತಾಲಿಬಾನ್ ಅಥವಾ ಇಸ್ಲಾಮಿಕ್ ಸ್ಟೇಟ್ ಉಗ್ರರ ಕೃತ್ಯ ಇದಾಗಿದೆ ಎಂದು ಪರಿಗಣಿಸಲಾಗಿದೆ.

ಶಿಯಾ ಮಸೀದಿಗಳ ಮೇಲೆ ಭಯೋತ್ಪಾದಕರು ನಡೆಸುತ್ತಿರುವ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಕ್ಟೋಬರ್‍ನಲ್ಲಿ ಕಾಬೂಲ್‍ನಲ್ಲಿ ಸ್ಥಳೀಯ ಶಿಯಾ ಮುಖಂಡ ಹುಸೇನ್ ಸಾವಿನ ವರ್ಷಾಚರಣೆ ಕಾರ್ಯಕ್ರಮದ ಮೇಲೆ ನಡೆದ ಬಾಬಂ ದಾಳಿಯಲ್ಲಿ 17 ಮಂದಿ ಮೃತರಾಗಿದ್ದರು. ಅದಾದ ಮರುದಿನ ಮಝೆರ್-ಎ-ಶರೀಪ್‍ನಲ್ಲಿ ಅದೇ ರೀತಿಯ ವಿಧ್ವಂಸಕ ಕೃತ್ಯದಲ್ಲಿ ಕನಿಷ್ಠ 14 ಮಂದಿ ಹತರಾಗಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin