ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ರಹಸ್ಯ ಬಯಲು : ವೈಯಕ್ತಿಕ ಕಾರಣಗಳಿಂದಲೇ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

DKRavi

ಬೆಂಗಳೂರು, ನ. 24: ರಾಜ್ಯ ಮತ್ತು ದೇಶದಾದ್ಯಂತ ಬಾರಿ ಸುದ್ದಿಯಾಗಿದ್ದ ಐಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಪ್ರಕರಣದಲ್ಲಿ ಇದ್ದ ಉಹಾಪೋಹಗಳಿಗೆ ಸಿಬಿಐ ತೆರೆ ಎಳೆದಿದ್ದು,ರವಿ ಸಾವಿನ ರಹಸ್ಯ ಬಯಲಾಗಿದೆ .ಡಿ.ಕೆ.ರವಿ ವೈಯಕ್ತಿಕ ಕಾರಣಗಳಿಂದಲೇ  ಆತ್ಮಹತ್ಯೆ  ಮಾಡಿಕೊಂಡಿದ್ದಾರೆ ಎಂದು ಅಂತಿಮ ವರದಿ ಸಲ್ಲಿಸಿದೆ. ಈ ಕುರಿತು 90 ಪುಟಗಳ ವರದಿಯನ್ನು ಸಿಬಿಐ ಸಿದ್ಧಪಡಿಸಿದ್ದು, ಕಮಿಷನರ್ ಗೆ ಸಲ್ಲಿಸುವ ಮುನ್ನವೇ ಮಾಧ್ಯಮಗಳಿಗೆ ದೊರೆತಿದೆ.  ವೈಯಕ್ತಿಕ ಕಾರಣಗಳಿಂದಾಗಿಯೇ ಡಿ.ಕೆ ರವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಸಷ್ಪಪಡಿಸಿದೆ. ಪ್ರಕರಣ ಡೆದು 20 ತಿಂಗಳ ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಕ್ರವರ್ತಿ ನೇತೃತ್ವದಲ್ಲಿ ಸಿಬಿಐ ತನ್ನ ವರದಿಯನ್ನು ದಕ್ಷಿಣ ಅಸಿಸ್ಟೆಂಟ್ ಕಮಿಷನರ್ ಗೆ ವರದಿ ಸಲ್ಲಿಸಲಿದೆ.

2015 ಮಾರ್ಚ್ 16ರಂದು ಬೆಂಗಳೂರಿನ ಮಡಿವಾಳದಲ್ಲಿರುವ ತಮ್ಮ ಫ್ಲ್ಯಾಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರವಿ ಅವರ ಮೃತದೇಹ ಪತ್ತೆಯಾಗಿತ್ತು. ಸೇವೆಯಲ್ಲಿರುವಾಗಲೇ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು.  ಡಿ.ಕೆ. ರವಿ ಅವರ ನಿಗೂಢ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಬಿಜೆಪಿ ಸೇರಿದಂತೆ ಇತರೆ ರಾಜಕೀಯ ಪಕ್ಷಗಳು ಮತ್ತು ಹಲವು ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಗಳನ್ನು ನಡೆಸಿದ್ದವು.

ಪ್ರತಿಭಟನೆಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಕೊನೆಗೂ ಸಿಓಡಿ ತನಿಖೆಗೆ ಒಪ್ಪಿಸಿತ್ತು. ಆದರೆ ಪ್ರತಿಪಕ್ಷಗಳು ಸಿಬಿಐ ತನಿಖೆಗೆ ವಹಿಸಲೇಬೆಕೆಂದು ಪಟ್ಟು ಹಿಡಿದ ನಂತರ ಸಿಬಿಐ ತನಿಖೆಗೆ ಪ್ರಕರಣವನ್ನು ವಹಿಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿತ್ತು. ಆದರೆ 20 ತಿಂಗಳ ನಂತರ ಸಿಬಿಐ ತನ್ನ ಅಂತಿಮ ವರದಿ ಸಲ್ಲಿಸಿದೆ.

ಸಿಎಂ ಪ್ರತಿಕ್ರಿಯೆ : ಈ ಪ್ರಕರಣದ ವರದಿ ಕುರಿತು ,ಮುಖ್ಯಮಂತ್ರಿ ಸಿದ್ದರಾಮಯ್ಯ ೀಗ ಬಿಜೆಪಯವರಿಗೆ ಸಿಬಿಐ ಯಾರ ಕ್ಐಯಲ್ಲಿದೆ ತಂದು ಗೊತ್ತಾಗಿದೆ ಎಂದು ಸೂಕ್ಷ್ಮವಾಗಿ ತಿರುಗೇಟು ನೀಡಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin