ಮಲ್ಯ ಸಾಲದಂತೆ ನಮ್ಮ ಸಾಲವನ್ನೂ ಮನ್ನಾ ಮಾಡುವಂತೆ ಬ್ಯಾಂಕ್‍ಗೆ ಅರ್ಜಿ ಹಾಕಿದ ರೈತ

ಈ ಸುದ್ದಿಯನ್ನು ಶೇರ್ ಮಾಡಿ

Malya-02

ಮಂಡ್ಯ,ನ.23- ಉದ್ಯಮಿ ವಿಜಯಮಲ್ಯ ಅವರ ಸಾಲ ಮನ್ನಾ ಮಾಡುವಂತೆ ನನ್ನ ಸಾಲವನ್ನೂ ಕೂಡ ಮನ್ನಾ ಮಾಡಿ ಎಂದು ರೈತನೊಬ್ಬ ಎಸ್‍ಬಿಐ ಬ್ಯಾಂಕ್‍ಗೆ ಅರ್ಜಿ ಸಲ್ಲಿಸಿರುವ ಪ್ರಸಂಗ ನಡೆದಿದೆ.  ಮದ್ದೂರು ತಾಲ್ಲೂಕಿನ ಶಿವಪುರ ಗ್ರಾಮದಲ್ಲಿರುವ ಎಸ್‍ಬಿಐ ಬ್ಯಾಂಕ್‍ಗೆ ಪೆಣ್ಣೆದೊಡ್ಡಿ ಗ್ರಾಮದ ರೈತ ಸುಧಾಕರ್ ಎಂಬುವರು ಬ್ಯಾಂಕ್ ಮ್ಯಾನೇಜರ್‍ಗೆ ಅರ್ಜಿ ಸಲ್ಲಿಸಿ ವಿಜಯಮಲ್ಯ ಅವರ ಕೋಟ್ಯಂತರ ಸಾಲವನ್ನು ಮನ್ನಾ ಮಾಡಿರುವಂತೆ ನನ್ನ ಸಾಲವನ್ನೂ ಕೂಡ ಮನ್ನಾ ಮಾಡಿ ಎಂದು ಕೇಳಿಕೊಂಡಿದ್ದಾರೆ.  ವಿಜಯ ಮಲ್ಯ ವಿವಿಧ ಬ್ಯಾಂಕ್‍ಗಳಲ್ಲಿ 7 ಸಾವಿರ ಕೋಟಿಗೂ ಹೆಚ್ಚು ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿದ್ದಾರೆ. ಅವರ ಸಾಲವನ್ನು ಮನ್ನಾ ಮಾಡಿದ್ದೀರಿ. ನಾವು ಬೆಳೆ ಬೆಳೆಯಲು ಸಾಲ ಮಾಡಿದ್ದೇವೆ. ಬರಗಾಲದಿಂದ ಬೆಳೆ ಹಾನಿಯಾಗಿ ತೀವ್ರ ಸಂಕಷ್ಟಕ್ಕೀಡಾಗಿದ್ದೇವೆ ಎಂದರು.

2005-06ರಲ್ಲಿ ಜಮೀನು ಮತ್ತು ಟ್ರ್ಯಾಕ್ಟರ್ ಮೇಲೆ ಸುಮಾರು 7 ಲಕ್ಷ ರೂ. ಬ್ಯಾಂಕ್‍ನಿಂದ ಸಾಲ ಪಡೆದಿದ್ದು , ಬೆಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗುತ್ತಿಲ್ಲ. ಹೀಗಾಗಿ ನಮ್ಮ ಸಾಲವನ್ನೂ ಮನ್ನಾ ಮಾಡಿ ಸ್ವಾಮಿ ಎಂದು ಬ್ಯಾಂಕ್ ಮ್ಯಾನೇಜರ್ ಬಳಿ ಮನವಿ ಮಾಡಿದ್ದಾರೆ.

<  ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : ಪರಿಚಯಿಸುತ್ತಿದ್ದೇವೆ Eesanje News 24/7 ನ್ಯೂಸ್ ಆ್ಯಪ್ –  Click Here to Download >

Facebook Comments

Sri Raghav

Admin