ಸರಗಳ್ಳರು,ಮನೆಗಳ್ಳರಿದ್ದಾರೆ ಪೊಲೀಸರಿಂದ ಜನಜಾಗೃತಿ

ಈ ಸುದ್ದಿಯನ್ನು ಶೇರ್ ಮಾಡಿ

7

ಬಾಗಲಕೋಟೆ,ನ.24- ಇತ್ತೀಚಿನ ದಿನಗಳಲ್ಲಿ ಸರಗಳ್ಳತನ ಹಾಗೂ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು ಸಾರ್ವಜನಿಕರು ಎಚ್ಚೆತ್ತುಕೊಳ್ಳುವಂತೆ ಪೊಲೀಸರು ಜನಜಾಗೃತಿ ಕಾರ್ಯಕ್ರಮ ಮಾಡಿದರು. ಒಂಟಿ ಮಹಿಳೆಯರು ಜಾಗೃತಿಯಿಂದ ಸಂಚರಿಸಬೇಕು. ಬಂಗಾರದ ಆಭರಣ ಗಳನ್ನು ಕಾಣುವಂತೆ ಹಾಕಿಕೊಳ್ಳ ಬಾರದು. ರಾತ್ರಿ ಕತ್ತಲಾದಾಗ ಒಬ್ಬಂಟಿಗರಾಗಿ ಓಡಾಡಬಾರದು. ಹಿಂಬಾಲಕ ದ್ವಿಚಕ್ರ ವಾಹನಗಳ ಬಗ್ಗೆ ನಿಗಾ ಇರಬೇಕು. ಸಂಶಯಾಸ್ಪದ ವ್ಯಕ್ತಿ ಕಂಡು ಬಂದರೆ ಸ್ಥಳಿಯ ಪೊಲೀಸ ಠಾಣೆಗೆ ಕರೆ ಮಾಡುವ ಮೂಲಕ ದೂರು ಸಲ್ಲಿಸಬೇಕು. ವಾಹನಗಳ ಬಗ್ಗೆ ಅಥವಾ ವಾಹನದ ಸಂಖ್ಯೆ ಮತ್ತು ಅದರ ಮಾದರಿ ಎನಾದರೂ ವಿಶೇಷ ಲಕ್ಷಣಗಳು ಕಂಡು ಬಂದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸರಗಳ್ಳತನ ಹಾಗೂ ಮನೆಗಳ್ಳತನ ಹೆಚ್ಚಾಗಿ ಪ್ರಕರಣಗಳು ದಾಖಲಾಗಿರುವುದ ರಿಂದ ಜಿಲ್ಲಾ ಸಾರ್ವಜನಿಕರಲ್ಲಿ ಪೊಲಿಸ್ ದಳ ಜನಜಾಗೃತಿ ಮೂಡಿಸಿತು.

ಸಂತ್ರಸ್ಥ ರೈತರಿಗೆ ಏಕರೂಪದ ಪರಿಹಾರ
ಬೆಳಗಾವಿ,ನ.23- ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಹೊಸ ಭೂಸ್ವಾಧೀನ ಕಾಯ್ದೆಯಂತೆ ಪರಿಹಾರ ನೀಡಲಾಗುವುದು. ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಹಲವು ಸಭೈಗಳನ್ನು ನಡೆಸಿದ್ದು, ಏಕರೂಪದ ಪರಿಹಾರ ಒದಗಿಸುವ ಕುರಿತಂತೆ ಶೀಘ್ರವೇ ಘೋಷಣೆ ಮಾಡಲಾಗುವುದೆಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿದರು. ನಿನ್ನೆ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ನಿರಾಣಿ ಹನುಮಂತ ರುದ್ರಪ್ಪ ಇವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ಕೃಷ್ಣ ಮೇಲ್ದಂಡೆ ಯೋಜನೆ 3ನೇ ಹಂತದ ಯೋಜನೆಗಳ ಅನುಷ್ಠಾನಕ್ಕಾಗಿ 1.34.107 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗುವುದು ಎಂದು ಅಂದಾಜಿಸಲಾಗಿದೆ. ಬಾಗಲಕೋಟೆಯ 20 ಗ್ರಾಮಗಳು ಮತ್ತು ಬಾಗಲಕೋಟೆ ಪಟ್ಟಣ ಪ್ರದೇಶದ 10 ವಾರ್ಡ್‍ಗಳ ಪೈಕಿ 25661 ಕಟ್ಟಡಗಳು ಈ ಯೋಜನೆಯ ಅನುಷ್ಠಾಕ್ಕೆ ವಶಪಡಿಸಿಕೊಳ್ಳಬೇಕಾಗಿದೆ. ನೂತನ ಭೂಸ್ವಾಧೀನ ಕಾಯ್ದೆಯ 2013 ರ ಶೆಡ್ಯೂಲ್ 1 ರ ಪ್ರಕಾರ ಕಲಂ 26, 27, 28 ಮತ್ತು 29 ರಂತೆ ಬಾಧಿತ ಗ್ರಾಮಗಳ ಜಮೀನುಗಳು ಮತ್ತು ನಿವೇಶನಗಳಿಗೆ ಪರಿಹಾರ ನೀಡಲಾಗುವುದು.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin