ಕೊಚ್ಚಿಯಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ಈ ಸುದ್ದಿಯನ್ನು ಶೇರ್ ಮಾಡಿ

Airport-02

ಕೊಚ್ಚಿ, ನ.24-ಮಂಗಳೂರಿನಿಂದ ಸೌದಿ ಅರೇಬಿಯಾದ ದಮಾಮ್‍ಗೆ 131 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬೆಂಕಿ ಕಿಡಿಗಳು ಕಾಣಿಸಿಕೊಂಡಿದ್ದರಿಂದ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಬೋಯಿಂಗ್ 737-800 ವಿಮಾನವು ನಿನ್ನೆ ಸಂಜೆ 6.13ರಲ್ಲಿ ದಮಾಮ್‍ಗೆ ಪ್ರಯಾಣ ಆರಂಭಿಸಿತ್ತು. ವಿಮಾನದಲ್ಲಿ ಬೆಂಕಿ ಕಿಡಿಗಳನ್ನು ಗಮನಿಸಿದ ಮಂಗಳೂರು ವಾಯು ಸಂಚಾರ ನಿಯಂತ್ರಣದ ಅಧಿಕಾರಿಗಳು ಫ್ಲೈಟ್ ಕಮ್ಯಾಂಡರ್‍ಗೆ ಈ ವಿಷಯ ತಿಳಿಸಿದರು. ನಂತರ ಸುರಕ್ಷತೆ ದೃಷ್ಟಿಯಿಂದ ವಿಮಾನದ ದಿಕ್ಕನ್ನು ಕೇರಳದ ಕೊಚ್ಚಿಯತ್ತ ಬದಲಿಸಿ ಅಲ್ಲಿನ ವಿಮಾನನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.

ಈ ಘಟನೆಯಿಂದ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಹಾನಿಯಾಗಿಲ್ಲ. ತಪಾಸಣೆ ನಡೆಸಿ ದೋಷವನ್ನು ಸರಿಪಡಿಸಿದ ನಂತರ ವಿಮಾನ ಮುಂದಿನ ಪ್ರಯಾಣ ಬೆಳಸಿತು ಎಂದು ಏರ್ ಇಂಡಿಯಾ ಎಕ್ಸ್‍ಪ್ರೆಸ್‍ನ ವಕ್ತಾರ ತಿಳಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin