ಬಿಜೆಪಿಯವರು ಏನೇ ತಿಪ್ಪರಲಾಗ ಹಾಕಿದರೂ ಮತ್ತೆ ನಾವೇ ಅಧಿಕಾರಕ್ಕೆ ಬರೋದು : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

sIDDARAMIAHA-002

ಬೆಳಗಾವಿ, ನ.24- ಮುಂದಿನ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದ್ದು, ಬಿಜೆಪಿ ತಿಪ್ಪರಲಾಗ ಹೊಡೆದರೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷಗಳನ್ನು ಕಿಚಾಯಿಸಿದ ಪ್ರಸಂಗ ವಿಧಾನ ಪರಿಷತ್‍ನಲ್ಲಿ ನಡೆಯಿತು. ವೇತನ ಪರಿಷ್ಕರಣೆ ಸಂಬಂಧ ಮಾತನಾಡುತ್ತಿದ್ದ ವೇಳೆ ಜೆಡಿಎಸ್‍ನ ಹೊರಟ್ಟಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ವೇತನ ಆಯೋಗ ರಚನೆ ಮಾಡಬೇಡಿ ಎಂದರು. ಇದಕ್ಕೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ, 2017ರ ಬಜೆಟ್ ವೇತನ ಆಯೋಗ ರಚನೆ ಮಾಡುವುದಾಗಿ ಹೇಳಿದ್ದೇನೆ. 2018ರ ಬಜೆಟ್‍ಅನ್ನು ನಾನೇ ಮಂಡಿಸಿ ಚುನಾವಣೆಗೆ ಹೋಗುತ್ತೇನೆ. ಆವಾಗಲೂ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಆತ್ಮವಿಶ್ವಾಸದಿಂದ ನುಡಿದರು.

ಬಿಜೆಪಿಯವರು ಭ್ರಮಾಲೋಕದಲ್ಲಿದ್ದಾರೆ. ಅಧಿಕಾರಕ್ಕೆ ಬಂದೇಬಿಟ್ಟೆವೆಂದು ಭಾವಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲು ಬಿಡುವುದಿಲ್ಲ. ಸದ್ಯ ಪ್ರತಿಪಕ್ಷದವರು ಅಲ್ಲಿಯೇ ಕೂರಬೇಕಾಗುತ್ತದೆ. ನಾವು (ಆಡಳಿತ ಪಕ್ಷ) ಇಲ್ಲಿಯೇ ಕೂರುತ್ತೇವೆಂದು ಹೇಳಿದರು. ಈ ವೇಳೆ ಜೆಡಿಎಸ್‍ನ ಸಂದೇಶ್ ನಾಗರಾಜ್ ಹೋಗಲಿ, ನಾನಾದರೂ ಅಧಿಕಾರಕ್ಕೆ ಬರುತ್ತೇವೆಯೇ ಎಂದು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದಾಗ ಯಾರಾದರೂ ನಿಮ್ಮನ್ನು ಒಪ್ಪಿಕೊಂಡು ಅಧಿಕಾರಕ್ಕೆ ತರಲು ಸಾಧ್ಯವೇ ಎಂದು ಟೀಕಿಸಿದರು.  ಆಗ ಪ್ರತಿಪಕ್ಷದ ನಾಯಕ ಈಶ್ವರಪ್ಪ ಮಾತನಾಡಿ, ಕೆಲವರು ಈಗಲೇ ತಿರುಕನ ಕನಸು ಕಾಣುತ್ತಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರಮೋದಿ ಕೊಲೆಗಡುಕ, ಕೋಮುವಾದಿ ಎಂದು ಅಬ್ಬರಿಸಿದ್ದ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿ ಹೋಯಿತು. ಕರ್ನಾಟಕದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳಿದರು.

ಜನ ಯಾವುದೋ ಕಾರಣಕ್ಕೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಿರಬಹುದು. ಮುಂದಿನ ಚುನಾವಣೆ ಬಂದಾಗ ನಿಮ್ಮ ಬೇಳೆಕಾಳು ಏನೆಂಬುದು ತಿಳಿಯುತ್ತದೆ ಎಂದು ಮುಖ್ಯಮಂತ್ರಿ ಮತ್ತೆ ತಿರುಗೇಟು ನೀಡಿದರು. ನಾನು ಉಪಮುಖ್ಯಮಂತ್ರಿಯಾಗಿದ್ದ ವೇಳೆಯೂ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದ್ದೆ. ಇದ್ದಕ್ಕಿದ್ದಂತೆ ಟ್ವೆಂಟಿ-ಟ್ವೆಂಟಿ ಸರ್ಕಾರ ಬಂದಾಗ ಇದಕ್ಕೆ ವಿಳಂಬವಾಯಿತು.  ಕುಮಾರಸ್ವಾಮಿ 20 ತಿಂಗಳ ಮುಖ್ಯಮಂತ್ರಿಯಾಗಿ ಇನ್ನೊಬ್ಬರು ಒಂದು ವಾರಕ್ಕೆ ರನ್‍ಔಟ್ ಆಗಿದ್ದು ಇತಿಹಾಸ ಎಂದು ಬಿಜೆಪಿಯನ್ನು ಮತ್ತೆ ಕಿಚಾಯಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin