ಉರ್ದು ಭಾಷಿಗರಿಗಾಗಿ 505 ಅಂಗನವಾಡಿ ಆರಂಭ : ಉಮಾಶ್ರೀ

ಈ ಸುದ್ದಿಯನ್ನು ಶೇರ್ ಮಾಡಿ

Umashree-02

ಬೆಳಗಾವಿ, ನ.24- ರಾಜ್ಯಕ್ಕೆ ಕೇಂದ್ರ ಸರ್ಕಾರ 1393 ಅಂಗನವಾಡಿಗಳನ್ನು ಮಂಜೂರು ಮಾಡಿದ್ದು, ಅವುಗಳಲ್ಲಿ 505 ಅಂಗನವಾಡಿಗಳನ್ನು ಉರ್ದು ಭಾಷಿಗರಿಗಾಗಿ ಆರಂಭಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ತುಮಕೂರು ನಗರ ಶಾಸಕ ರಫಿಕ್ ಅಹಮ್ಮದ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜನಸಂಖ್ಯೆಗೆ ಆಧರಿಸಿ ಮುಸ್ಲಿಂ ಸಮುದಾಯಕ್ಕೆ ಅಗತ್ಯ ಇರುವ ಕಡೆ ಅಂಗನವಾಡಿ ಸ್ಥಾಪಿಸಲು ಜಾಗ ಗುರುತಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಶೇ.40ಕ್ಕಿಂತಲೂ ಹೆಚ್ಚಿನ ಉರ್ದು ಭಾಷಿಗರಿದ್ದರೆ ಅಲ್ಲಿ ಅಂಗನವಾಡಿ ಕೇಂದ್ರಗಳನ್ನು ಮಂಜೂರು ಮಾಡುವುದಾಗಿ ಹೇಳಿದರು.

ಪ್ರಶ್ನೆ ಕೇಳಿದ ಶಾಸಕ ರಫಿಕ್ ಅಹಮ್ಮದ್, ಹೊಸ ಅಂಗನವಾಡಿ ಮಂಜೂರಾತಿಗೆ ಅಭಿನಂದನೆ ಸಲ್ಲಿಸಿದ್ದಲ್ಲದೆ, ಜನಸಂಖ್ಯೆಗೆ ಅನುಗುವಣವಾಗಿ ಅಂಗನವಾಡಿ ಕೇಂದ್ರಗಳನ್ನು ಹೇಚ್ಚಿಸಬೇಕು ಎಂದು ಮನವಿ ಮಾಡಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin