ಸಿಆರ್‍ಪಿಎಫ್ ಎನ್‍ಕೌಂಟರ್‍ಗೆ 6 ನಕ್ಸಲರು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

6-Killed

ರಾಂಚಿ,ನ.23-ಸಿಆರ್‍ಪಿಎಫ್ ಕಮಾಂಡ್‍ಗಳ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಆರು ನಕ್ಸಲರು ಹತರಾಗಿರುವ ಘಟನೆ ಜಾರ್ಖಂಡ್‍ನ ಲಥೇಹರ್ ಅರಣ್ಯಪ್ರದೇಶದಲ್ಲಿ ನಡೆದಿದೆ. ಸಿಆರ್‍ಪಿಎಫ್‍ನ ಕೋಬ್ರಾ ಕಮಾಂಡ್‍ಗಳು ನಕ್ಸಲ್ ಪೀಡಿತ ಪ್ರದೇಶದಲ್ಲಿ ಕರಾಮ್ದಿ-ಚ್ಹಿಪದೊಹರ್ ಅರಣ್ಯಪ್ರದೇಶದಲ್ಲಿ ಇಂದು ಬೆಳಗ್ಗೆ 9ರ ಸುಮಾರಿನಲ್ಲಿ ಶೋಧ ಕಾರ್ಯ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ನಕ್ಸಲರ ಗುಂಪು ಯೋಧರ ಮೇಲೆ ಗುಂಡು ಹಾರಿಸಿದೆ. ನಂತರ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಆರು ನಕ್ಸಲರು ಹತರಾಗಿದ್ದಾರೆ. ಎನ್‍ಕೌಂಟರ್ ಸ್ಥಳದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

<  ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : ಪರಿಚಯಿಸುತ್ತಿದ್ದೇವೆ Eesanje News 24/7 ನ್ಯೂಸ್ ಆ್ಯಪ್ –  Click Here to Download >

Facebook Comments

Sri Raghav

Admin