ಪ್ರೀತ್ಸೆ ಪ್ರೀತ್ಸೆ ಎಂದು ನಗ್ನ ಫೋಟೋ ತೋರಿಸಿ ಬ್ಲಾಕ್‍ಮೇಲ್ ಮಾಡುತ್ತಿದ್ದ ಟೆಕ್ಕಿ ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

Photo-Love--Arrest

ಬೆಂಗಳೂರು,ನ.24– ಸಹಪಾಠಿ ಯುವತಿಯ ಲ್ಯಾಪ್‍ಟಾಪ್‍ನಿಂದ ಕದ್ದಿದ್ದ ಬೆತ್ತಲೆ ಫೋಟೋದೊಂದಿಗೆ ತನ್ನ ಫೋಟೊ ಸೇರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಟೆಕ್ಕಿಯೊಬ್ಬನನ್ನು ಎಚ್‍ಎಎಲ್ ಪೊಲೀಸರು ಬಂಧಿಸಿದ್ದಾರೆ. ಬೋರಂಚಿ ರಾಜು(26) ಬಂಧಿತ ಟೆಕ್ಕಿ.  ಕಳೆದ ಎರಡು ವರ್ಷಗಳಿಂದ ಆರೋಪಿ ರಾಜು ಹೈದರಾಬಾದ್‍ನಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಸಹಪಾಠಿ ಯುವತಿ ಇದೇ ಕಂಪನಿಗೆ ಇಂಟನ್‍ಶಿಪ್‍ಗೆ ಬಂದಿದ್ದರು. ಈ ವೇಳೆ ಇಬ್ಬರು ಮತ್ತೆ ಮುಖಾಮುಖಿಯಾಗಿ ಸ್ನೇಹದಿಂದಿದ್ದರು. ಒಂದು ವರ್ಷದ ಹಿಂದೆ ಈ ಯುವತಿಗೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಕಂಪನಿಯೊಂದರಲ್ಲಿ ನೌಕರಿ ಸಿಕ್ಕಿದ್ದು ಕುಟುಂಬ ಸಮೇತ ಹೈದರಾಬಾದ್‍ನಿಂದ ನಗರಕ್ಕೆ ಬಂದು ನೆಲೆಸಿದ್ದಳು. ಇದರಿಂದ ಹತಾಶನಾದ ಬೋರಂಚಿ ರಾಜು ಆಕೆಗೆ ಎಂಟು ಮೊಬೈಲ್ ಸಿಮ್‍ಗಳಿಂದ ಕರೆ ಮಾಡಿ ವಿವಾಹವಾಗುವಂತೆ ಪೀಡಿಸುತ್ತಿದ್ದನು.

ಆದರೆ ಈತನೇ ಮೊಬೈಲ್ ಕರೆ ಮಾಡುತ್ತಿದ್ದುದು ಈಕೆಗೆ ತಿಳಿದಿರಲಿಲ್ಲ. ಯಾವುದೋ ಅಪರಿಚಿತ ಕರೆ ಎಂದು ತಲೆಕೆಡಿಸಿಕೊಳ್ಳದೆ ಸುಮ್ಮನಿದ್ದಳು. ಇತ್ತೀಚೆಗೆ ಈ ಯುವತಿಗೆ ವಿವಾಹ ನಿಶ್ಚಯವಾಗಿರುವುದು ಆರೋಪಿ ಬೋರಂಚಿ ರಾಜುಗೆ ತಿಳಿದು ಈಕೆಯ ಲ್ಯಾಪ್‍ಟಾಪ್‍ನಿಂದ ಕದ್ದಿದ್ದ ಆಕೆಯದೇ ಬೆತ್ತಲೆ ಫೋಟೊಗಳೊಂದಿಗೆ ತನ್ನ ಫೋಟೊಗಳನ್ನು ಸೇರಿಸಿ ಬ್ಲಾಕ್‍ಮೇಲ್ ಮಾಡಿ ನನ್ನನ್ನು ವಿವಾಹವಾಗದಿದ್ದರೆ ಈ ಫೋಟೊಗಳನ್ನು ನೀನು ಮದುವೆಯಾಗುತ್ತಿರುವ ಯುವಕನಿಗೆ ಕಳುಹಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ.

ಅದರೆ ಯುವತಿ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಯುವತಿಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರಿಂದ ಆರೋಪಿ ಈ ಫೋಟೊಗಳನ್ನು ಮದುವೆಯಾಗುತ್ತಿದ್ದ ಯುವಕನಿಗೂ ಹಾಗೂ ಯುವತಿಯ ಪೋಷಕರಿಗೆ ಮೇಲ್ ಮಾಡಿದ್ದಾನೆ.  ಈ ವಿಷಯವನ್ನು ಯುವತಿಗೆ ತಿಳಿಸಿ ನಂತರ ಎಚ್‍ಎಎಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಎಚ್‍ಎಎಲ್ ಠಾಣೆ ಇನ್‍ಸ್ಪೆಕ್ಟರ್ ಸಾಧಿಕ್ ಪಾಷ ಅವರು ವಿಶೇಷ ತಂಡಗಳನ್ನು ರಚಿಸಿ ಆರೋಪಿ ಪತ್ತೆಗೆ ತನಿಖೆ ಕೈಗೊಂಡಿದ್ದರು.  ಈ ತಂಡ ಆರೋಪಿಯು ಕಳುಹಿಸಿದ್ದ ಮೆಸೆಜ್ ಆಧರಿಸಿ ಹೈದರಾಬಾದ್‍ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ತಾನೊಬ್ಬ ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿ ಎಂದು ಸಹ ನಂಬಿಸಿ ವಂಚನೆ ನಡೆಸಿರುವುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin