ನಿಷೇಧಿತ 500/1000 ಮುಖಬೆಲೆಯ ಹರಿದ ಸಾವಿರಾರು ನೋಟುಗಳು ಬೀದಿಯಲ್ಲಿ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Notes-Arasikere

ಅರಸೀಕೆರೆ, ನ.24- ಐದುನೂರು ಹಾಗೂ ಸಾವಿರ ಮುಖಬೆಲೆಯ ನೋಟುಗಳನ್ನು ಕೇಂದ್ರ ಸರಕಾರ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ನಗರದ ರಂಗೇಗೌಡ ಬೀದಿಯ ಜೈನ ಮಂದಿರದ ಸಮೀಪ ಐನೂರು ಮುಖಬೆಲೆಯ ಸಾವಿರಾರು ನೋಟನ್ನು ಹರಿದು ಎಸೆದಿರುವುದನ್ನು ಕಂಡ ದಾರಿಹೋಕರು ಅಚ್ಚರಿಗೊಂಡಿದ್ದಾರೆ. ಈ ಸುದ್ದಿ ನಗರದಾದ್ಯಂತ ಹಬ್ಬಿದ್ದರಿಂದ ತಂಡೋಪ-ತಂಡವಾಗಿ ರಂಗೇಗೌಡರ ಬೀದಿಗೆ ಧಾವಿಸಿ ಬಂದ ಸಾರ್ವಜನಿಕರು ತಲೆಗೊಂದು ಮಾತನಾಡುವ ಮೂಲಕ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಿದ್ದು ಕಂಡುಬಂತು.

ಗಾಳಿಸುದ್ದಿ:
ಈ ನಡುವೆ ಹಾಸನ ರಸ್ತೆಯಲ್ಲಿ ಒಂದು ಚೀಲದಷ್ಟು ಐನೂರು-ಸಾವಿರ ಮುಖಬೆಲೆಯ ನೋಟನ್ನು ಸುಟ್ಟು ಹಾಕಿದ್ದಾರೆ. ಅಲ್ಲೆಲ್ಲೋ ಗಾಡಿಯಲ್ಲಿ ಸಾಗಿಸುತ್ತಿದ್ದ ಕೋಟ್ಯಾಂತರ ರೂಪಾಯಿ ನಿಷೇಧಿತ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರಂತೆ ಮತ್ತೇ ಎಲ್ಲೋ ನೋಟುಗಳನ್ನು ಎಸೆದು ಹೋಗಿದ್ದಾರಂತೆ ಹೀಗೇ ದಿನನಿತ್ಯ ಗಾಳಿ ಸುದ್ದಿಗಳು ಸಹ ನಗರದಲ್ಲಿ ಹರಿದಾಡುತ್ತಿದ್ದು, ಇದು ಸಹ ಚರ್ಚೆಗೆ ಗ್ರಾಸವಾಗಿದೆ. ಐನೂರು ನೋಟುಗಳನ್ನು ಸರಕಾರ ನಿಷೇಧಿಸಿದ್ದರು ಡಿ.30ರವರೆಗೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಬದಲಾಯಿಸಿಕೊಳ್ಳಲು ಅವಕಾಶವಿದ್ದರೂ, ಈ ರೀತಿ ನೋಟು ಹರಿದು ಹಾಕಿರುವುದು ಜನರ ಆಶ್ಚರ್ಯಕ್ಕೆ ಕಾರಣವಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin