ಮರಳು ಕೊರತೆ : ಮರಳು ಉಸ್ತುವಾರಿ ಸಮಿತಿ ಸಭೈಯಲ್ಲಿ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

sand

ಹಿರಿಯೂರು, ನ.23-ನಗರದ ತಾಲ್ಲೂಕು ಕಚೇರಿಯಲ್ಲಿ ತಹಸೀಲ್ದಾರ್ ವೆಂಕಟೇಶಯ್ಯ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ, ಸರ್ಕಾರಿ ಕಟ್ಟಡ ನಿರ್ಮಾಣ ಮಂಡಳಿಗಳ ಮರಳು ಉಸ್ತುವಾರಿ ಸಭೆಯಲ್ಲಿ ತುರ್ತಾಗಿ ಮರಳು ಎತ್ತುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.ಖಾಸಗಿ, ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಮರಳಿನ ಪೂರೈಕೆಯಲ್ಲಿ ಆಗಿರುವ ತೀವ್ರ ಕೊರತೆ ಕುರಿತು ಸಭೈಯಲ್ಲಿ ಚರ್ಚೆ ನಡೆಸಿ ಮರಳು ಲಭ್ಯವಿಲ್ಲದ ಕಾರಣ ಎಲ್ಲಾ ಸರ್ಕಾರಿ ಕಾಮಗಾರಿಗಳು ಮತ್ತು ಇತರೆ ಕಟ್ಟಡಗಳ ಕಾಮಗಾರಿಗಳ ಪ್ರಗತಿ ಕುಂಠಿತವಾಗಿದೆ. ತಾಲ್ಲೂಕಿಗೆ ಅಗತ್ಯವಿರುವ ಮರಳನ್ನು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಗುರುತಿಸಿರುವ ಬ್ಲಾಕ್‍ಗಳಲ್ಲಿ ತುರ್ತಾಗಿ ಮರಳು ಎತ್ತುವಳಿ ಮಾಡುವ ಕುರಿತು ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಯಿತು.

ತಾಲ್ಲೂಕಿನ ವಿವಿಧ ಸರ್ಕಾರಿ ಮರಳು ಬ್ಲಾಕ್‍ಗಳಲ್ಲಿ ಮರಳುತೆಗೆದು ಸಾಗಿಸುವ ಟೆಂಡರ್ ಪ್ರಕ್ರಿಯೆ ನಡೆಸಲು ಹಾಗೂ ತಾಲ್ಲೂಕಿನ ಮರಳನ್ನು ಬೇರೆಡೆ ಸಾಗಿಸದೇ ಕೇವಲ ತಾಲ್ಲೂಕಿನ ವ್ಯಾಪ್ತಿಯ ಕಾಮಗಾರಿಗಳ ನಿರ್ವಹಣೆಗೆ ಬಳಸುವ ಕುರಿತು ಕೂಡ ಸಭೆಯು ತೀರ್ಮಾನ ಕೈಗೊಂಡಿತು. ಅನಂತರ ಸರ್ಕಾರಿ ಮರಳು ಬ್ಲಾಕ್‍ಗಳ ಸ್ಥಿತಿಗತಿ ಕುರಿತಂತೆ ಖುದ್ದು ವೀಕ್ಷಣೆ ಮಾಡಲಾಯಿತು.ಧರ್ಮಪುರ ಹೋಬಳಿ ಹೂವಿನಹೊಳೆ ಗ್ರಾಮದ ಬಳಿಯ ಸುವರ್ಣಮುಖಿ ನದಿ ಪಾತ್ರದ ಸರ್ಕಾರಿ ಮರಳು ಬ್ಲಾಕ್ ಮರಳು ಎತ್ತುವಳಿ ಮಾಡಲು ಸೂಕ್ತ ಎಂದು ಜಿಲ್ಲಾಧಿಕಾರಿಗೆ ವರದಿ ನೀಡಲು ಸಭೆಯು ನಿರ್ಣಯ ಕೈಗೊಂಡಿದೆ.ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಹಾಯಕ ನಿರ್ದೇಶಕರು, ತಾಪಂ ಕಾರ್ಯ ನಿರ್ವಹಣಾಧಿಕಾರಿ, ಆರಕ್ಷಕ ವೃತ್ತ ನಿರೀಕ್ಷಕರು, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕುಡಿವ ನೀರು ಮತ್ತು ನೈರ್ಮಲೀಕರಣ ಇಲಾಖೆಯ ಎಇಇ, ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ, ತಾಲ್ಲೂಕಿನ ವಿವಿಧ ಫಿರ್ಕಾಗಳ ರಾಜಸ್ಥ ನಿರೀಕ್ಷಕರು ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

 

 

► Follow us on –  Facebook / Twitter  / Google+

Facebook Comments

Sri Raghav

Admin