ನೋಟಿನ ಗದ್ದಲ : ಲೋಕಸಭೆ ಕಲಾಪ ನಾಳೆಗೆ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

lok--sabha

ನವದೆಹಲಿ, ನ.24-ನೋಟು ಅಮಾನ್ಯಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸತತ ಏಳನೇ ದಿನವಾದ ಇಂದೂ ಸಹ ಪ್ರತಿಪಕ್ಷಗಳಿಂದ ಭಾರೀ ಪ್ರತಿಭಟನೆ ಮತ್ತು ಧರಣಿ ಮುಂದುವರೆಯಿತು. ನಿಲುವಳಿ ಸೂಚನೆಗೆ ವಿರೋಧಪಕ್ಷಗಳು ಬಿಗಿಪಟ್ಟು ಮುಂದುವರಿಸಿದ ಕಾರಣ ಕೋಲಾಹಲದ ವಾತಾವರಣ ಉಂಟಾಗಿ ಲೋಕಸಭೆಯನ್ನು ನಾಳೆಗೆ ಮುಂದೂಡಲಾಯಿತು ಲೋಕಸಭೆಯಲ್ಲಿ ಇಂದು ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳ ಸದಸ್ಯರು ಈ ವಿಷಯ ಚರ್ಚೆಗಾಗಿ ನಿಲುವಳಿ ಸೂಚನೆ ಒತ್ತಾಯಿಸಿದರು. ಆದರೆ ಪ್ರಶ್ನೋತ್ತರ ಕಲಾಪದ ನಂತರ ಇದಕ್ಕೆ ಅವಕಾಶ ನೀಡುವುದಾಗಿ ಸಭಾಧ್ಯಕ್ಷರಾದ ಸುಮಿತ್ರಾ ಮಹಾಜನ್ ಹೇಳಿದರು.

ಆದರೆ ಇದಕ್ಕೆ ಒಪ್ಪದ ಕಾಂಗ್ರೆಸ್, ಎಸ್‍ಪಿ, ಆರ್‍ಜೆಡಿ, ಎನ್‍ಸಿಪಿ, ಟಿಎಂಪಿ, ಎಎಪಿ ಮತ್ತು ಕಮ್ಯೂನಿಷ್ಟ್ ಪಕ್ಷಗಳ ಸದಸ್ಯರೆಲ್ಲರೂ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಸಭಾಧ್ಯಕ್ಷರ ಪೀಠದ ಮುಂದಿರುವ ಸ್ಥಳಕ್ಕೆ ತೆರಳಿ ಧರಣಿ ಮುಂದುವರಿಸಿದರು. ಇನ್ನೊಂದೆಡೆ ಸಮಾಜವಾದಿ ಪಕ್ಷದ ಸದಸ್ಯ ಅಕ್ಷಯ್ ಸಿಂಗ್ ಸದನಲ್ಲಿ ಕಾಗದಗಳನ್ನು ಹರಿದು ತೂರಿದ ಘಟನೆಯೂ ನಡೆಯಿತು.  ಸುಗಮ ಕಲಾಪ ನಡೆಯಲು ಅವಕಾಶ ನೀಡುವಂತೆ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಮನವಿ ಮಾಡಿದರೂ ಗದ್ದಲ-ಕೋಲಾಹಲ ತೀವ್ರಗೊಂಡ ಕಾರಣ ಸಭಾಧ್ಯಕ್ಷರು ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.  ಮತ್ತೆ ಸದನ ಸಮಾವೇಶಗೊಂಡಾಗಲೂ ಇದೇ ಪರಿಸ್ಥಿತಿ ಮುಂದುವರಿದ ಕಾರಣ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin