ಜಾಲಿ ರೈಡ್ ತಂದ ಆಪತ್ತು, ಇಬ್ಬರು ಬಿಇ ವಿದ್ಯಾರ್ಥಿಗಳ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Accident-Death

ಬೆಂಗಳೂರು, ನ.23- ಜಾಲಿ ರೈಡಿಂಗ್‍ಗೆ ಬೈಕ್‍ನಲ್ಲಿ ತೆರಳಿದ್ದ ಇಬ್ಬರು ಬಿಇ ವಿದ್ಯಾರ್ಥಿಗಳು ದುರಂತ ಸಾವಿಗೀಡಾದ ಘಟನೆ ಸದಾಶಿವನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಮೂಲತಃ ಕೋಲಾರದ ತಾಮಗುಣವಂತಸಾಯಿ (19) ಮತ್ತು ನಂಜನಗೂಡಿನ ವಿಷ್ಣುದತ್ತ (19) ಮೃತಪಟ್ಟ ಬಿಇ ವಿದ್ಯಾರ್ಥಿಗಳು. ತಾಮಗುಣವಂತ ಸಾಯಿ ಮೂರನೆ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದರೆ, ವಿಷ್ಣುದತ್ತ ಬಿಇ ಆರ್ಟಿಟೆಕ್ಚಲ್ ವ್ಯಾಸಂಗ ಮಾಡುತ್ತಿದ್ದರು.  ತ್ರಿವೇಣಿ ರಸ್ತೆಯಲ್ಲಿನ ಪಿಜಿಯೊಂದರಲ್ಲಿದ್ದ ಇವರಿಬ್ಬರೂ ರಾತ್ರಿ ಊಟ ಮಾಡಿ 12.30ರಲ್ಲಿ ಜಾಲಿರೈಡ್‍ಗಾಗಿ ಬೈಕ್‍ನಲ್ಲಿ ಹೊರಗೆ ಹೋಗಿದ್ದಾರೆ. ನ್ಯೂ ಬಿಇಎಲ್ ರಸ್ತೆಯ ಅಯ್ಯಪ್ಪ ದೇವಸ್ಥಾನ ಬಳಿ ಬರುತ್ತಿದ್ದಂತೆ ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದಿದೆ.

ಪರಿಣಾಮವಾಗಿ ಬೈಕ್ ಚಲಾಯಿಸುತ್ತಿದ್ದ ತಾಮಗುಣವಂತ ಸಾಯಿ ಹಾಗೂ ಹಿಂಬದಿ ಕುಳಿತಿದ್ದ ವಿಷ್ಣುದತ್ತ ಗಂಭೀರ ಗಾಯಗೊಂಡರು. ತಕ್ಷಣ ಇವರಿಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.  ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಇವರಿಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸದಾಶಿವನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

<  ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : ಪರಿಚಯಿಸುತ್ತಿದ್ದೇವೆ Eesanje News 24/7 ನ್ಯೂಸ್ ಆ್ಯಪ್ –  Click Here to Download >

Facebook Comments

Sri Raghav

Admin